
Team India; ಟ್ರೈನರ್ ಬಂದು ಸಿರಾಜ್ ಬಾಲ್ ಹಾಕದಂತೆ ತಡೆದರು..: ರೋಹಿತ್ ಶರ್ಮಾ
Team Udayavani, Sep 18, 2023, 12:39 PM IST

ಕೊಲಂಬೊ: ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ಶ್ರೀಲಂಕಾ ತಂಡವನ್ನು ಸೋಲಿಸಿ ಎಂಟನೇ ಬಾರಿಗೆ ಕಪ್ ಗೆದ್ದುಕೊಂಡಿದೆ. ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ಶ್ರೀಲಂಕಾವು ಕೇವಲ 50 ರನ್ ಗೆ ಆಲೌಟಾಗಿ ಮುಖಭಂಗ ಅನುಭವಿಸಿದೆ.
ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರು ಬೌಲಿಂಗ್ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಏಳು ಓವರ್ ಬೌಲಿಂಗ್ ಮಾಡಿದ ಸಿರಾಜ್ ಪ್ರಮುಖ ಆರು ವಿಕೆಟ್ ಕಿತ್ತು ಲಂಕಾ ಅಧಪತನಕ್ಕೆ ಕಾರಣರಾದರು. ಅದರಲ್ಲೂ ಸಿರಾಜ್ ಒಂದು ಓವರ್ ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು.
ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ ಅವರು ಸಿರಾಜ್ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ವೇಗದ ಬೌಲರ್‌ಗಳು ಈ ರೀತಿಯ ಪ್ರದರ್ಶನ ನೀಡುವುದನ್ನು ನೋಡಿದಾಗ ನನಗೆ ಸಾಕಷ್ಟು ತೃಪ್ತಿ ಸಿಗುತ್ತದೆ. ಎಲ್ಲಾ ನಾಯಕರು ವೇಗದ ಬೌಲಿಂಗ್ ನೋಡಿ ಬಹಳಷ್ಟು ಹೆಮ್ಮೆಪಡುತ್ತಾರೆ. ಅದಕ್ಕೆ ನಾನು ಭಿನ್ನವಾಗಿಲ್ಲ. ನಾವು ಅದ್ಭುತ ವೇಗದ ಬೌಲರ್ ಗಳನ್ನು ಹೊಂದಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:Road Mishap: ಭೀಕರ ರಸ್ತೆ ಅಪಘಾತ… ಬಿಜೆಪಿ ಸಂಸದ ಸತೀಶ್ ಚಂದ್ರ ದುಬೆ ಆಸ್ಪತ್ರೆಗೆ ದಾಖಲು
“ಅವರೆಲ್ಲರೂ ವಿಭಿನ್ನ ಕೌಶಲ್ಯಗಳನ್ನು ಹೊಂದಿದ್ದಾರೆ. ಒಬ್ಬರು ತ್ವರಿತವಾಗಿ ಬೌಲ್ ಮಾಡಬಹುದು, ಒಬ್ಬರು ಚೆಂಡನ್ನು ಸ್ವಿಂಗ್ ಮಾಡಬಹುದು, ಒಬ್ಬರು ಉತ್ತಮ ಬೌನ್ಸ್ ಪಡೆಯಬಹುದು. ನೀವು ಈ ಎಲ್ಲಾ ಅಂಶಗಳನ್ನು ಒಂದೇ ತಂಡದಲ್ಲಿ ಪಡೆದಾಗ, ಅದು ಉತ್ತಮ ಸಂಗತಿ” ಎಂದು ರೋಹಿತ್ ಹೇಳಿದ್ದಾರೆ.
ಸಿರಾಜ್ ಗೆ ಸತತ ಏಳು ಓವರ್ ನೀಡಿದ ಬಗ್ಗೆ ರೋಹಿತ್ ಮಾತನಾಡಿದ್ದಾರೆ. “ಸಿರಾಜ್ ಬೌಲಿಂಗನ್ನು ಸ್ಲಿಪ್ ನಲ್ಲಿ ನಿಂತು ವೀಕ್ಷಿಸಲು ತುಂಬಾ ಸಂತೋಷವಾಗುತ್ತದೆ. ಅವರು ಚೆಂಡನ್ನು ಇತರ ಇಬ್ಬರಿಗಿಂತ ಸ್ವಲ್ಪ ಹೆಚ್ಚು ಚಲಿಸುವಂತೆ ಮಾಡಿದರು. ಅವರು ಆ ಸ್ಪೆಲ್‌ನಲ್ಲಿ ಏಳು ಓವರ್ ಗಳನ್ನು ಬೌಲ್ ಮಾಡಿದರು, ಆದರೆ ನಾವು ಈಗ ಅವರಿಂದ ಬೌಲಿಂಗ್ ಮಾಡಿಸುವುದನ್ನು ನಿಲ್ಲಿಸಬೇಕು ಎಂದು ಟ್ರೇನರ್ ನಿಂದ ನನಗೆ ಸಂದೇಶ ಬಂತು. ಅವರು ಬೌಲಿಂಗ್ ಮಾಡಲು ಮತ್ತಷ್ಟು ಹಂಬಲಿಸುತ್ತಿದ್ದರು” ಎಂದು ರೋಹಿತ್ ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games ವೈಯಕ್ತಿಕ ಡ್ರೆಸ್ಸೇಜ್: ಅನುಷ್‌ಗೆ ಕಂಚು

Asian Games ಟೆನಿಸ್: ಬೋಪಣ್ಣ-ಭೋಸಲೆಗೆ ಕಂಚು ಖಚಿತ; ರಾಮ್‌ಕುಮಾರ್-ಮೈನೆನಿ ಫೈನಲಿಗೆ

Asian Games ಸ್ಕ್ವಾಷ್: ಭಾರತ ಸೆಮಿಫೈನಲಿಗೆ; ಎರಡು ಪದಕ ಖಚಿತ

Asian Games ಫುಟ್‌ಬಾಲ್: ಸೌದಿ ವಿರುದ್ಧ ಭಾರತಕ್ಕೆ 0-2 ಸೋಲು

Wushu: ಫೈನಲ್‌ನಲ್ಲಿ ವು ಕ್ಸಿಯೊವೈ ವಿರುದ್ಧ ಸೋಲು; ರೋಶಿಬಿನಾ ದೇವಿಗೆ ಬೆಳ್ಳಿ