ಭಾರತ-ಪಾಕ್ ಪಂದ್ಯದ ಹೆಚ್ಚುವರಿ ಟಿಕೆಟ್ ಹತ್ತೇ ನಿಮಿಷದಲ್ಲಿ ಖಾಲಿ
Team Udayavani, Oct 15, 2022, 6:50 AM IST
ಮೆಲ್ಬರ್ನ್: ಭಾರತ- ಪಾಕಿಸ್ಥಾನ ನಡುವೆ ಅ. 23ರಂದು ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯದ ಟಿಕೆಟ್ಗಳೆಲ್ಲ ಮಾರಾಟಗೊಂಡಿವೆ. ಈ ಪಂದ್ಯ ಎಂಸಿಜಿಯ “ಫುಲ್ ಹೌಸ್’ ನಲ್ಲಿ ಕಾವೇರಿಸಿಕೊಳ್ಳಲಿದೆ. ಹೆಚ್ಚುವರಿ ಯಾಗಿ ಬಿಡುಗಡೆ ಮಾಡಲಾದ ಸ್ಟಾಂಡಿಂಗ್ ರೂಮ್ ಟಿಕೆಟ್ಗಳೆಲ್ಲ ಹತ್ತೇ ನಿಮಿಷದಲ್ಲಿ ಖಾಲಿಯಾಗಿವೆ.
ಕೊರೊನಾ ಕಾಟ ನಿಯಂತ್ರಣಕ್ಕೆ ಬಂದ ಬಳಿಕ ನಡೆಯಲಿರುವ ವಿಶ್ವ ದರ್ಜೆಯ ಮೆಗಾ ಕ್ರಿಕೆಟ್ ಟೂರ್ನಿ ಇದಾಗಿದ್ದು, ಆಸ್ಟ್ರೇಲಿಯದ ಸ್ಟೇಡಿ ಯಂಗಳೆಲ್ಲ ವೀಕ್ಷಕರಿಗೆ ಸಂಪೂ ರ್ಣವಾಗಿ ತೆರೆಯಲ್ಪಡಲಿವೆ. ಈಗಾ ಗಲೇ 6 ಲಕ್ಷದಷ್ಟು ಟಿಕೆಟ್ ಮಾರಾಟ ಗೊಂಡಿದ್ದಾಗಿ ವಿಶ್ವಕಪ್ ಸಿಇಒ ಮಿಚೆಲ್ ಎನ್ರೈಟ್ ಹೇಳಿದ್ದಾರೆ.
ಮೊದಲ ಸುತ್ತಿನ ಪಂದ್ಯ
ರವಿವಾರದಿಂದ ಮೊದಲ ಸುತ್ತಿನ ಪಂದ್ಯಗಳು ನಡೆಯಲಿವೆ. ಸೂಪರ್-12ರಲ್ಲಿ ಖಾಲಿ ಉಳಿದಿರುವ 4 ಸ್ಥಾನಗಳನ್ನು ತುಂಬಲು 8 ತಂಡಗಳು ಇಲ್ಲಿ ಸ್ಪರ್ಧೆಗೆ ಇಳಿಯಲಿವೆ.
ಸೂಪರ್-12 ಹಂತದ ಮೊದಲ ಪಂದ್ಯ ಆತಿಥೇಯ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ನಡುವೆ ಅ. 22ರಂದು ಸಿಡ್ನಿಯಲ್ಲಿ ನಡೆಯಲಿದೆ. ಅಂದೇ ಪರ್ತ್ನಲ್ಲಿ ಇಂಗ್ಲೆಂಡ್-ಅಫ್ಘಾನಿಸ್ಥಾನ ಮುಖಾಮುಖೀ ಆಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ