ಪ್ರೊ ಕಬಡ್ಡಿ: ಇಂದಿನಿಂದ ಪ್ಲೇ ಆಫ್ ಆರಂಭ
Team Udayavani, Oct 23, 2017, 6:25 AM IST
ಮುಂಬೈ: 5ನೇ ಆವೃತ್ತಿ ಪ್ರೊ ಕಬಡ್ಡಿ ಅಂತಿಮ ಹಂತಕ್ಕೆ ಅಡಿಯಿಟ್ಟಿದೆ. ಸ್ವಲ್ಪ ವಿಭಿನ್ನವಾಗಿರುವ ಪ್ಲೇಆಫ್ ಪಂದ್ಯಗಳು ಅ.23ರಿಂದ ಮುಂಬೈನಲ್ಲಿ ಆರಂಭವಾಗಲಿವೆ.
ಈಗಾಗಲೇ “ಎ’ ಗುಂಪಿನಿಂದ ಗುಜರಾತ್ ಫಾರ್ಚೂನ್ಜೈಂಟ್ಸ್, ಪುನೇರಿ ಪಲ್ಟಾನ್, ಹರ್ಯಾಣ ಸ್ಟೀಲರ್ ತಂಡಗಳು ಪ್ಲೇ ಆಫ್ ಪ್ರವೇಶಿಸಿವೆ. “ಬಿ’ ಗುಂಪಿನಿಂದ ಬೆಂಗಾಲ್ ವಾರಿಯರ್, ಪಾಟ್ನಾ ಪೈರೇಟ್ಸ್, ಯುಪಿ ಯೋಧಾ ತಂಡಗಳು ಪ್ಲೇ ಆಫ್ ಪ್ರವೇಶಿಸಿವೆ.
ಸೋಮವಾರ ನಡೆಯಲಿರುವ “ಎಲಿಮಿನೇಟರ್ 1′ ರಲ್ಲಿ ಪುನೇರಿ ಪಲ್ಟಾನ್ ಮತ್ತು ಯೋಧಾ ತಂಡಗಳು ಮುಖಾಮುಖೀಯಾಗಲಿವೆ.
ಅದೇ ರೀತಿ ಸೋಮವಾರ ನಡೆಯಲಿರುವ “ಎಲಿಮಿನೇಟರ್ 2’ರಲ್ಲಿ ಪಾಟ್ನಾ ಮತ್ತು ಹರ್ಯಾಣ ತಂಡಗಳು ಸೆಣಸಲಿವೆ. ಇಲ್ಲಿ ಸೋತ ತಂಡಗಳು ಕೂಟದಿಂದ ಹೊರಬೀಳಲಿವೆ.
“ಎಲಿಮಿನೇಟರ್ 1’ರಲ್ಲಿ ಗೆದ್ದ ತಂಡ ಮತ್ತು “ಎಲಿಮಿನೇಟರ್ 2’ರಲ್ಲಿ ಗೆದ್ದ ತಂಡಗಳು ಅ.24ರಂದು ನಡೆಯಲಿರುವ “ಎಲಿಮಿನೇಟರ್ 3’ರಲ್ಲಿ ಸೆಣಸಲಿವೆ. ಈ ಮುಖಾಮುಖೀಯಲ್ಲಿ ಸೋತ ತಂಡ ಕೂಟದಿಂದ ಹೊರ ಬೀಳುತ್ತದೆ. ಗೆಲ್ಲುವ ತಂಡ ಅ.26ರಂದು ನಡೆಯಲಿರುವ “ಕ್ವಾಲಿಫೈಯರ್ 2’ರಲ್ಲಿ ಆಡಲಿದೆ.
“ಕ್ವಾಲಿಫೈಯರ್ 2ರಲ್ಲಿ’ ಕ್ವಾಲಿಫೈಯರ್ 1ರಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್ 3ರಲ್ಲಿ ಗೆದ್ದ ತಂಡಗಳು ಆಡಲಿವೆ. ಇಲ್ಲಿ ಗೆದ್ದ ತಂಡ ಫೈನಲ್ಗೇರಲಿದ್ದರೆ, ಸೋತ ತಂಡ ಕೂಟದಿಂದ ಹೊರಬೀಳಲಿದೆ.
ಅ.24ರಂದು “ಕ್ವಾಲಿಫೈಯರ್ 1′ ನಡೆಯಲಿದೆ. ಇಲ್ಲಿ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ ಗುಜರಾತ್ ಫಾರ್ಚೂನ್ ಜೈಂಟ್ಸ್ ಮತ್ತು ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಬೆಂಗಾಲ್ ವಾರಿಯರ್ಸ್ ತಂಡಗಳು ಆಡಲಿವೆ. ಗೆದ್ದ ತಂಡ ಫೈನಲ್ಗೇರಲಿದ್ದರೆ, ಸೋತ ತಂಡ ಕ್ವಾಲಿಫೈಯರ್ 2ರಲ್ಲಿ ಆಡುವ ಅವಕಾಶ ಪಡೆಯುತ್ತದೆ. ಅ.28ರಂದು ಫೈನಲ್ ಪಂದ್ಯ ನಡೆಯಲಿದೆ.
ಎಲಿಮಿನೇಟರ್-1: ರಾತ್ರಿ 8ಕ್ಕೆ
ಎಲಿಮಿನೇಟರ್-2: ರಾತ್ರಿ 9ಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ
MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್ ಕೆಂಜಿಗೆಗೆ ಸ್ಥಾನ
IPL;ಇಂದು ಆರ್ಸಿಬಿ ಎದುರಾಳಿ ಗುಜರಾತ್ ಟೈಟಾನ್ಸ್:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ
England; 20 ವರ್ಷದ ಕ್ರಿಕೆಟಿಗ ನಿಗೂಢ ಸಾವು!