ಮಿಕ್ಸೆಡ್ ಡಬಲ್ಸ್: ಸಾನಿಯಾ, ಬೋಪಣ್ಣ ಮುನ್ನಡೆ
Team Udayavani, Jan 22, 2017, 9:57 AM IST
ಮೆಲ್ಬರ್ನ್: ಭಾರತದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಅವರು ತಮ್ಮ ಎದುರಾಳಿಯೆದುರು ಗೆಲುವು ಸಾಧಿಸಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದ ಮಿಕ್ಸೆಡ್ ಡಬಲ್ಸ್ನಲ್ಲಿ ದ್ವಿತೀಯ ಸುತ್ತಿಗೇರಿದ್ದಾರೆ.
ಕಠಿನ ಹೋರಾಟದಲ್ಲಿ ಬೋಪಣ್ಣ ಮತ್ತು ಅವರ ಕೆನಡದ ಜತೆಗಾರ್ತಿ ಗ್ಯಾಬ್ರಿಯೆಲಾ ದಾಬ್ರೋವಿಸ್ಕಿ ಅವರು ಮೈಕಲ್ ವೀನಸ್ ಮತ್ತು ಕ್ಯಾತರಿನಾ ಸ್ರೆಬೊಟ್ನಿಕ್ ಅವರನ್ನು 6-4, 6-7, 10-7 ಸೆಟ್ಗಳಿಂದ ಸೋಲಿಸಿ ಮುನ್ನಡೆದರು. ಸ್ವಲ್ಪ ಹೊತ್ತಿನ ಬಳಿಕ ನಡೆದ ಇನ್ನೊಂದು ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಸಾನಿಯಾ ಮಿರ್ಜಾ ಮತ್ತು ಕ್ರೊವೇಶಿಯದ ಇವಾನ್ ಡೊಡಿಗ್ ಅವರು ಹಾಲಿ ಯುಎಸ್ ಓಪನ್ ಚಾಂಪಿಯನ್ ಲಾರಾ ಸೀಗೆಮುಂಡ್ ಮತ್ತು ಮೇಟ್ ಪಾವಿಕ್ ಅವರನ್ನು 7-5, 6-4 ಸೆಟ್ಗಳಿಂದ ಸೋಲಿಸಿದರು.
ಸಾನಿಯಾ ಮತ್ತು ಬೋಪಣ್ಣ ಅವರು ದ್ವಿತೀಯ ಸುತ್ತಿನಲ್ಲೂ ಜಯಭೇರಿ ಬಾರಿಸಿ ಮುನ್ನಡೆದರೆ ಕ್ವಾರ್ಟರ್ಫೈನಲ್ನಲ್ಲಿ ಪರಸ್ಪರ ಎದುರಾಗುವ ಸಾಧ್ಯತೆಯಿದೆ. ಬೋಪಣ್ಣ ಮತ್ತು ಪೇಸ್ ಸೋಲುವು ದರೊಂದಿಗೆ ಪುರುಷರ ಡಬಲ್ಸ್ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ವನಿತೆಯರ ಡಬಲ್ಸ್ನಲ್ಲಿ ಸಾನಿಯಾ ಮಿರ್ಜಾ ಇನ್ನೂ ಕಣದಲ್ಲಿದ್ದಾರೆ. ಜೆಕ್ ಗಣರಾಜ್ಯದ ಬಾಬೊìರಾ ಸ್ಟ್ರೈಕೋವಾ ಜತೆಗೂಡಿ ಆಡುತ್ತಿರುವ ಸಾನಿಯಾ ದ್ವಿತೀಯ ಸುತ್ತಿನಲ್ಲಿ ಸಮಂತಾ ಸ್ಟೋಸರ್ ಮತ್ತು ಶುಯಿ ಜಾಂಗ್ ಅವರನ್ನು ಸೋಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ