ಶಾಪಿಂಗ್‌ ಮಾಲ್‌ನಲ್ಲಿ ಕಾಂಬ್ಳಿ ಪತ್ನಿ ರಂಪಾಟ

Team Udayavani, Jul 3, 2018, 6:00 AM IST

ಮುಂಬಯಿ: ಶಾಪಿಂಗ್‌ ಮಾಲ್‌ ಒಂದರಲ್ಲಿ ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದರೆಂಬ ಕಾರಣಕ್ಕಾಗಿ ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿಯವರ ಪತ್ನಿ ಆಂಡ್ರಿಯಾ ಹೆವಿಟ್‌, ಸ್ಥಳದಲ್ಲೇ 59 ವರ್ಷದ ಹಿರಿಯರ ಮೇಲೆ ಹಲ್ಲೆ ನಡೆಸಿದ್ದಾರೆ. 

ಹಲ್ಲೆಗೊಳಗಾದ ವ್ಯಕ್ತಿ ಬಾಲಿವುಡ್‌ನ‌ ಅಂಕಿತ್‌ ತಿವಾರಿ ತಂದೆ ಆರ್‌.ಕೆ. ತಿವಾರಿ ಎಂದು ಮಾಧ್ಯಮಗಳು ವರದಿ ಮಾಡಿವೆ. “ಅಕಸ್ಮಾತ್‌ ಆಗಿ ಕೈ ತಾಗಿದ್ದಕ್ಕೆ ನನ್ನ ಮೇಲೆ ಕಾಂಬ್ಳಿ ಹಾಗೂ ಅವರ ಪತ್ನಿ ಆಂಡ್ರಿಯಾ ಹಲ್ಲೆ ನಡೆಸಿದರು. ಅಲ್ಲದೆ, ಚಪ್ಪಲಿಯಿಂದಲೂ ಆಂಡ್ರಿಯಾ ನನ್ನನ್ನು ಹೊಡೆ ದರು’ ಎಂದು ತಿವಾರಿ ಆರೋಪಿಸಿದ್ದಾರೆ. 

ಈ ಬಗ್ಗೆ ಮಾಧ್ಯಮ ಪ್ರತಿನಿಧಿ ಬಳಿ ಪ್ರತಿಕ್ರಿಯಿಸಿರುವ ಕಾಂಬ್ಳಿ, ಅಸಭ್ಯವಾಗಿ ಸ್ಪರ್ಶಿಸಿದ್ದಕ್ಕೇ ತಿವಾರಿ ವಿರುದ್ಧ ಸಿಡಿದೆದ್ದಿದ್ದೆವು. ಆದರೆ, ಈ ಘಟನೆ ಜರಗಿದ ಕೆಲವು ನಿಮಿಷಗಳ ಬಳಿಕ ಶಾಪಿಂಗ್‌ ಮಾಲ್‌ನ ಫ‌ುಡ್‌ ಕೋರ್ಟ್‌ನಲ್ಲಿದ್ದಾಗ ತಿವಾರಿ ಮಕ್ಕಳು ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದರು’ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ