ಅಫ್ಘಾನಿಸ್ಥಾನ ವಿರುದ್ಧ ಏಕೈಕ ಟೆಸ್ಟ್ :ಲಂಕಾ ತಂಡದಲ್ಲಿ ಹೊಸಬರು
Team Udayavani, Feb 1, 2024, 12:37 AM IST
ಕೊಲಂಬೊ: ಪ್ರವಾಸಿ ಅಫ್ಘಾನಿಸ್ಥಾನ ವಿರುದ್ಧ ಆಡಲಾಗುವ ಏಕೈಕ ಟೆಸ್ಟ್ ಪಂದ್ಯಕ್ಕೆ ಶ್ರೀಲಂಕಾ ತಂಡ ಪ್ರಕಟಗೊಂಡಿದ್ದು, ಮೂವರು ಹೊಸಬರನ್ನು ಸೇರಿಸಿಕೊಳ್ಳಲಾಗಿದೆ.
ಇವರೆಂದರೆ ವಿಕೆಟ್ ಕೀಪರ್ ಲಹಿರು ಉದಾರ, ವೇಗಿಗಳಾದ ಚಮಿಕ ಗುಣಶೇಖರ ಮತ್ತು ಮಿಲನ್ ರತ್ನಾಯಕೆ. ಇವರಲ್ಲಿ ಉದಾರ ಮತ್ತು ಗುಣ ಶೇಖರ ಕ್ರಮವಾಗಿ ಟಿ20 ಮತ್ತು ಏಕದಿನ ಪಂದ್ಯಗಳನ್ನಾಡಿದ್ದಾರೆ. ಆದರೆ ರತ್ನಾಯಕೆ ಇನ್ನಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಬೇಕಿದೆ. ಧನಂಜಯ ಡಿ ಸಿಲ್ವ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಲಂಕಾ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. ಇಲ್ಲಿಯ ತನಕ ದಿಮುತ್ ಕರುಣಾರತ್ನೆ ನಾಯಕರಾಗಿದ್ದರು.