ಬಾಲಕಿಗೆ ಲೈಂಗಿಕ ಕಿರುಕುಳ ಮಾಜಿ ಕ್ರಿಕೆಟಿಗ ಜೈಲಿಗೆ
Team Udayavani, Feb 18, 2018, 6:30 AM IST
ಲಂಡನ್: ಮಾಜಿ ಇಂಗ್ಲಿಷ್ ಕ್ರಿಕೆಟ್ ಕ್ಲಬ್ ನಾಯಕ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಈಗ ಪೊಲೀಸರ ಅತಿಥಿಯಾದ ಘಟನೆ ಬೆಳಕಿಗೆ ಬಂದಿದೆ.
ಅಷ್ಟು ಮಾತ್ರವಲ್ಲ ಆರೋಪ ಸಾಬೀತಾಗಿರುವುದರಿಂದ ಆತನಿಗೆ ನ್ಯಾಯಾಲಯ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆಗೆ ಒಳಪಡಿಸಿದೆ. ಆತನ ಹೆಸರು ಲೀ ಫ್ರಾನ್ಸಿಸ್ ಡಿಕ್ಸಾನ್. ಚೆಸ್ಟರ್ ಬಾಗ್ಟನ್ ಹಾಲ್ ಕ್ರಿಕೆಟ್ ಕ್ಲಬ್ ತಂಡದ ನಾಯಕ. ಆತನಿಗೆ 31 ವರ್ಷವಾಗಿತ್ತು. ಇತ್ತೀಚೆಗೆ ತನ್ನ ಬಳಿ ಕ್ರಿಕೆಟ್ ಕಲಿಯುತ್ತಿದ್ದ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಲೈಂಗಿಗೆ ತೃಷೆಗೆ ಬಳಸಿಕೊಂಡಿದ್ದ. ಈ ಕಾರಣದಿಂದ ಆತನ ಮೇಲೆ ದೂರು ದಾಖಲಾಗಿತ್ತು.