ಟಿ20ಗೆ ಮರಳಿದ ತಮಿಮ್‌ ಇಕ್ಬಾಲ್‌

Team Udayavani, Jan 20, 2020, 1:07 AM IST

ಢಾಕಾ: ಮುಂಬರುವ ಪಾಕಿಸ್ಥಾನ ವಿರುದ್ಧದ ಟಿ20 ಸರಣಿಗೆ ಶನಿವಾರ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಲಾಗಿದ್ದು, ಎಡಗೈ ಆರಂಭಕಾರ ತಮಿಮ್‌ ಇಕ್ಬಾಲ್‌ ವಾಪಸಾಗಿದ್ದಾರೆ. ಕಳೆದ ಏಕದಿನ ವಿಶ್ವಕಪ್‌ ಬಳಿಕ ಅವರು ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ.

ತಮಿಮ್‌ ಇಕ್ಬಾಲ್‌ ಅಕ್ಟೋಬರ್‌ನಲ್ಲಿ ಭಾರತ ಪ್ರವಾಸಕ್ಕೆ ಬರಲು ಸಿದ್ಧರಾಗಿದ್ದರೂ ಕೊನೇ ಗಳಿಗೆಯಲ್ಲಿ ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದರು. ರುಬೆಲ್‌ ಹೊಸೈನ್‌ ಕೂಡ ತಂಡಕ್ಕೆ ವಾಪಸಾಗಿದ್ದಾರೆ. 20ರ ಹರೆಯದ ಪೇಸ್‌ ಬೌಲರ್‌ ಹಸನ್‌ ಮಹ್ಮದ್‌ ಬಾಂಗ್ಲಾ ತಂಡದ ಹೊಸ ಮುಖ.
ಬಾಂಗ್ಲಾ ತಂಡ ಈ ಸರಣಿಯಲ್ಲಿ 3 ಟಿ20, 2 ಟೆಸ್ಟ್‌ ಹಾಗೂ ಒಂದು ಏಕದಿನ ಪಂದ್ಯವನ್ನು ಆಡಲಿದೆ. ಪಾಕಿಸ್ಥಾನವನ್ನು ಬಾಬರ್‌ ಆಜಮ್‌ ಮುನ್ನಡೆಸಲಿದ್ದಾರೆ.

ಬಾಂಗ್ಲಾದೇಶತಂಡ: ಮಹಮದುಲ್ಲ (ನಾಯಕ), ತಮಿಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ನಯೀಮ್‌ ಶೇಖ್‌, ನಜ್ಮುಲ್‌ ಹೊಸೈನ್‌, ಲಿಟನ್‌ ಕುಮಾರ್‌ ದಾಸ್‌, ಮೊಹಮ್ಮದ್‌ ಮಿಥುನ್‌, ಅಫಿಫ್ ಹೊಸೈನ್‌, ಮೆಹೆದಿ ಹಸನ್‌, ಅಮಿಮುಲ್‌ ಇಸ್ಲಾಮ್‌, ಮುಸ್ತಫಿಜುರ್‌ ರಹಮಾನ್‌, ಶಫಿಯುಲ್‌ ಇಸ್ಲಾಮ್‌, ಅಲ್‌ ಅಮಿನ್‌ ಹೊಸೈನ್‌, ರುಬೆಲ್‌ ಹೊಸೈನ್‌, ಹಸನ್‌ ಮಹ್ಮದ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ