ಸಯ್ಯದ್ ಮುಷ್ತಾಕ್ ಅಲಿ ಕೂಟದಲ್ಲಿ ಆಡಲಿರುವ ಗಿಲ್, ಪಂತ್: ಟೆಸ್ಟ್ ತಂಡದಿಂದ ಹೊರಕ್ಕೆ
Team Udayavani, Nov 23, 2019, 4:33 PM IST
ಕೋಲ್ಕತ್ತಾ: ಬಾಂಗ್ಲಾ ದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾದ ರಿಷಭ್ ಪಂತ್ ಮತ್ತು ಶುಭ್ಮನ್ ಗಿಲ್ ಅವರಿಗೆ ಸಯ್ಯದ್ ಮುಷ್ತಾಕ್ ಆಲಿ ಕೂಟದಲ್ಲಿ ಆಡಲು ಅವಕಾಶ ಮಾಡಿಕೊಡಲಾಗಿದೆ.
ರಿಷಭ್ ಪಂತ್ ಅವರನ್ನು ಟೆಸ್ಟ್ ತಂಡದಿಂದ ಬಿಡುಗಡೆ ಮಾಡಿದ ಕಾರಣ ಆಂಧ್ರ ಪ್ರದೇಶ ಕೀಪರ್ ಕೆಎಸ್ ಭರತ್ ಅವರನ್ನು ಟೆಸ್ಟ್ ತಂಡ ಕೂಡಿಕೊಂಡಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ನವೆಂಬರ್ 24 ರಂದು ನಡೆಯಲಿರುವ ಹರ್ಯಾಣ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡದಲ್ಲಿ ಪಂತ್ ಕಾಣಿಸಿಕೊಳ್ಳಲಿದ್ದಾರೆ.
ಶುಭ್ಮನ್ ಗಿಲ್ ಪಂಜಾಬ್ ತಂಡದ ಪರವಾಗಿ ಕಾಣಿಸಿಕೊಳ್ಳಲಿದ್ದು, ನವೆ. 24ರಂದು ಕರ್ನಾಟಕ ವಿರುದ್ಧ ಕಣಕ್ಕಿಳಿಯಲಿದ್ದಾರೆ.