ಚೀನದಲ್ಲಿ 3ನೇ ಟೆನಿಸ್ ಪ್ರಶಸ್ತಿ ಗೆದ್ದ ಸಬಲೆಂಕಾ
Team Udayavani, Oct 28, 2019, 6:05 PM IST
ಜುಹೈ (ಚೀನ): ಬೆಲರೂಸ್ನ ಅರಿನಾ ಸಬಲೆಂಕಾ ಜುಹೈಯಲ್ಲಿ ನಡೆದ “ಡಬ್ಲ್ಯುಟಿಎ ಎಲೈಟ್ ಟ್ರೋಫಿ’ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಫೈನಲ್ನಲ್ಲಿ ಅವರು ಅಗ್ರ ಶ್ರೇಯಾಂಕದ ಡಚ್ ಎದುರಾಳಿ ಕಿಕಿ ಬರ್ಟೆನ್ಸ್ ವಿರುದ್ಧ 6-4, 6-2 ಅಂತರದ ನೇರ ಗೇಮ್ಗಳ ಗೆಲುವು ಸಾಧಿಸಿದರು. 76 ನಿಮಿಷಗಳ ಕಾಲ ಇವರ ಹೋರಾಟ ಜಾರಿಯಲ್ಲಿತ್ತು.
ಇದು 2019ರಲ್ಲಿ ಚೀನದ ಟೆನಿಸ್ ಪಂದ್ಯಾವಳಿಗಳಲ್ಲಿ ಸಬಲೆಂಕಾಗೆ ಒಲಿದ 3ನೇ ಟೆನಿಸ್ ಪ್ರಶಸ್ತಿ. ಇದಕ್ಕೂ ಮೊದಲು ಶೆಂಜೆನ್ ಮತ್ತು ವುಹಾನ್ ಪಂದ್ಯಾವಳಿಗಳಲ್ಲೂ ಅವರು ಚಾಂಪಿಯನ್ ಆಗಿದ್ದರು.