ಕೆಕೆಆರ್: ಪ್ಯಾಟ್ ಕಮಿನ್ಸ್ ಬದಲು ಸೌಥಿ
Team Udayavani, Aug 27, 2021, 6:30 AM IST
ಹೊಸದಿಲ್ಲಿ: ಸೆಪ್ಟಂಬರ್ 19ರಿಂದ ಯುಎಇಯಲ್ಲಿ ಮುಂದು ವರಿಯಲಿರುವ ಐಪಿಎಲ್ ಪಂದ್ಯಾ ವಳಿಗೆ ಬದಲಿ ಆಟಗಾರರ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಕಿವೀಸ್ನ ಪೇಸರ್ ಟಿಮ್ ಸೌಥಿ ಅವರನ್ನು ಕೆಕೆಆರ್ ಸೆಳೆದುಕೊಂಡದ್ದು ಗುರು ವಾರದ ಬೆಳವಣಿಗೆ.
ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಸ್ಥಾನವನ್ನು ಟಿಮ್ ಸೌಥಿ ತುಂಬಲಿ ದ್ದಾರೆ. 2020ರಲ್ಲಿ ಕಮಿನ್ಸ್ ಅವರನ್ನು ಕೆಕೆಆರ್ 15.5 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು. ವೈಯಕ್ತಿಕ ಕಾರಣ ಗಳಿಂದ ಕಮಿನ್ಸ್ ಐಪಿಎಲ್ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಸೌಥಿ ಇದಕ್ಕೂ ಮುನ್ನ ರಾಜಸ್ಥಾನ್, ಚೆನ್ನೈ, ಮುಂಬೈ ಮತ್ತು ಆರ್ಸಿಬಿ ಪರ ಆಡಿದ್ದರು.
ಕಿವೀಸ್ನ ಮತ್ತೋರ್ವ ಆಟಗಾರ ಗ್ಲೆನ್ ಫಿಲಿಪ್ಸ್ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಅವರು ಆರ್ಚರ್ ಬದಲು ಆಡಲಿದ್ದಾರೆ. ರಾಜಸ್ಥಾನ್ ತಂಡದಲ್ಲಿ ಮತ್ತೂಂದು ಬದಲಾವಣೆ ಕಂಡು ಬಂದಿದ್ದು, ಟೈ ಬದಲು ದ.ಆಫ್ರಿಕಾದ ತಬ್ರೇಜ್ ಶಂಸಿ ಸೇರ್ಪಡೆಗೊಂಡಿದ್ದಾರೆ. ಇಂಗ್ಲೆಂಡಿನ ಲೆಗ್ಸ್ಪಿನ್ನರ್ ಆದಿಲ್ ರಶೀದ್ ಪಂಜಾಬ್ ತಂಡಕ್ಕೆ ಬಂದಿದ್ದಾರೆ. ಇವರು ಜೇ ರಿಚರ್ಡ್ಸನ್ ಸ್ಥಾನ ತುಂಬುವರು.