Pro Kabaddi Season-10; ಗುಜರಾತ್, ಮುಂಬಾ ಗೆಲುವಿನ ಆರಂಭ
Team Udayavani, Dec 2, 2023, 11:39 PM IST
ಅಹ್ಮದಾಬಾದ್: ಪ್ರೊ ಕಬಡ್ಡಿ 10ನೇ ಆವೃತ್ತಿಯ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಗುಜರಾತ್ ಜೈಂಟ್ಸ್ ಗೆಲುವಿನ ಶುಭಾರಂಭ ಮಾಡಿದೆ. ಅದು ತೆಲುಗು ಟೈಟಾನ್ಸ್ ವಿರುದ್ಧ 38-32 ಅಂಕಗಳ ಮೇಲುಗೈ ಸಾಧಿಸಿತು.
ಮೊದಲಾರ್ಧದ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ವಿರಾಮದ ವೇಳೆ ಗುಜರಾತ್ 13-16ರ ಹಿನ್ನಡೆಯಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ಫಜಲ್ ಅಟ್ರಾಚಲಿ ಪಡೆ ತಿರುಗಿ ಬಿತ್ತು. ರೈಡರ್ ರಾಕೇಶ್ ಸರ್ವಾಧಿಕ 5 ಅಂಕ ಗಳಿಸಿದರೆ, ಆಲ್ರೌಂಡರ್ಗಳಾದ ರೋಹಿತ್ ಗುಲಿಯಾ ಮತ್ತು ಮೊಹಮ್ಮದ್ ನಬಿಭಕ್Ò ತಲಾ 4 ಅಂಕ ತಂದಿತ್ತರು.
ಸೆಹ್ರಾವತ್ ಹೋರಾಟ
ಟೈಟಾನ್ಸ್ ಪರ ನಾಯಕ ಪವನ್ ಸೆಹ್ರಾವತ್ ಅವರದು ಏಕಾಂಗಿ ಹೋರಾಟವಾಗಿತ್ತು. ಅವರು ಪಂದ್ಯದಲ್ಲೇ ಸರ್ವಾಧಿಕ 11 ಅಂಕ ಗಳಿಸಿದರು. ಇದರಲ್ಲಿ 4 ಬೋನಸ್ ಅಂಕ ಸೇರಿತ್ತು. ರೈಡರ್ ರಾಜೇಶ್ 5 ಅಂಕ ತಂದುಕೊಟ್ಟರು.
ಮುಂಬಾ ವಿಜಯ
ದ್ವಿತೀಯ ಪಂದ್ಯದಲ್ಲಿ ಯು ಮುಂಬಾ 34-31 ಅಂತರದಿಂದ ಯುಪಿ ಯೋಧಾಸ್ಗೆ ಸೋಲುಣಿಸಿತು. ಮುಂಬಾದ ಆಲ್ರೌಂಡರ್ ಅಮೀರ್ ಮೊಹಮ್ಮದ್ ಜಾಫರ್ದನೇಶ್ ಅಮೋಘ ಪ್ರದರ್ಶನವಿತ್ತರು. ಅವರದು 11 ಅಂಕಗಳ ಪರಾಕ್ರಮ. ಯೋಧಾಸ್ ಪರ ರೈಡರ್ ಸುರೇಂದರ್ ಗಿಲ್ (7), ಆಲ್ರೌಂಡರ್ ವಿಜಯ್ ಮಲಿಕ್ (5) ಉತ್ತಮ ಪ್ರದರ್ಶನ ನೀಡಿದರು.
ಇಂದಿನ ಪಂದ್ಯಗಳು
1. ತಮಿಳ್ – ಡೆಲ್ಲಿ
ಆರಂಭ: ರಾತ್ರಿ 8.00
2. ಗುಜರಾತ್ -ಬುಲ್ಸ್
ಆರಂಭ: ರಾತ್ರಿ 9.00
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ