Ranji; ಕರ್ನಾಟಕ-ತಮಿಳುನಾಡು: ಥ್ರಿಲ್ಲಿಂಗ್‌ ಡ್ರಾ

Team Udayavani, Feb 12, 2024, 11:38 PM IST

1-asasaS

ಚೆನ್ನೈ: ಕರ್ನಾಟಕ ಮತ್ತು ತಮಿಳುನಾಡು ನಡುವಿನ “ಸಿ’ ವಿಭಾಗದ ರಣಜಿ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯ ಕಂಡಿದೆ. ಎರಡೂ ತಂಡಗಳು ಗೆಲುವಿನಿಂದ ವಂಚಿತವಾದವು ಅಥವಾ ಸೋಲಿನಿಂದ ಪಾರಾದವು ಎಂಬುದು ಒಂದು ಸಾಲಿನ ಅತ್ಯಂತ ಸೂಕ್ತ ವಿಶ್ಲೇಷಣೆಯಾದೀತು.

ಗೆಲುವಿಗೆ 355 ರನ್‌ ಗುರಿ ಪಡೆದಿದ್ದ ತಮಿಳುನಾಡು, ಪಂದ್ಯದ ಮುಕ್ತಾಯದ ವೇಳೆ 8 ವಿಕೆಟ್‌ ನಷ್ಟಕ್ಕೆ 338 ರನ್‌ ಗಳಿ ಸಿತ್ತು. ಗೆಲುವಿನಿಂದ ಕೇವಲ 17 ರನ್ನುಗಳ ಹಿಂದಿತ್ತು. ಇನ್ನೊಂದೆಡೆ ಕರ್ನಾಟಕ 2 ವಿಕೆಟ್‌ಗಳ ನಿರೀಕ್ಷೆಯಲ್ಲಿತ್ತು.

ಮೊದಲ ಇನ್ನಿಂಗ್ಸ್‌ ಮುನ್ನಡೆಗಾಗಿ 3 ಅಂಕ ಸಂಪಾದಿಸಿದ ಕರ್ನಾಟಕ ಒಟ್ಟು 24 ಅಂಕಗಳೊಂದಿಗೆ “ಸಿ’ ವಿಭಾಗದ ಅಗ್ರ ಸ್ಥಾನದಲ್ಲಿದೆ. ತಮಿಳನಾಡು 22 ಅಂಕಗ ಳೊಂದಿಗೆ ದ್ವಿತೀಯ ಸ್ಥಾನಿಯಾಗಿದೆ. ಗುಜ ರಾತ್‌ 3ನೇ ಸ್ಥಾನದಲ್ಲಿದೆ (19 ಅಂಕ).

ಇದರೊಂದಿಗೆ ಕರ್ನಾಟಕದ ಕ್ವಾರ್ಟರ್‌ ಫೈನಲ್‌ ಖಾತ್ರಿಯಾಗಿದೆ. ಅಗರ್ವಾಲ್‌ ಪಡೆ ತನ್ನ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಚಂಡೀಗಢವನ್ನು ಎದುರಿಸಲಿದೆ. ಈ ಪಂದ್ಯ ಫೆ. 16ರಂದು ಹುಬ್ಬಳ್ಳಿಯಲ್ಲಿ ಆರಂಭವಾಗಲಿದೆ.

ಅಪಾಯದಿಂದ ಪಾರು
ಒಂದು ವಿಕೆಟಿಗೆ 36 ರನ್‌ ಗಳಿಸಿದಲ್ಲಿಂದ ಸೋಮವಾರದ ಬ್ಯಾಟಿಂಗ್‌ ಮುಂದುವರಿಸಿದ ತಮಿಳುನಾಡು 199ಕ್ಕೆ 5 ವಿಕೆಟ್‌ ಕಳೆದುಕೊಂಡು ಅಪಾಯದ ಸ್ಥಿತಿಯಲ್ಲಿತ್ತು. ಆಗಿನ್ನೂ 35 ಓವರ್‌ಗಳಷ್ಟು ಆಟ ಬಾಕಿ ಇತ್ತು. ಆದರೆ 6ನೇ ವಿಕೆಟಿಗೆ ಜತೆಗೂಡಿದ ಬಾಬಾ ಇಂದ್ರಜಿತ್‌ (98) ಮತ್ತು ವಿಜಯ್‌ ಶಂಕರ್‌ (60) ಸೇರಿಕೊಂಡು ತಂಡವನ್ನು ಅಪಾಯದಿಂದ ಪಾರುಮಾಡಿದರು. ಇವರಿಂದ 125 ರನ್‌ ಜತೆಯಾಟ ದಾಖಲಾಯಿತು. ಬಳಿಕ 6 ರನ್‌ ಅಂತರದಲ್ಲಿ ಇಂದ್ರಜಿತ್‌, ವಿಜಯ್‌ ಶಂಕರ್‌ ಸೇರಿದಂತೆ 3 ವಿಕೆಟ್‌ ಉರುಳಿದಾಗ ತಮಿಳುನಾಡು ಮತ್ತೆ ಆತಂಕಕ್ಕೆ ಸಿಲುಕಿತು. ಕರ್ನಾಟಕಕ್ಕೆ ಪುನಃ ಗೆಲುವಿನ ಅವಕಾಶ ಎದುರಾಯಿತು. ಆದರೆ ನಾಯಕ ಸಾಯಿ ಕಿಶೋರ್‌ ಮತ್ತು ಅಜಿತ್‌ ರಾಮ್‌ ಕೊನೆಯ ಹಂತವನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು.

3ನೇ ದಿನ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಪ್ರದೋಶ್‌ ಪೌಲ್‌ ಕೂಡ ತಮಿಳುನಾಡು ಪಾಲಿಗೆ ಆಪತಾºಂಧವರಾದರು. ಇವರ ಕೊಡುಗೆ 74 ರನ್‌.

ಸಂಕ್ಷಿಪ್ತ ಸ್ಕೋರ್‌:
ಕರ್ನಾಟಕ-356 ಮತ್ತು 139. ತಮಿಳುನಾಡು-151 ಮತ್ತು 8 ವಿಕೆಟಿಗೆ 338 (ಇಂದ್ರಜಿತ್‌ 98, ಪ್ರದೋಶ್‌ 74, ವಿಜಯ್‌ ಶಂಕರ್‌ 60, ವಿಮಲ್‌ ಕುಮಾರ್‌ 31, ವೈಶಾಖ್‌ 71ಕ್ಕೆ 3, ಹಾರ್ದಿಕ್‌ ರಾಜ್‌ 86ಕ್ಕೆ 2).
ಪಂದ್ಯಶ್ರೇಷ್ಠ: ದೇವದತ್ತ ಪಡಿಕ್ಕಲ್‌.

4 ಎಸೆತಗಳಿಗೆ 4 ವಿಕೆಟ್‌!
ಇಂದೋರ್‌: ಮಧ್ಯಪ್ರದೇಶದ ವೇಗಿ ಖುಲ್ವಂತ್‌ ಖೆಜ್ರೋಲಿಯ ರಣಜಿ ಇತಿಹಾಸದಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್‌ ಕಿತ್ತ 3ನೇ ಬೌಲರ್‌ ಆಗಿ ಮೂಡಿಬಂದಿದ್ದಾರೆ. ಮಧ್ಯಪ್ರದೇಶದ ವಿರುದ್ಧ ಫಾಲೋಆನ್‌ಗೆ ಸಿಲುಕಿದ್ದ ಬರೋಡ, 2ನೇ ಇನಿಂಗ್ಸ್‌ನಲ್ಲಿ 270 ರನ್‌ಗಳಿಗೆ ಆಲೌಟ್‌ ಆಯಿತು. ಆ ವೇಳೆ ಖೆಜ್ರೋಲಿಯ ಸತತ 4 ಎಸೆತಗಳಲ್ಲಿ ಬರೋಡದ 4 ವಿಕೆಟ್‌ ಉರುಳಿಸಿದರು.

ಟಾಪ್ ನ್ಯೂಸ್

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.