ಸಾನಿಯಾ, ಬೋಪಣ್ಣ ನಿರ್ಗಮನ

Team Udayavani, Aug 20, 2017, 7:05 AM IST

ಸಿನ್ಸಿನಾಟಿ: ಸಿನ್ಸಿನಾಟಿ ಟೆನಿಸ್‌ ಪಂದ್ಯಾವಳಿಯಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ. ಸಾನಿಯಾ ಮಿರ್ಜಾ ಮತ್ತು ಬೋಪಣ್ಣ ಜೋಡಿಯ ಸೋಲಿ ನೊಂದಿಗೆ ಭಾರತೀಯ ಟೆನಿಸ್‌ ಅಭಿಮಾನಿಗಳ ನಿರೀಕ್ಷೆಗಳೆಲ್ಲ ಕಮರಿ ಹೋದವು.

ಇವರಲ್ಲಿ ಸಾನಿಯಾ ಮಿರ್ಜಾ-ಶುಯಿ ಪೆಂಗ್‌ ವನಿತಾ ಡಬಲ್ಸ್‌ ಸೆಮಿಫೈನಲ್‌ ತನಕ ಓಟ ಮುಂದುವರಿಸಿದ್ದರು. ಇಲ್ಲಿ ತೈವಾನ್‌ನ ಶೀ ಸು ವೀ-ರೊಮೇನಿಯಾದ ಮೋನಿಕಾ ನಿಕುಲೆಸ್ಕಾ ಜೋಡಿಗೆ 4-6, 6-7 ಅಂತರದಿಂದ ಶರಣಾದರು. ಇವರ ಸ್ಪರ್ಧೆ ಒಂದು ಗಂಟೆ, 33 ನಿಮಿಷಗಳ ಕಾಲ ಸಾಗಿತು. 

ಇನ್ನೊಂದು ಸೆಮಿಫೈನಲ್‌ನಲ್ಲಿ ಯುಂಗ್‌ ಜಾನ್‌ ಚಾನ್‌ (ಚೈನೀಸ್‌ ತೈಪೆ)-ಮಾರ್ಟಿನಾ ಹಿಂಗಿಸ್‌ (ಸ್ವಿಟ್ಸರ್‌ಲ್ಯಾಂಡ್‌) ಜಯ ಸಾಧಿಸಿದ್ದಾರೆ. ಇವರು ಜೆಕ್‌ ಜೋಡಿಯಾದ ಲೂಸಿ ಸಫ‌ ರೋವಾ-ಬಾರ್ಬರಾ ಸ್ಟ್ರೈಕೋವಾ ವಿರುದ್ಧ 7-6, 6-2ರಿಂದ ಗೆದ್ದು ಬಂದರು.

3 ಸೆಟ್‌ಗಳ ಸೆಣಸಾಟ: ಪುರುಷರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಬೋಪಣ್ಣ- ಡೊಡಿಗ್‌ 2ನೇ ಶ್ರೇಯಾಂಕದ ಲುಕಾಸ್‌ ಕುಬೊಟ್‌ (ಪೋಲೆಂಡ್‌)-ಮಾರ್ಸೆಲೊ ಮೆಲೊ (ಬ್ರಝಿಲ್‌) ವಿರುದ್ಧ 1-6, 7-6, 7-10 ಅಂತರದಿಂದ ಪರಾಭವ ಗೊಂಡರು. 

ಇದಕ್ಕೂ ಮುನ್ನ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ರಾಮ್‌ಕುಮಾರ್‌ ರಾಮನಾಥನ್‌ ಸೋಲನುಭವಿಸಿದ್ದರು. ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಲಿಯಾಂಡರ್‌ ಪೇಸ್‌-ಅಲೆಕ್ಸಾಂಡರ್‌ ಜ್ವರೇವ್‌ ಎಡವಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ