ಜೋರ್ಡಾನ್ರ ಬಹುಮಾನ ಮೊತ್ತ 10 ಸಾವಿರ ಕೋಟಿ!
Team Udayavani, Dec 15, 2017, 7:35 AM IST
ನ್ಯೂಯಾರ್ಕ್: ಬಾಸ್ಕೆಟ್ಬಾಲ್ ದಂತಕಥೆ ಅಮೆರಿಕದ ಮೈಕೆಲ್ ಜೋರ್ಡಾನ್ ವಿಶ್ವದಲ್ಲೇ ಅತಿಹೆಚ್ಚು ಬಹುಮಾನ ಮೊತ್ತ ಗಳಿಸಿದ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ. ಬಹುಮಾನ ಮೊತ್ತವಾಗಿ ಅವರು ಗಳಿಸಿದ ಹಣ 10 ಸಾವಿರ ಕೋಟಿ ರೂ. ಎಂದು ಜನಪ್ರಿಯ ನಿಯತಕಾಲಿಕೆ ಫೋಬ್ಸ್ì ಪ್ರಕಟಿಸಿದೆ.
ಇದರಲ್ಲಿ ಶೇ.90ರಷ್ಟು ಅಮೆರಿಕದ ಬಾಸ್ಕೆಟ್ಬಾಲ್ ತಂಡ ಚಾರ್ಲೊಟ್ ಹಾರ್ನೆಟ್ಸ್ ತಂಡದಿಂದ ಬಂದಿದೆ. ಉಳಿದದ್ದೆಲ್ಲ ದೀರ್ಘಕಾಲಿಕ ಒಪ್ಪಂದ ಪಡೆದಿರುವ ವಿವಿಧ ಸಂಸ್ಥೆಗಳಿಂದ ಬಂದಿದೆ. ಖ್ಯಾತ ಗಾಲ್ಫ್ ಆಟಗಾರ ಟೈಗರ್ವುಡ್ಸ್ 2ನೇ ಸ್ಥಾನ, ಅಮೆರಿಕದ ಗಾಲ#ರ್ 3ನೇ ಸ್ಥಾನ ಹಾಗೂ ನಿವೃತ ಗಾಲ್ಫ್ ಆಟಗಾರ ಜ್ಯಾಕ್ ನಿಕುಲಸ್ 4ನೇ ಹಾಗೂ ಖ್ಯಾತ ಫಾರ್ಮುಲಾ ಚಾಲಕ ಮೈಕೆಲ್ ಶುಮಾಕರ್ 5ನೇ ಸ್ಥಾನದಲ್ಲಿದ್ದಾರೆ.