Pakistan Cricket Team: ಕೋಚ್ ಆಫರ್ ತಿರಸ್ಕರಿಸಿದ ವಾಟ್ಸನ್, ಸಮ್ಮಿ
Team Udayavani, Mar 18, 2024, 6:10 AM IST
ಕರಾಚಿ: ತನ್ನ ಕ್ರಿಕೆಟ್ ತಂಡಕ್ಕೆ ಮತ್ತೆ ನೂತನ ಕೋಚ್ ಒಬ್ಬರನ್ನು ಹುಡುಕಬೇಕಾದ ಸಂಕಟ ಪಾಕಿಸ್ಥಾನ ಕ್ರಿಕೆಟ್ ಮಂಡಳಿಯದ್ದಾಗಿದೆ. ಸಂಭಾವ್ಯರ ಯಾದಿಯಲ್ಲಿದ್ದ ಆಸ್ಟ್ರೇಲಿಯದ ಶೇನ್ ವಾಟ್ಸನ್ ಮತ್ತು ವೆಸ್ಟ್ ಇಂಡೀಸ್ನ ಡ್ಯಾರಿಲ್ ಸಮ್ಮಿ ಇಬ್ಬರೂ ಪಿಸಿಬಿ ಆಫರ್ ತಿರಸ್ಕರಿಸಿದ್ದೇ ಇದಕ್ಕೆ ಕಾರಣ.
ಇವರಲ್ಲಿ ಡ್ಯಾರನ್ ಸಮ್ಮಿ ಹಿಂದೆ ಸರಿದಿರುವುದಕ್ಕೆ ಕಾರಣ ನೀಡಿದ್ದಾರೆ. ತಾನು ಈಗಾಗಲೇ ವೆಸ್ಟ್ ಇಂಡೀಸ್ನ ಸೀಮಿತ ಓವರ್ಗಳ ಕ್ರಿಕೆಟ್ ತಂಡಗಳ ಪ್ರಧಾನ ಕೋಚ್ ಆಗಿ ನೇಮಕಗೊಳ್ಳಲಿದ್ದು, ಇದಕ್ಕಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಜತೆ ಒಪ್ಪಂದವನ್ನೂ ಮಾಡಿಕೊಂಡಾಗಿದೆ ಎಂದಿದ್ದಾರೆ.
ವಾಟ್ಸನ್ ನಿಗೂಢ ನಡೆ
ಆದರೆ ಶೇನ್ ವಾಟ್ಸನ್ ನಡೆ ನಿಗೂಢವಾಗಿದೆ. ಇವರಿಗೆ ಪಿಸಿಬಿ ದಾಖಲೆ 2 ಮಿಲಿಯನ್ ಡಾಲರ್ (16.58 ಕೋಟಿ ರೂ.) ವೇತನ ನೀಡುವುದಕ್ಕೆ ಸಮ್ಮತಿಸಿತ್ತು. ಇದು ತಿಂಗಳಿಗೆ 4.6 ಕೋಟಿ ರೂ.ಗಳಷ್ಟಾಗುತ್ತಿತ್ತು. ಆದರೂ ವಾಟ್ಸನ್ ಹಿಂದೆ ಸರಿದು ಶನಿವಾರ ರಾತ್ರಿ ತವರಿಗೆ ವಾಪಸಾಗಿದ್ದಾರೆ. ಇದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದೆ.
ಕೋಚ್ ಒಡಂಬಡಿಕೆಗೆ ಸಂಬಂಧಪಟ್ಟ ಕೆಲವು ಆಂತರಿಕ ವಿಷಯಗಳು ಪಾಕಿಸ್ಥಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಗೊಂಡದ್ದು ವಾಟ್ಸನ್ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ