U.S. Open tennis: ಜೊಕೋವಿಕ್ಗೆ ಬೆವರಿಳಿಸಿದ ಲಾಸ್ಲೊ ಡಿಜೆರೆ
Team Udayavani, Sep 2, 2023, 11:59 PM IST
ನ್ಯೂಯಾರ್ಕ್: ಯುಎಸ್ ಓಪನ್ ಪಂದ್ಯಾವಳಿಯಲ್ಲಿ ದೊಡ್ಡ ದೊಂದು ಏರುಪೇರಿನ ಸಾಧ್ಯತೆ ಸ್ವಲ್ಪದರಲ್ಲೇ ತಪ್ಪಿತು. ಇಲ್ಲಿ ಮೊದಲ ಸುತ್ತಿನ ಪಂದ್ಯ ಗೆಲ್ಲುವಷ್ಟರಲ್ಲಿ ಮರಳಿ ನಂ.1 ಪಟ್ಟ ಅಲಂಕರಿಸಿದ ನೊವಾಕ್ ಜೊಕೋವಿಕ್ ತಮ್ಮದೇ ದೇಶದ ಲಾಸ್ಲೊ ಡಿಜೆರೆ ವಿರುದ್ಧದ 3ನೇ ಸುತ್ತಿನ ಪಂದ್ಯದಲ್ಲಿ ಸೋಲಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾ ದರು. ಮೊದಲೆರಡು ಸೆಟ್ಗಳನ್ನು ಕಳೆದುಕೊಂಡೂ ತಿರುಗಿ ಬಿದ್ದ ಜೊಕೋ ಪ್ರಿ-ಕ್ವಾರ್ಟರ್ ಫೈನಲ್ ತಲುಪುವಲ್ಲಿ ಯಶಸ್ವಿಯಾದರು. ಅವರ ಗೆಲುವಿನ ಅಂತರ 4-6, 4-6, 6-1, 6-1, 6-3.
ಈ “ಆಲ್ ಸರ್ಬಿಯನ್’ ಸೆಣ ಸಾಟ ಅತ್ಯಂತ ಬಿರುಸಿನಿಂದ ಕೂಡಿತ್ತು. ಲಾಸ್ಲೊ ಡಿಜೆರೆ ಮೊದ ಲೆರಡು ಸೆಟ್ ಗೆದ್ದಾಗ ನೂತನ ಇತಿಹಾಸ ನಿರ್ಮಿಸುವ ಎಲ್ಲ ಸಾಧ್ಯತೆ ಇತ್ತು. ಆದರೆ ಕೊನೆ ಯಲ್ಲಿ ಜೊಕೋ ಅನುಭವವೇ ಮೇಲುಗೈ ಸಾಧಿಸಿತು. ಇದು ಮೊದಲೆರಡು ಸೆಟ್ ಕಳೆದುಕೊಂಡ ಬಳಿಕ ಜೊಕೋವಿಕ್ ಗೆದ್ದುಬಂದ 8ನೇ ನಿದರ್ಶನ. ಹಾಗೆಯೇ 5 ಸೆಟ್ಗಳ ಹೋರಾಟದಲ್ಲಿ ಅವರ ಗೆಲುವಿನ ಬಲಾಬಲ 38-11ಕ್ಕೆ ವಿಸ್ತರಿಸಲ್ಪಟ್ಟಿತು.
ಜೊಕೋವಿಕ್ ಅವರಿನ್ನು ಕ್ರೊವೆ ಇಶಿಯಾದ ಅರ್ಹತಾ ಆಟಗಾರ ಬೋರ್ನ ಗೋಜೊ ವಿರುದ್ಧ ಆಡಲಿದ್ದಾರೆ. ಗೋಜೊ ಅವರಿಗೆ ಇದು ಮೊದಲ ಯುಎಸ್ ಓಪನ್ ಪಂದ್ಯಾವಳಿಯಾಗಿದೆ.