ವಿಂಡೀಸ್‌ಗೆ ಮತ್ತೆ ಆಘಾತ

Team Udayavani, May 15, 2019, 6:17 AM IST

ಡಬ್ಲಿನ್‌: ವೆಸ್ಟ್‌ಇಂಡೀಸ್‌ ವಿರುದ್ಧ 2ನೇ ಪಂದ್ಯದಲ್ಲೂ ಗೆಲುವು ಸಾಧಿಸಿದ ಬಾಂಗ್ಲಾದೇಶ ತ್ರಿಕೋನ ಏಕದಿನ ಸರಣಿ ಫೈನಲ್ ಪ್ರವೇಶಿಸಿದೆ.

ಸೋಮವಾರ ನಡೆದ ಸರಣಿಯ 5ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್‌ಇಂಡೀಸ್‌ 9 ವಿಕೆಟ್ ಕಳೆದುಕೊಂಡು 247 ರನ್‌ ಗಳಿಸಿದರೆ, ಬಾಂಗ್ಲಾದೇಶ 47. 2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 248 ರನ್‌ ಬಾರಿಸಿ ಗೆದ್ದು ಸಂಭ್ರಮಿಸಿದೆ.

ಶನಿವಾರದ ಪಂದ್ಯದಲ್ಲಿ ವಿಂಡೀಸ್‌ ಆತಿಥೇಯ ಐರೆಲಂಡ್‌ತಂಡವನ್ನು 2ನೇ ಬಾರಿಗೆ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಆದರೆ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳಲ್ಲೂ ವಿಂಡೀಸ್‌ ಮುಗ್ಗರಿ ಸಿದೆ. 3ರಲ್ಲಿ 2 ಪಂದ್ಯಗಳನ್ನು ಗೆದ್ದು 10 ಅಂಕಗಳೊಂದಿಗೆ ಬಾಂಗ್ಲಾ ಅಗ್ರಸ್ಥಾನದಲ್ಲಿ ಫೈನಲ್ ಪ್ರವೇಶಿಸಿದೆ.

ಸುಲಭ ಗುರಿ ಬೆನ್ನತ್ತಿ ಹೊರಟ ಬಾಂಗ್ಲಾಕ್ಕೆ ಸೌಮ್ಯ ಸರ್ಕಾರ್‌ (54) ಮತ್ತು ಮುಸ್ತಾಫಿಕರ್‌ ರಹೀಮ್‌ (61) ಉತ್ತಮ ಆರಂಭ ನೀಡಿದರು. ಇವರಿಬ್ಬರ ಆಟಕ್ಕೆ ತಮಿಮ್‌ ಇಕ್ಬಾಲ್ (21), ಶಕೀಬ್‌ ಅಲ್ ಹಸನ್‌ (29), ಮೊಹಮ್ಮದ್‌ ಮಿಥುನ್‌ (43) ಮತ್ತು ಮೊಹಮ್ಮದುಲ್ಲ (ಔಟಾಗದೆ 30) ಸಾಥ್‌ ನೀಡಿ ತಂಡದ ಗೆಲುವಿಗೆ ಕಾರಣರಾದರು. ಆಶ್ಲೇ ನರ್ಸ್‌ 53ಕ್ಕೆ3 ವಿಕೆಟ್ ಕಿತ್ತರು.


ಈ ವಿಭಾಗದಿಂದ ಇನ್ನಷ್ಟು

  • ಲಂಡನ್‌: ವಿಶ್ವಕಪ್‌ಗೆ ಸಿದ್ಧವಾಗುತ್ತಿರುವ ಭಾರತದ ತಂಡದಲ್ಲೂ ಗಾಯದ ಸಮಸ್ಯೆ ಗೋಚರಿಸಿದೆ. ಆಲ್‌ರೌಂಡರ್‌ ವಿಜಯ್‌ ಶಂಕರ್‌ ನ್ಯೂಜಿಲ್ಯಾಂಡ್‌ ವಿರುದ್ಧದ ಅಭ್ಯಾಸ...

  • ಲಂಡನ್‌: ವಿಶ್ವಕಪ್‌ ನಾಯಕರೆಲ್ಲ ಕಳೆದ ರಾತ್ರಿ ಲಂಡನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದರು. "ನಿಮ್ಮ ತಂಡದಲ್ಲಿ ಎದುರಾಳಿ ತಂಡ ದ ಯಾವ ಆಟಗಾರ ಇರಬೇಕೆಂದು...

  • ಲಾಹೋರ್‌: ಮಗಳ ಅಂತ್ಯ ಸಂಸ್ಕಾರ ಮುಗಿಸಿದ ಪಾಕಿಸ್ಥಾನಿ ಕ್ರಿಕೆಟಿಗ ಆಸಿಫ್ ಅಲಿ ಶನಿವಾರ ವಿಶ್ವಕಪ್‌ ತಂಡವನ್ನು ಕೂಡಿಕೊಳ್ಳಲು ಲಂಡನ್‌ನತ್ತ ಪ್ರಯಾಣ ಬೆಳೆಸಿದರು. ಕಳೆದ...

  • 1983ರಲ್ಲಿ ಕಪಿಲ್‌ದೇವ್‌ ಪಡೆಯ ಪರಾಕ್ರಮವನ್ನು ಕಣ್ತುಂಬಿಸಿಕೊಳ್ಳದೇ ಇದ್ದವರಿಗೆ 28 ವರ್ಷಗಳಷ್ಟು ಸುದೀರ್ಘ‌ ಅವಧಿಯ ಬಳಿಕ ಧೋನಿ ಪಡೆ ಭರಪೂರ ರಂಜನೆ ಒದಗಿಸಿತು....

  • ಲಂಡನ್‌: ಭಾರೀ ನಿರೀಕ್ಷೆಯೊಂದಿಗೆ ಇಂಗ್ಲೆಂಡಿಗೆ ಸಾಗಿದ ಭಾರತ ತಂಡ ನ್ಯೂಜಿಲ್ಯಾಂಡ್‌ ಎದುರಿನ ಶನಿವಾರದ ಓವಲ್‌ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫ‌ಲ್ಯಕ್ಕೆ...

ಹೊಸ ಸೇರ್ಪಡೆ