ಬಾಂಗ್ಲಾ ಟೆಸ್ಟ್ ತಂಡಕ್ಕೆ ಮುಸ್ತಫಿಜುರ್ ವಾಪಸ್
Team Udayavani, Feb 22, 2017, 12:31 PM IST
ಢಾಕಾ: ಗಾಯಾಳಾಗಿ ಹೊರಗುಳಿದಿದ್ದ ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಚೇತರಿಸಿಕೊಂಡು ಟೆಸ್ಟ್ ತಂಡವನ್ನು ಸೇರಿಕೊಂಡಿದ್ದಾರೆ. ಶ್ರೀಲಂಕಾದಲ್ಲಿ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಮುಸ್ತಫಿಜುರ್ ಅವರನ್ನು ಆಯ್ಕೆ ಮಾಡಲಾಗಿದೆ.
ಮುಸ್ತಫಿಜುರ್ಗಾಗಿ ಜಾಗ ಬಿಟ್ಟವರು ಶಫಿಯುಲ್ ಇಸ್ಲಾಂ. ಭಾರತ ವಿರುದ್ಧ ಹೈದರಾಬಾದ್ನಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದ ವೇಳೆ ಶಫಿಯುಲ್ ತಂಡದಲ್ಲಿದ್ದರು. ಈ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದ ವೇಳೆ ಗಾಯಾಳಾಗಿದ್ದ ಆರಂಭಕಾರ ಇಮ್ರುಲ್ ಕಯೇಸ್ ಇನ್ನೂ ವಿಶ್ರಾಂತಿಯಲ್ಲಿದ್ದಾರೆ. ತಂಡಕ್ಕೆ ಮರಳಿದ ಮತ್ತೂಬ್ಬ ಆಟಗಾರನೆಂದರೆ ಪೇಸ್ ಬೌಲರ್ ರುಬೆಲ್ ಹೊಸೇನ್.
ಸರಣಿಯ 2 ಟೆಸ್ಟ್ ಪಂದ್ಯಗಳು ಗಾಲೆ (ಮಾ. 7-11) ಮತ್ತು ಕೊಲಂಬೋದಲ್ಲಿ (ಮಾ. 15-19) ನಡೆಯಲಿವೆ. ಈ ಸರಣಿಯ 2ನೇ ಟೆಸ್ಟ್ ಬಾಂಗ್ಲಾ ಪಾಲಿನ 100ನೇ ಟೆಸ್ಟ್ ಎಂಬುದು ವಿಶೇಷ.
ಬಾಂಗ್ಲಾದೇಶ ತಂಡ: ಮುಶ್ಫಿಕರ್ ರಹೀಂ (ನಾಯಕ), ತಮಿಮ್ ಇಕ್ಬಾಲ್, ಲಿಟನ್ ದಾಸ್, ಸೌಮ್ಯ ಸರ್ಕಾರ್, ಮೊಮಿನುಲ್ ಹಕ್, ಶಕಿಬ್ ಅಲ್ ಹಸನ್, ಮಹಮದುಲ್ಲ, ಶಬ್ಬೀರ್ ರೆಹಮಾನ್, ಮುಸ್ತಫಿಜುರ್ ರೆಹಮಾನ್, ತೈಜುಲ್ ಇಸ್ಲಾಂ, ಮೆಹೆದಿ ಹಸನ್, ತಸ್ಕಿನ್ ಅಹ್ಮದ್, ಮೊಸದೆಕ್ ಹೊಸೇನ್, ಕಮ್ರುಲ್ ಇಸ್ಲಾಂ ರಬ್ಬಿ, ಸುಬಾಶಿಷ್ ರಾಯ್, ರುಬೆಲ್ ಹೊಸೇನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ