ಟೈಟಾನ್ಸ್ -ಯೋಧಾ ಪಂದ್ಯ ರೋಚಕ ಟೈ
Team Udayavani, Aug 3, 2019, 4:12 AM IST
ಮುಂಬಯಿ: ಪ್ರೊ ಕಬಡ್ಡಿ ಏಳನೇ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡುತ್ತಿರುವ ತೆಲುಗು ಟೈಟಾನ್ಸ್ಗೆ ಮತ್ತೂಮ್ಮೆ ಗೆಲುವು ಮರೀಚಿಕೆಯಾಗಿದೆ.
ಸಿದ್ಧಾರ್ಥ್ ದೇಸಾಯಿ ಅವರು ಸುಮಿತ್ ಔಟ್ ಮಾಡುವ ಮೂಲಕ ಯುಪಿ ಯೋಧಾ ವಿರುದ್ಧ ಮುಂಬೈ ಚರಣದ ಶುಕ್ರವಾರದ ಮೊದಲ ಪಂದ್ಯದಲ್ಲಿ ತೆಲುಗು ಟೈಟ್ಸಾನ್ಸ್ ಮತ್ತು ಯೋಧಾ 20-20 ಅಂಕಗಳ ರೋಚಕ ಟೈ ಸಾಧಿಸಿತು. ಹೀಗಾಗಿ ಉಭಯ ತಂಡಗಳು ಕ್ರಮವಾಗಿ ಅಂಕ ಹಂಚಿಕೊಳ್ಳಬೇಕಾಯಿತು. ತೆಲುಗು ಟೈಟಾನ್ಸ್ ಪರ ಸಿದ್ಧಾರ್ಥ್ ದೇಸಾಯಿ (5 ಅಂಕ), ಡಿಫೆಂಡರ್ಗಳಾದ ಫರ್ಹಾದ್ (4 ಅಂಕ) ಹಾಗೂ ಅಬೋಜರ್ ಮಿಘಾನಿ (4 ಅಂಕ) ತಂಡ ಭರ್ಜರಿ ಟ್ಯಾಕಲ್ ಮಾಡಿ ಗಮನ ಸೆಳೆದರು.
ಯು ಮುಂಬಾಗೆ 3ನೇ ಗೆಲುವು
ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡ 32-20 ಅಂಕಗಳ ಅಂತರದಿಂದ ಗುಜರಾತ್ ಫಾರ್ಚೂನ್ಜೈಂಟ್ಸ್ ತಂಡದ ವಿರುದ್ಧ ಗೆಲುವುಗಳಿಸಿದೆ. ಇದು ಯು ಮುಂಬಾ ತಂಡದ ಮೂರನೇ ಗೆಲುವಾಗಿದೆ.