Udayavni Special

ಮದುಮಗ ಸಿಲಿಕ್‌ ದ್ವಿತೀಯ ಸುತ್ತಿಗೆ

Team Udayavani, May 30, 2018, 6:00 AM IST

v-20.jpg

ಪ್ಯಾರಿಸ್‌: ನಾಲ್ಕು ವಾರಗಳ ಹಿಂದೆಯಷ್ಟೇ ಮದುವೆ ಯಾಗಿರುವ 3ನೇ ಶ್ರೇಯಾಂಕದ ಮರಿನ್‌ ಸಿಲಿಕ್‌, ಮಾಜಿ ಚಾಂಪಿ ಯನ್‌ ರಫೆಲ್‌ ನಡಾಲ್‌ ಮತ್ತು ಸರ್ಬಿಯಾ ನೊವಾಕ್‌ ಜೊಕೋವಿಕ್‌ ಅವರು ತಮ್ಮ ಎದು ರಾಳಿಯೆ ದುರು ವಿಜಯ ಸಾಧಿಸಿ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಕೂಟದ ದ್ವಿತೀಯ ಸುತ್ತಿಗೇರಿದ್ದಾರೆ.

ಮೊದಲ ಸೆ‌ಟ್‌ನಲ್ಲಿ ಸುಲಭ ಗೆಲುವು ಪಡೆದ ಸಿಲಿಕ್‌ ಮತ್ತೆರಡು ಸೆಟ್‌ ಗೆಲ್ಲಲು ಶಕ್ತಿಮೀರಿ ಪ್ರಯತ್ನ ನಡೆಸಿದರು. ಅಂತಿಮವಾಗಿ ಅವರು ಆಸ್ಟ್ರೇಲಿಯದ ಜೇಮ್ಸ್‌ ಡಕ್‌ವರ್ತ್‌ ಅವರನ್ನು 6-3, 7-5, 7-6 (7-4) ಸೆಟ್‌ಗಳಿಂದ ಕೆಡಹಿ ಮುನ್ನಡೆದರು. 2014ರಲ್ಲಿ ಸಿಲಿಕ್‌ ಯುಎಸ್‌ ಓಪನ್‌ನ ಪ್ರಶಸ್ತಿ ಗೆದ್ದಿದ್ದಾರೆ. ಆದರೆ ಮದುವೆ ಆದ ಸಂಭ್ರಮದಲ್ಲಿರುವ ಕಾರಣ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದರೆ ಅದರ ಪ್ರಾಮುಖ್ಯ ಬಹಳಷ್ಟು ಎತ್ತರಕ್ಕೆ ಏರಲಿದೆ ಎಂದು ಸಿಲಿಕ್‌ ಹೇಳಿದ್ದಾರೆ.

29ರ ಹರೆಯದ ಸಿಲಿಕ್‌ ತನ್ನ ದೀರ್ಘ‌ಕಾಲದ ಗೆಳತಿ ಇಂಟಿರಿಯರ್‌ ಡಿಸೈನರ್‌ ಆಗಿರುವ ಕ್ರಿಸ್ಟಿನಾ ಮಿಲೋವಿಕ್‌ ಅವರನ್ನು ಡುಬ್ರೋವ್‌ನಿಕ್‌ನಲ್ಲಿ ನಾಲ್ಕು ವಾರಗಳ ಹಿಂದೆ ಮದುವೆಯಾಗಿದ್ದರು. ಕುಟುಂಬ ಮತ್ತು ಸ್ನೇಹಿತರ ಜತೆ ನಾವು ಆನಂದದ ಸಮಯ ಕಳೆದಿದ್ದೇವೆ. ಕ್ರಿಸ್ಟಿನಾ ಮತ್ತು ನಾನು ದೀರ್ಘ‌ ಸಮಯದಿಂದ ಜತೆಗಿದ್ದೇವೆ ಎಂದು ಸಿಲಿಕ್‌ ತಿಳಿಸಿದರು. 

ವಿಂಬಲ್ಡನ್‌ ಮತ್ತು ಆಸ್ಟ್ರೇಲಿಯನ್‌ ಓಪನ್‌ನಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದ ಸಿಲಿಕ್‌ ದ್ವಿತೀಯ ಸುತ್ತಿನಲ್ಲಿ ಪೋಲ್ಯಾಂಡಿನ ಅರ್ಹತಾ ಆಟಗಾರ ಹ್ಯುಬರ್ಟ್‌ ಹರ್ಕಾಜ್‌ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಇಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದ ಸಿಲಿಕ್‌ ಡಕ್‌ವರ್ತ್‌ ವಿರುದ್ಧದ ಪಂದ್ಯದಲ್ಲಿ 13 ಏಸ್‌ ಸಿಡಿಸಿದರಲ್ಲದೇ 47 ವಿಜಯಿ ಹೊಡೆತ ದಾಖಲಿಸಿದ್ದರು. 

ನಡಾಲ್‌ ಜಯಭೇರಿ 
ಮಳೆಯಿಂದ ಮಂಗಳವಾರಕ್ಕೆ ಮುಂದೂಡಿದ ಪಂದ್ಯದಲ್ಲಿ ವಿಶ್ವದ ನಂಬರ್‌ ವನ್‌ ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಕೊನೆಗೂ ಗೆಲುವಿನ ನಗೆ ಚೆಲ್ಲಿದ್ದಾರೆ. ಸೋಮವಾರ ಸಂಜೆ ಮಳೆಯಿಂದ ಆಟ ನಿಂತಾಗ ನಡಾಲ್‌ ಅವರು ಇಟಲಿಯ ಸಿಮೋನ್‌ ಬೊಲೇಲಿ ವಿರುದ್ಧ 6-4, 6-3, 0-3 ಸೆಟ್‌ಗಳಿಂದ ಮುನ್ನಡೆಯಲ್ಲಿದ್ದರು. ಮೂರನೇ ಸೆಟ್‌ನಲ್ಲಿ ನಡಾಲ್‌ ಮಳೆ ವಿರಾಮದ ಬಳಿಕ ಭರ್ಜರಿಯಾಗಿ ಆಡಿ 7-6 (11-9) ಅಂತರದಿಂದ ಗೆದ್ದು ಜಯಭೇರಿ ಬಾರಿಸಿದರು. 

ಜೊಕೋವಿಕ್‌ಗೆ ಸುಲಭ ಜಯ
12 ಬಾರಿಯ ಗ್ರ್ಯಾನ್‌ ಸ್ಲಾಮ್‌ ವಿಜೇತ ಜೊಕೋವಿಕ್‌ ಅವರು ರೊಜಾರಿಯೊ ದುತ್ರ ಸಿಲ್ವ ಅವರನ್ನು 6-3, 6-4, 6-4 ಸೆಟ್‌ಗಳಿಂದ ಪರಾಭವಗೊಳಿಸಿದರು. ಗೆಲುವಿನೊಂದಿಗೆ ಈ ವರ್ಷ ಆರಂಭ ಮಾಡಿರುವುದು ಒಳ್ಳೆಯದಾಗಿದೆ.   ಅವರು ಬಹಳಷ್ಟು ಸ್ಪಿನ್‌ ಮಾಡುತ್ತ ಆಡಿದರು ಎಂದು ಜೊಕೋವಿಕ್‌ ತಿಳಿಸಿದರು. ಅವರು ಮುಂದಿನ ಸುತ್ತಿನಲ್ಲಿ ಜಾಮಿ ಮುನಾರ್‌ ಅವರನ್ನು ಎದುರಿಸಲಿದ್ದಾರೆ.

ಶಪೋವಲೋವ್‌ಗೆ ಗೆಲುವು
ಕೆನಡದ ಹದಿಹರೆಯದ ಡೆನಿಸ್‌ ಶಪೋವಲೋವ್‌ ಅವರು ಆಸ್ಟ್ರೇಲಿಯದ ಜಾನ್‌ ಮಿಲ್ಮನ್‌ ಅವರನ್ನು ಸುಲಭವಾಗಿ ಮಣಿಸಿ ದ್ವಿತೀಯ ಸುತ್ತು ತಲುಪಿದರು. ಫ್ರೆಂಚ್‌ ಓಪನ್‌ನ ಮುಖ್ಯ ಡ್ರಾದಲ್ಲಿ ಮೊದಲ ಬಾರಿ ಆಡಿದ ಮಿಲ್ಮನ್‌ ಅವರನ್ನು ಶಪೋವಲೋವ್‌ 7-5, 6-4, 6-2 ಸೆಟ್‌ಗಳಿಂದ ಉರುಳಿಸಿದರು. ಮುಂದಿನ ಸುತ್ತಿನಲ್ಲಿ ಅವರು ಜರ್ಮನಿಯ ಮ್ಯಾಕ್ಸಿ ಮಿಲಿಯನ್‌ ಮಾರ್ಟೆರರ್‌ ಅವರನ್ನು ಎದುರಿಸಲಿದ್ದಾರೆ. ಈ ಅಂಗಣದಲ್ಲಿ ಕಳೆದ ಕೆಲವು ವಾರಗಳಲ್ಲಿ ನಂಬಲಸಾಧ್ಯ ರೀತಿಯಲ್ಲಿ ಟೆನಿಸ್‌ ಆಟ ಆಡುತ್ತಿದ್ದೇನೆ ಎಂದು ಶಪೋವಲೋವ್‌ ಹೇಳಿದ್ದಾರೆ. ಗ್ರ್ಯಾನ್‌ ಸ್ಲಾಮ್‌ ಕೂಟದಲ್ಲಿ ಅವರಿಗೆ ಇದೇ ಮೊದಲ ಬಾರಿ ಶ್ರೇಯಾಂಕ ನೀಡಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

1 ಲಕ್ಷ ರೂ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಪ.ಪಂ ಕಂಪ್ಯೂಟರ್ ಆಪರೇಟರ್ ಕುಮಾರಸ್ವಾಮಿ

1 ಲಕ್ಷ ರೂ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

spb

ಎಸ್.ಪಿ.ಬಿ ಸ್ವರಲೀನ: ಸಂಗೀತ ಗೌರವ ಸಲ್ಲಿಸಿದ ಎ.ಆರ್ ರೆಹಮಾನ್

ಭಾರತದ ಹೊಸ ಕ್ರಶ್: ಕ್ರಿಕೆಟ್ ತಾರೆ ಪ್ರಿಯಾ ಪೂನಿಯಾ ಪಯಣದ ಹಿಂದಿದೆ ರೋಚಕ ಕಹಾನಿ

ಭಾರತದ ಹೊಸ ಕ್ರಶ್: ಕ್ರಿಕೆಟ್ ತಾರೆ ಪ್ರಿಯಾ ಪೂನಿಯಾ ಪಯಣದ ಹಿಂದಿದೆ ರೋಚಕ ಕಹಾನಿ

ಕಾಯ್ದೆಯಲ್ಲಿ ಬದಲಾವಣೆಗೆ ಒಪ್ಪದ ಸಿಎಂ: ರೈತರ ಜೊತೆ ಸಭೆ ವಿಫಲ, ಸೆ.28ರಂದು ಬಂದ್ ಖಚಿತ

ಕಾಯ್ದೆಯಲ್ಲಿ ಬದಲಾವಣೆಗೆ ಒಪ್ಪದ ಸಿಎಂ: ರೈತರ ಜೊತೆ ಸಭೆ ವಿಫಲ, ಸೆ.28ರಂದು ಬಂದ್ ಖಚಿತ

‘ನನ್ನ ಪಾತ್ರಗಳನ್ನು ಹೊಸ ಎತ್ತರಕ್ಕೆ ಒಯ್ದಿದ್ದೇ SPB ಅವರ ಧ್ವನಿ’: ಹಿರಿಯ ನಟ ಅನಂತ್ ಕಂಬನಿ

‘ನನ್ನ ಪಾತ್ರಗಳನ್ನು ಹೊಸ ಎತ್ತರಕ್ಕೆ ಒಯ್ದಿದ್ದೇ SPB ಅವರ ಧ್ವನಿ’: ಹಿರಿಯ ನಟ ಅನಂತ್ ಕಂಬನಿ

ಸ್ಯಾಂಡಲ್ ವುಡ್ ನೆನಪಿಸಿಕೊಂಡಂತೆ ಎಸ್.ಪಿ ಬಾಲಸುಬ್ರಹ್ಮಣ್ಯಂ..

ಸ್ಯಾಂಡಲ್ ವುಡ್ ನೆನಪಿಸಿಕೊಂಡಂತೆ ಎಸ್.ಪಿ ಬಾಲಸುಬ್ರಹ್ಮಣ್ಯಂ..

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದ ಹೊಸ ಕ್ರಶ್: ಕ್ರಿಕೆಟ್ ತಾರೆ ಪ್ರಿಯಾ ಪೂನಿಯಾ ಪಯಣದ ಹಿಂದಿದೆ ರೋಚಕ ಕಹಾನಿ

ಭಾರತದ ಹೊಸ ಕ್ರಶ್: ಕ್ರಿಕೆಟ್ ತಾರೆ ಪ್ರಿಯಾ ಪೂನಿಯಾ ಪಯಣದ ಹಿಂದಿದೆ ರೋಚಕ ಕಹಾನಿ

ಸಚಿನ್‌ ಪ್ರತಾಪ್

ರಾ. ಕಬಡ್ಡಿ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ರಾಜ್ಯದ ಆಟಗಾರನಿಗೆ ತರಬೇತಿಗಿಲ್ಲ ಆಹ್ವಾನ!

ಸೋಲಿನ ಆಘಾತದಲ್ಲೂ ಕೊಹ್ಲಿಗೆ 12 ಲಕ್ಷ ರೂ. ದಂಡ: ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು?

ಸೋಲಿನ ಆಘಾತದಲ್ಲೂ ಕೊಹ್ಲಿಗೆ 12 ಲಕ್ಷ ರೂ. ದಂಡ: ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು?

ಸಚಿನ್‌ ಪುತ್ರಿ ಸಾರಾ-ಶುಬ್ಮನ್‌ ನಡುವೆ ಪ್ರಣಯ ಪ್ರಸಂಗ? ಸಚಿನ್ ಅಳಿಯನಾಗುತ್ತಾನಾ ಗಿಲ್

ಸಚಿನ್‌ ಪುತ್ರಿ ಸಾರಾ-ಶುಬ್ಮನ್‌ ನಡುವೆ ಪ್ರಣಯ ಪ್ರಸಂಗ? ಸಚಿನ್ ಅಳಿಯನಾಗುತ್ತಾನಾ ಗಿಲ್

IPL 2020: ಇಂದು ಡೆಲ್ಲಿ- ಚೆನ್ನೈಕದನ ಕುತೂಹಲ

IPL 2020: ಇಂದು ಡೆಲ್ಲಿ- ಚೆನ್ನೈಕದನ ಕುತೂಹಲ

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavaniಹೊಸ ಸೇರ್ಪಡೆ

1 ಲಕ್ಷ ರೂ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಪ.ಪಂ ಕಂಪ್ಯೂಟರ್ ಆಪರೇಟರ್ ಕುಮಾರಸ್ವಾಮಿ

1 ಲಕ್ಷ ರೂ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

spb

ಎಸ್.ಪಿ.ಬಿ ಸ್ವರಲೀನ: ಸಂಗೀತ ಗೌರವ ಸಲ್ಲಿಸಿದ ಎ.ಆರ್ ರೆಹಮಾನ್

ಬೆಂಗಳೂರು – ಬೆಳಗಾವಿ ರೈಲಿಗೆ ಸುರೇಶ ಅಂಗಡಿ ಹೆಸರಿಡಿ: ನಿರಾಣಿ

ಬೆಂಗಳೂರು – ಬೆಳಗಾವಿ ರೈಲಿಗೆ ಸುರೇಶ ಅಂಗಡಿ ಹೆಸರಿಡಿ: ನಿರಾಣಿ

ಭಾರತದ ಹೊಸ ಕ್ರಶ್: ಕ್ರಿಕೆಟ್ ತಾರೆ ಪ್ರಿಯಾ ಪೂನಿಯಾ ಪಯಣದ ಹಿಂದಿದೆ ರೋಚಕ ಕಹಾನಿ

ಭಾರತದ ಹೊಸ ಕ್ರಶ್: ಕ್ರಿಕೆಟ್ ತಾರೆ ಪ್ರಿಯಾ ಪೂನಿಯಾ ಪಯಣದ ಹಿಂದಿದೆ ರೋಚಕ ಕಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.