
ಬಿಸಿಸಿಐ ಸಂವಿಧಾನ ತಿದ್ದುಪಡಿಗೆ ಸುಪ್ರೀಂ ಕೋರ್ಟ್ ಅಸ್ತು
Team Udayavani, Sep 15, 2022, 12:43 AM IST

ಹೊಸದಿಲ್ಲಿ: ಮಂಡಳಿ ಅಧಿಕಾರಿಗಳ ಅವಧಿ ವಿಸ್ತರಣೆಗೆ ಸಂಬಂಧಿಸಿದ ಹಳೆಯ ನಿಯಮಗಳನ್ನು ಸಡಿಸಲಿಸಿ ತನ್ನ ಸಂವಿಧಾನವನ್ನು ತಿದ್ದುಪಡಿಗೊಳಿಸಲು ಬಿಸಿಸಿಐಗೆ ಬುಧವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಇದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜೈ ಶಾ ಅವರಿಗೆ ಭಾರೀ ಅನುಕೂಲವಾಗಿ ಪರಿಣಮಿಸಿದೆ. ಇಬ್ಬರಿಗೂ ಮುಂದಿನ 3 ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧಿಕಾರದಲ್ಲಿ ಉಳಿಯಲು ದಾರಿ ಸುಗಮಗೊಂಡಿದೆ.
ಕ್ರಿಕೆಟ್ ಮಂಡಳಿಯ ಸಂವಿಧಾನ ಬದಲಾವಣೆ ಕುರಿತು ಬಿಸಿಸಿಐ 3 ವರ್ಷಗಳ ಹಿಂದೆ ಮೇಲ್ಮನವಿ ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು ಬುಧವಾರ ಪ್ರಕಟಗೊಂಡಿತು.
ಈ ತೀರ್ಪಿನಂತೆ ಸೌರವ್ ಗಂಗೂಲಿ ಮತ್ತು ಜೈ ಶಾ ಅವರನ್ನು ತತ್‌ಕ್ಷಣವೇ ಜಾರಿಗೆ ಬರುವಂತೆ ತಮ್ಮ ಹುದ್ದೆಗಳಲ್ಲಿ ಮುಂದಿನ 3 ವರ್ಷ ಮುಂದುವರಿಯಲು ನಿರ್ಧರಿಸಲಾಯಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
