ಸೆಮಿಫೈನಲ್ನಲ್ಲಿ ಸರಿತಾ, ಸೋನಿಯಾ
Team Udayavani, Nov 6, 2017, 8:44 AM IST
ಹೊಚಿಮಿನ್ ಸಿಟಿ (ವಿಯೆಟ್ನಾಮ್): ಏಶ್ಯನ್ ವನಿತಾ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಇನ್ನೂ 3 ಪದಕಗಳು ಖಾತ್ರಿಯಾಗಿವೆ. ರವಿವಾರದ ಸ್ಪರ್ಧೆಗಳಲ್ಲಿ ಎಲ್. ಸರಿತಾ ದೇವಿ (64 ಕೆಜಿ), ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದ ಸೋನಿಯಾ ಲಾಥರ್ (57 ಕೆಜಿ) ಮತ್ತು ಲೊವಿನಾ ಬೊರ್ಗೊಹೇನ್ (69 ಕೆಜಿ) ಸೆಮಿಫೈನಲ್ ಪ್ರವೇಶಿಸುವುದರೊಂದಿಗೆ ಪದಕವನ್ನು ಖಚಿತಗೊಳಿಸಿದರು.
ಮಾಜಿ ವಿಶ್ವ ಚಾಂಪಿಯನ್ ಸರಿತಾ ದೇವಿ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಈಗ 6ನೇ ಪದಕವನ್ನು ಎದುರು ನೋಡುತ್ತಿದ್ದಾರೆ. ಕ್ವಾರ್ಟರ್ ಫೈನಲ್ನಲ್ಲಿ ಅವರು ಉಜ್ಬೆಕಿಸ್ಥಾನದ ಮಫ್ತುನಖೋನ ಮೆಲೀವಾ ಅವರನ್ನು ಪರಾಭವಗೊಳಿಸಿದರು. 57 ಕೆಜಿ ವಿಭಾಗದಲ್ಲಿ ಸೋನಿಯಾ ಲಾಥರ್ ಕಜಾಕ್ಸ್ಥಾನದ ನಝಿಮ್ ಇಕ್ಷನೋವಾ ವಿರುದ್ಧ ಒಂದಷ್ಟು ಪ್ರತಿರೋಧ ಎದುರಿಸಿದರೂ ಜಯ ಕಾಣುವಲ್ಲಿ ಯಶಸ್ವಿಯಾದರು. ಸೋನಿಯಾ ಈ ಕೂಟದ ದ್ವಿತೀಯ ಪದಕವನ್ನು ಅಲಂಕರಿಸಿಕೊಳ್ಳಲಿದ್ದಾರೆ. ಲೊವಿÉನಾ ಮಂಗೋಲಿಯಾದ ಎರ್ಡ್ನೆಟು ಎಂಕ್ಬಾಟ್ ವಿರುದ್ಧ ಗೆದ್ದರು.
ಆದರೆ “ನೇಶನ್ಸ್ ಕಪ್’ ಚಿನ್ನದ ಪದಕ ವಿಜೇತೆ ನೀರಜಾ (51 ಕೆಜಿ) ಕ್ವಾರ್ಟರ್ ಫೈನಲ್ನಲ್ಲಿ ಚೈನೀಸ್ ತೈಪೆಯ ಖೋಲ್ ಮಿ ಪಾಂಗ್ ವಿರುದ್ಧ ಸೋಲನುಭವಿಸಿದರು.