ಕೊಹ್ಲಿಯನ್ನು ಹೊಗಳಿದ ಆಸೀಸ್ ನಾಯಕ ಸ್ಮಿತ್
Team Udayavani, Feb 24, 2018, 8:15 AM IST
ಹೊಸದಿಲ್ಲಿ: ವಿರಾಟ್ ಕೊಹ್ಲಿಯೊಂದಿಗೆ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ಸ್ಮಿತ್ ಅನೇಕ ಸಲ ಜಗಳ ಮಾಡಿಕೊಂಡಿದ್ದಾರೆ. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ “ಕ್ರಿಕೆಟ್ ಆಸ್ಟ್ರೇಲಿಯ’ಕ್ಕೆ ನೀಡಿರುವ ಸಂದರ್ಶನದಲ್ಲಿ ಕೊಹ್ಲಿಯನ್ನು ಪ್ರಶಂಸಿಸಿದ್ದಾರೆ. “ನಾನು ಅಭ್ಯಾಸ ಮಾಡುವಾಗ ಕೊಹ್ಲಿ ಬ್ಯಾಟಿಂಗಿನಿಂದ ಹಲವು ಸಂಗತಿಗಳನ್ನು ಕಲಿತಿದ್ದೇನೆ. ಅದರಲ್ಲೂ ಸ್ಪಿನ್ ಬೌಲಿಂಗನ್ನು ಅವರು ಎದುರಿಸುವ ರೀತಿ, ಆಫ್ಸೈಡ್ಗೆ ಚೆಂಡನ್ನು ಅಟ್ಟುವ ಬಗೆ ನನಗೆ ಮಾದರಿ. ಕಲಿಕೆಯ ವಿಚಾರದಲ್ಲಿ ತನಗೆ ಮುಜು ಗರವಿಲ್ಲ’ ಎಂದು ಸ್ಮಿತ್ ಹೇಳಿದ್ದಾರೆ.
ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಸ್ಮಿತ್ ಭಾರೀ ವಿವಾದ ಸೃಷ್ಟಿಸಿದ್ದರು. ತಾನು ಎಲ್ಬಿ ಆದ ಸಂದರ್ಭದಲ್ಲಿ ಡ್ರೆಸ್ಸಿಂಗ್ ಕೊಠಡಿಯತ್ತ ನೋಡಿ ಡಿಆರ್ಎಸ್ ಮನವಿ ಸಲ್ಲಿಸುವ ವಿಚಾರದಲ್ಲಿ ಮಾರ್ಗದರ್ಶನ ಪಡೆದಾಗ ಕೊಹ್ಲಿ ಕೆರಳಿದ್ದರು.