NADA ದಿಂದ ದ್ರವ್ಯ ಪರೀಕ್ಷೆ: 900 ಕ್ಕಿಂತ ಅಧಿಕ ಸ್ಯಾಂಪಲ್ ಸಂಗ್ರಹ
Team Udayavani, Aug 10, 2023, 11:37 PM IST
ಹೊಸದಿಲ್ಲಿ: ಮುಂಬರುವ ಏಷ್ಯನ್ ಗೇಮ್ಸ್ಗಿಂತ ಮೊದಲು ಜೂನ್ ಮತ್ತು ಜುಲೈ ತಿಂಗಳಲ್ಲಿ ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ (ನಾಡಾ) ವಿವಿಧ ಕ್ರೀಡಾ ವಿಭಾಗಗಳ ಕ್ರೀಡಾಪಟುಗಳಿಂದ 900ಕ್ಕೂ ಹೆಚ್ಚಿನ ದ್ರವ್ಯ ಮಾದರಿಗಳನ್ನು ಸಂಗ್ರಹಿಸಿದೆ. ಟ್ರ್ಯಾಕ್ ಆ್ಯನ್x ಫೀಲ್ಡ್ ಕ್ರೀಡೆಯಿಂದ ಸುಮಾರು 199 ಸ್ಯಾಂಪಲ್ಗಳನ್ನು ಸಂಗ್ರಹ ಮಾಡಲಾಗಿದೆ.
ನಾಡಾವು ಗರಿಷ್ಠ ಮೂತ್ರದ ಮತ್ತು ಕೆಲವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದೆ. ಒಟ್ಟಾರೆ 914 ಕ್ರೀಡಾಪಟುಗಳ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ನಾಡಾ ತಿಳಿಸಿದೆ. ಕಳೆದ ಎರಡು ತಿಂಗಳಲ್ಲಿ ಬಾಕ್ಸಿಂಗ್ (71), ಈಜು (65), ವೇಟ್ಲಿಫ್ಟಿಂಗ್ (56), ಸೈಕ್ಲಿಂಗ್ (55), ಕಬಡ್ಡಿ (52), ಕುಸ್ತಿ (46) ಮತ್ತು ಶೂಟಿಂಗ್ ಕ್ರೀಡೆಯಿಂದ 43 ಕ್ರೀಡಾಪಟುಗಳ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ.ದೇಶದಲ್ಲಿ ತರಬೇತಿ ಪಡೆಯುತ್ತಿರುವ ಅಥವಾ ದೇಶೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದ ಹೆಚ್ಚಿನೆಲ್ಲ ಕ್ರೀಡಾಪಟುಗಳ ಸ್ಯಾಂಪಲನ್ನು ಸಂಗ್ರಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ