ಕುಸ್ತಿ ಸಂಸ್ಥೆಯನ್ನು ಮತ್ತೆ ಅಮಾನತು ಮಾಡಿ: ಬಜರಂಗ್ ಆಗ್ರಹ
Team Udayavani, Feb 15, 2024, 11:08 PM IST
ಹೊಸದಿಲ್ಲಿ: ಹಲವು ವಿವಾದಗಳಿಂದ ತತ್ತರಿಸಿರುವ ಭಾರತೀಯ ಕುಸ್ತಿ ಸಂಸ್ಥೆಯ (ಡಬ್ಲ್ಯು ಎಫ್ಐ) ಮೇಲೆ ಹೇರಲಾಗಿದ್ದ ಅಮಾನತನ್ನು, ವಿಶ್ವ ಕುಸ್ತಿ ಒಕ್ಕೂಟ (ಯುಡಬ್ಲ್ಯುಡಬ್ಲ್ಯು) ತೆರವುಗೊಳಿಸಿದೆ. ಇದೇ ವೇಳೆ ವಿಶ್ವ ಕುಸ್ತಿ ಒಕ್ಕೂಟಕ್ಕೆ ಮನವಿ ಮಾಡಿರುವ ಬಜರಂಗ್ ಪುನಿಯ, ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಅವರು, “ಡಬ್ಲ್ಯುಎಫ್ಐಯನ್ನು ಮತ್ತೆ ಅಮಾನತು ಮಾಡಿ. ನಿಮ್ಮ ಅಮಾನತು ತೆರವು ಕ್ರಮದಿಂದ ನಮ್ಮ ವಿರುದ್ಧ ತಾರತಮ್ಯ, ಬೆದರಿಕೆ, ಕಿರುಕುಳ ಮುಂದುವರಿಯಲಿವೆ’ ಎಂದು ಹೇಳಿದ್ದಾರೆ.