ಟಿ20: ಮಾರ್ಗನ್‌ ಆಟಕ್ಕೆ ಮಣಿದ ಪಾಕ್‌

Team Udayavani, May 7, 2019, 6:00 AM IST

England

ಕಾರ್ಡಿಫ್: ಪ್ರವಾಸಿ ಪಾಕಿಸ್ಥಾನ ವಿರುದ್ಧದ ಏಕೈಕ ಟಿ20 ಪಂದ್ಯವನ್ನು ಇಂಗ್ಲೆಂಡ್‌ 7 ವಿಕೆಟ್‌ಗಳಿಂದ ಗೆದ್ದಿದೆ.ರವಿವಾರ ರಾತ್ರಿ ಸೋಫಿಯಾ ಗಾರ್ಡನ್‌ನಲ್ಲಿ ನಡೆದ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 6 ವಿಕೆಟಿಗೆ 173 ರನ್ನುಗಳ ದೊಡ್ಡ ಮೊತ್ತ ದಾಖಲಿಸಿದರೂ ಇಂಗ್ಲೆಂಡ್‌ ಇದನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಯಿತು. 19.2 ಓವರ್‌ಗಳಲ್ಲಿ 3 ವಿಕೆಟಿಗೆ 175 ರನ್‌ ಹೊಡೆದು ಜಯಭೇರಿ ಮೊಳಗಿಸಿತು. ನಾಯಕ ಮಾರ್ಗನ್‌ 29 ಎಸೆತಗಳಿಂದ ಅಜೇಯ 57 ರನ್‌ (5 ಬೌಂಡರಿ, 3 ಸಿಕ್ಸರ್‌) ಬಾರಿಸಿ ಗೆಲುವಿನ ರೂವಾರಿ ಎನಿಸಿದರು.

ಮಾರ್ಗನ್‌-ಜೋ ಡೆನ್ಲಿ ಜೋಡಿ ಮುರಿಯದ 4ನೇ ವಿಕೆಟಿಗೆ 3.5 ಓವರ್‌ಗಳಿಂದ 44 ರನ್‌ ಪೇರಿಸಿ ಪಾಕ್‌ ಲೆಕ್ಕಾಚಾರ ತಲೆಕೆಳಗಾಗಿಸಿದರು.

ಜೋ ರೂಟ್‌ (42 ಎಸೆತ, 47 ರನ್‌), ಜೇಮ್ಸ್‌ ವಿನ್ಸ್‌ (27 ಎಸೆತ, 36 ರನ್‌) ಇಂಗ್ಲೆಂಡ್‌ ಸರದಿಯ ಇತರ ಪ್ರಮುಖ ಸ್ಕೋರರ್.

ಬಾಬರ್‌, ಸೊಹೈಲ್‌ ಫಿಫ್ಟಿ
ಪಾಕಿಸ್ಥಾನ ಸರದಿಯಲ್ಲಿ ಬಾಬರ್‌ ಆಜಂ ಮತ್ತು ಹ್ಯಾರಿಸ್‌ ಸೊಹೈಲ್‌ ಅವರಿಂದ ಅರ್ಧ ಶತಕ ದಾಖಲಾಯಿತು. ಆಜಂ 42 ಎಸೆತ ಎದುರಿಸಿ 65 ರನ್‌ (5 ಬೌಂಡರಿ, 3 ಸಿಕ್ಸರ್‌), ಸೊಹೈಲ್‌ 36 ಎಸೆತಗಳಿಂದ 50 ರನ್‌ (5 ಬೌಂಡರಿ, 1 ಸಿಕ್ಸರ್‌) ಬಾರಿಸಿದರು.

ಇತ್ತಂಡಗಳಿನ್ನು 5 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಂಡು, ವಿಶ್ವಕಪ್‌ಗೆ ಭರ್ಜರಿ ತಾಲೀಮು ನಡೆಸಲಿವೆ. ಮೊದಲ ಪಂದ್ಯ ಮೇ 8ರಂದು ಓವಲ್‌ನಲ್ಲಿ ಸಾಗಲಿದೆ.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-6 ವಿಕೆಟಿಗೆ 173 (ಆಜಂ 65, ಸೊಹೈಲ್‌ 50, ಆರ್ಚರ್‌ 29ಕ್ಕೆ 2). ಇಂಗ್ಲೆಂಡ್‌-19.2 ಓವರ್‌ಗಳಲ್ಲಿ 3 ವಿಕೆಟಿಗೆ 175 (ಮಾರ್ಗನ್‌ ಔಟಾಗದೆ 57, ರೂಟ್‌ 47, ವಿನ್ಸ್‌ 36, ಇಮಾದ್‌ 24ಕ್ಕೆ 1).
ಪಂದ್ಯಶ್ರೇಷ್ಠ: ಇಯಾನ್‌ ಮಾರ್ಗನ್‌.

ಟಾಪ್ ನ್ಯೂಸ್

mb-patil

ಕಾನೂನು ಎಲ್ಲರಿಗೂ ಒಂದೇ, ಪ್ರಭಾವಿಗಳಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ: ಎಂ.ಬಿ.ಪಾಟೀಲ್

Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

ಒಂದಕ್ಕಿಂತ ಹೆಚ್ಚು SIM ಕಾರ್ಡ್‌ ಹೊಂದಿದ್ದರೆ ಶುಲ್ಕ ವಿಧಿಸಲಾಗುತ್ತದೆಯೇ? TRAI ಹೇಳಿದ್ದೇನು

ಒಂದಕ್ಕಿಂತ ಹೆಚ್ಚು SIM ಕಾರ್ಡ್‌ ಹೊಂದಿದ್ದರೆ ಶುಲ್ಕ ವಿಧಿಸಲಾಗುತ್ತದೆಯೇ? TRAI ಹೇಳಿದ್ದೇನು

RSS

RSS; ಭಾಗ್ವತ್ ‘ನಿಜವಾದ ಸೇವಕ’ ಹೇಳಿಕೆ ಮೋದಿ ಉದ್ದೇಶಿಸಿ ನೀಡಿದ್ದಲ್ಲ: ಸಂಘ ಸ್ಪಷ್ಟನೆ

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

NDA ಸರ್ಕಾರದ ತಳಪಾಯವೇ ಸರಿಯಿಲ್ಲ ಯಾವಾಗ ಬೇಕಾದರೂ ಬೀಳಬಹುದು… ಮಲ್ಲಿಕಾರ್ಜುನ ಖರ್ಗೆ

NDA ಸರ್ಕಾರದ ತಳಪಾಯವೇ ಸರಿಯಿಲ್ಲ ಯಾವಾಗ ಬೇಕಾದರೂ ಬೀಳಬಹುದು… ಮಲ್ಲಿಕಾರ್ಜುನ ಖರ್ಗೆ

T20 World Cup: ಬಲಿಷ್ಠ ಹರಿಣಗಳಿಗೆ ಸೋಲಿನ ಭೀತಿ ತೋರಿಸಿ ಗೆಲುವು ಕೈಚೆಲ್ಲಿದ ನೇಪಾಳ

T20 World Cup: ಬಲಿಷ್ಠ ಹರಿಣಗಳಿಗೆ ಸೋಲಿನ ಭೀತಿ ತೋರಿಸಿ ಗೆಲುವು ಕೈಚೆಲ್ಲಿದ ನೇಪಾಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup: ಬಲಿಷ್ಠ ಹರಿಣಗಳಿಗೆ ಸೋಲಿನ ಭೀತಿ ತೋರಿಸಿ ಗೆಲುವು ಕೈಚೆಲ್ಲಿದ ನೇಪಾಳ

T20 World Cup: ಬಲಿಷ್ಠ ಹರಿಣಗಳಿಗೆ ಸೋಲಿನ ಭೀತಿ ತೋರಿಸಿ ಗೆಲುವು ಕೈಚೆಲ್ಲಿದ ನೇಪಾಳ

1-ct

T20 WC; ಕೆನಡಾ ಎದುರಾಳಿ, ಮಳೆ ಭೀತಿ: ಭಾರತಕ್ಕೆ ಪ್ರಾಯೋಗಿಕ ಪಂದ್ಯ

1-a-sasa

ಬಿಲ್ಗಾರಿಕೆ: ಉಕ್ರೇನ್‌ ಎದುರು ಭಾರತಕ್ಕೆ 3-5 ಸೋಲು

1-dsadsadsa

Paris Olympics ಕಾರಣ ವಿಂಬಲ್ಡನ್‌ಗೆ ನಡಾಲ್‌ ಗೈರು

two team India players will return home after the match against Canada

Team India; ಕೆನಡಾ ವಿರುದ್ದದ ಪಂದ್ಯದ ಬಳಿಕ ತವರಿಗೆ ಮರಳಲಿದ್ದಾರೆ ಇಬ್ಬರು ಆಟಗಾರರು

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

mb-patil

ಕಾನೂನು ಎಲ್ಲರಿಗೂ ಒಂದೇ, ಪ್ರಭಾವಿಗಳಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ: ಎಂ.ಬಿ.ಪಾಟೀಲ್

Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

Bengaluru Parks: ಪಾರ್ಕ್‌ಗಳಿಗೆ ಕ್ಯಾಮೆರಾ ಭದ್ರತೆ ಒದಗಿಸಲು ಆಗ್ರಹ

Bengaluru Parks: ಪಾರ್ಕ್‌ಗಳಿಗೆ ಕ್ಯಾಮೆರಾ ಭದ್ರತೆ ಒದಗಿಸಲು ಆಗ್ರಹ

ಒಂದಕ್ಕಿಂತ ಹೆಚ್ಚು SIM ಕಾರ್ಡ್‌ ಹೊಂದಿದ್ದರೆ ಶುಲ್ಕ ವಿಧಿಸಲಾಗುತ್ತದೆಯೇ? TRAI ಹೇಳಿದ್ದೇನು

ಒಂದಕ್ಕಿಂತ ಹೆಚ್ಚು SIM ಕಾರ್ಡ್‌ ಹೊಂದಿದ್ದರೆ ಶುಲ್ಕ ವಿಧಿಸಲಾಗುತ್ತದೆಯೇ? TRAI ಹೇಳಿದ್ದೇನು

3

Annapurneshwari Police station: ಠಾಣೆಗೆ ಶಾಮಿಯಾನ ಹಾಕಿರುವ ಕುರಿತು ಸಾರ್ವಜನಿಕರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.