ಆಸ್ಟ್ರೇಲಿಯನ್‌ ಓಪನ್‌: ಪ್ರಜ್ಞೇಶ್‌ ಪರಾಭವ

Team Udayavani, Jan 17, 2020, 10:40 PM IST

ಮೆಲ್ಬರ್ನ್: ಭಾರತದ ಯುವ ಟೆನಿಸಿಗ ಪ್ರಜ್ಞೇಶ್‌ ಗುಣೇಶ್ವರನ್‌ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ಪ್ರಧಾನ ಸುತ್ತಿನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಶುಕ್ರವಾರ ನಡೆದ ಅರ್ಹತಾ ಸುತ್ತಿನ ಕೊನೆಯ ಸುತ್ತಿನ ಪಂದ್ಯದಲ್ಲಿ ಅವರು ಲಾತ್ವಿಯಾದ ಎರ್ನೆಸ್ಟ್‌ ಗುಲ್ಬಿಸ್‌ ವಿರುದ್ಧ 6-7 (2), 2-6 ನೇರ ಸೆಟ್‌ಗಳ ಸೋಲನುಭವಿಸಿದರು.

ವಿಶ್ವ ರ್‍ಯಾಂಕಿಂಗ್‌ನಲ್ಲಿ 122ನೇ ಸ್ಥಾನದಲ್ಲಿರುವ  ಪ್ರಜ್ಞೇಶ್‌  ಮೊದಲ ಸೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದು ಟೈ ಬ್ರೇಕರ್‌ ತನಕ ಸಾಗಿತು. ದ್ವಿತೀಯ ಸೆಟ್‌ನಲ್ಲಿ ಗುಲ್ಬಿಸ್‌ ಅವರ ಬಲಿಷ್ಠ ಸರ್ವ್‌ಗಳ ವಿರುದ್ಧ ಹೋರಾಟ ನಡೆಸಲಾಗದೆ ಶರಣಾದರು. ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯದ ಹ್ಯಾರಿ ಬೌಶೀರ್‌ ಮತ್ತು ಜರ್ಮನಿಯ ಯಾನಿಕ್‌ ಹಾಫ್ಮ್ಯಾನ್‌ ವಿರುದ್ಧ  ಪ್ರಜ್ಞೇಶ್‌  ಗೆಲುವು ಸಾಧಿಸಿದ್ದರು.

ಪ್ರಜ್ಞೇಶ್‌ ಸೋಲಿನೊಂದಿಗೆ ಭಾರತದ ಪುರುಷರ ಸಿಂಗಲ್ಸ್‌ ಆಟಗಾರರಿಗೆ ಆಸ್ಟ್ರೇಲಿಯನ್‌ ಓಪನ್‌ ಪ್ರಧಾನ ಸುತ್ತಿನ ಬಾಗಿಲು ಮುಚ್ಚಿದಂತಾಯಿತು. ಇದಕ್ಕೂ ಮೊದಲು ಸುಮಿತ್‌ ನಾಗಲ್‌ ಮತ್ತು ರಾಮ್‌ಕುಮಾರ್‌ ರಾಮನಾಥನ್‌ ಬೇಗನೇ ಸೋತು ಹೊರನಡೆದಿದ್ದರು.

ವನಿತಾ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಸ್ಪರ್ಧೆಯಲ್ಲಿದ್ದು, ಪ್ರಧಾನ ಸುತ್ತಿಗೇರುವರೇ ಎಂಬುದೊಂದು ಕುತೂಹಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ