ರಣಜಿ: ರೈಲ್ವೇಸ್‌ ತಂಡದ ಹಳಿ ತಪ್ಪಿಸಿದ ಜೈನ್‌, ಮಿಥುನ್‌

Team Udayavani, Jan 28, 2020, 12:24 AM IST

ಹೊಸದಿಲ್ಲಿ: ಪ್ರತೀಕ್‌ ಜೈನ್‌ ಮತ್ತು ಅಭಿಮನ್ಯು ಮಿಥುನ್‌ ಅವರ ಘಾತಕ ಬೌಲಿಂಗ್‌ ದಾಳಿಗೆ ಸಿಲುಕಿದ ರೈಲ್ವೇಸ್‌ ಮೊದಲ ದಿನವೇ ಹಳಿ ತಪ್ಪಿದೆ. ರಣಜಿ ಲೀಗ್‌ ಪಂದ್ಯದ ಮೊದಲ ದಿನದ ಆಟದ ಅಂತ್ಯಕ್ಕೆ 98 ರನ್ನಿಗೆ 6 ವಿಕೆಟ್‌ ಕಳೆದುಕೊಂಡು ತೀವ್ರ ಆಘಾತ ಅನುಭವಿಸಿದೆ.

ಪ್ರತಿಕೂಲ ಹವಾಮಾನದಿಂದಾಗಿ ಮೊದಲ ದಿನ ಕೇವಲ 49 ಓವರ್‌ಗಳ ಆಟವಷ್ಟೇ ಸಾಧ್ಯವಾಯಿತು. ಈ ಅವಧಿಯಲ್ಲಿ ಪ್ರತೀಕ್‌ ಜೈನ್‌ ಅಮೋಘ ದಾಳಿ ಸಂಘಟಿಸಿ 14ಕ್ಕೆ 4 ವಿಕೆಟ್‌ ಉಡಾಯಿಸಿದರು. ಉಳಿದೆರಡು ವಿಕೆಟ್‌ ಅಭಿಮನ್ಯು ಮಿಥುನ್‌ ಪಾಲಾಯಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ರೈಲ್ವೇಸ್‌ 3ನೇ ಓವರಿನಿಂದಲೇ ಕುಸಿತ ಕಾಣಲಾರಂಭಿಸಿತು. 45 ರನ್‌ ಆಗುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ನಾಯಕ ಅರಿಂದಮ್‌ ಘೋಷ್‌ (ಬ್ಯಾಟಿಂಗ್‌ 32) ಹಾಗೂ ಅವಿನಾಶ್‌ ಯಾದವ್‌ (ಬ್ಯಾಟಿಂಗ್‌ 29) ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿ ತಂಡವನ್ನು ಆಧರಿಸಿದರು.

ತತ್ತರಿಸಿದ ರೈಲ್ವೇಸ್‌ ಬ್ಯಾಟಿಂಗ್‌
ರೈಲ್ವೇಸ್‌ ಮೇಲೆ ಮಧ್ಯಮ ವೇಗಿ ಪ್ರತೀಕ್‌ ಜೈನ್‌ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದರು. ಮತ್ತೂಂದು ಕಡೆಯಿಂದ ಅನುಭವಿ ಬೌಲರ್‌ ವೇಗಿ ಅಭಿಮನ್ಯು ಮಿಥುನ್‌ ಕೂಡ ಕಂಟಕವಾಗಿ ಪರಿಣಮಿಸಿದರು. ಇವರಿಬ್ಬರ ಬೌಲಿಂಗ್‌ ಆಕ್ರಮಣಕ್ಕೆ ಸಿಲುಕಿ ರೈಲ್ವೇಸ್‌ ಬ್ಯಾಟ್ಸ್‌ಮನ್‌ಗಳು ದಿಕ್ಕಾಪಾಲಾದರು.

ಆರಂಭಿಕರಾದ ಮೃಣಾಲ್‌ ದೇವಧರ್‌ (12) ಹಾಗೂ ಆಶಿಷ್‌ ಸೆಹ್ರಾವತ್‌ (0) 20 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿ ಆಗಿತ್ತು. ಸ್ಕೋರ್‌ 23ಕ್ಕೆ ಏರುವಷ್ಟರಲ್ಲಿ ಸೌರಭ್‌ ಸಿಂಗ್‌ (7) ಹಾಗೂ ಮಹೇಶ್‌ ರಾವತ್‌ (0) ಬೆನ್ನು ಬೆನ್ನಿಗೆ ಔಟ್‌ ಆಗಿ ಹೊರನಡೆದರು. ಇಬ್ಬರನ್ನೂ ಪ್ರತೀಕ್‌ ಜೈನ್‌ ಕ್ಲೀನ್‌ ಬೌಲ್ಡ್‌ ಮಾಡಿದರು. ದಿನೇಶ್‌ ಮೋರ್‌ (4) ಅವರಿಗೂ ಜೈನ್‌ ಎಸೆತ ಕಗ್ಗಂಟಾಗಿ ಪರಿಣಮಿಸಿತು. ರೈಲ್ವೇಸ್‌ನ ಅರ್ಧದಷ್ಟು ಮಂದಿ 29 ರನ್ನಿಗೆ ಆಟ ಮುಗಿಸಿದರು. ಹರ್ಷ ತ್ಯಾಗಿ (9) ವಿಕೆಟ್‌ ಕಿತ್ತ ಮಿಥುನ್‌ ರೈಲ್ವೇಸ್‌ಗೆ ಮತ್ತೂಂದು ಆಘಾತವಿಕ್ಕಿದರು. 45ಕ್ಕೆ 6 ವಿಕೆಟ್‌ ಉರುಳಿತು.

ಸಂಕ್ಷಿಪ್ತ ಸ್ಕೋರ್‌: ರೈಲ್ವೇಸ್‌-6 ವಿಕೆಟಿಗೆ 98 (ಘೋಷ್‌ ಬ್ಯಾಟಿಂಗ್‌ 32, ಯಾದವ್‌
ಬ್ಯಾಟಿಂಗ್‌ 29, ದೇವಧರ್‌ 12, ಜೈನ್‌ 14ಕ್ಕೆ 4, ಮಿಥುನ್‌ 18ಕ್ಕೆ 2).

ಅರಿಂದಮ್‌-ಅವಿನಾಶ್‌ ಹೋರಾಟ
ರೈಲ್ವೇಸ್‌ ನಿರಂತರ ವಿಕೆಟ್‌ ಕಳೆದುಕೊಳ್ಳುತ್ತ ಹೋದಾಗ 7ನೇ ವಿಕೆಟಿಗೆ ಜತೆಗೂಡಿದ ಅರಿಂದಮ್‌ ಘೋಷ್‌-ಅವಿನಾಶ್‌ ಯಾದವ್‌ ಕ್ರೀಸ್‌ ಆಕ್ರಮಿಸಿಕೊಂಡರು. 24.5 ಓವರ್‌ ನಿಭಾಯಿಸಿ 7ನೇ ವಿಕೆಟಿಗೆ 53 ರನ್‌ ಜತೆಯಾಟ ನಿರ್ವಹಿಸಿದರು. ಘೋಷ್‌ 32 ರನ್ನಿಗೆ 88 ಎಸೆತ ಎದುರಿಸಿದ್ದಾರೆ. ಇದರಲ್ಲಿ 4 ಬೌಂಡರಿ ಸೇರಿದೆ. ಯಾದವ್‌ 92 ಎಸೆತ ಎದುರಿಸಿ 29 ಮಾಡಿದ್ದಾರೆ (5 ಬೌಂಡರಿ). ಸದ್ಯ ಪ್ರತಿಕೂಲ ಹವಾಮಾನ ರೈಲ್ವೇಸ್‌ ನೆರವಿಗೆ ಬಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ