ಆರ್ಸಿಬಿ ನಾಯಕತ್ವಕ್ಕೂ ವಿರಾಟ್ ವಿದಾಯ
Team Udayavani, Sep 19, 2021, 11:19 PM IST
ದುಬಾೖ: ಮೊನ್ನೆಯಷ್ಟೇ ಟೀಮ್ ಇಂಡಿಯಾದ ಟಿ20 ನಾಯಕತ್ವವನ್ನು ಬಿಡುವುದಾಗಿ ತಿಳಿಸಿದ ವಿರಾಟ್ ಕೊಹ್ಲಿ ಇದೀಗ ಆರ್ಸಿಬಿ ನಾಯಕತ್ವಕ್ಕೂ ಗುಡ್ಬೈ ಹೇಳುವುದಾಗಿ ಘೋಷಿಸಿದ್ದಾರೆ.
2021ನೇ ಸಾಲಿನ ಐಪಿಎಲ್ ಮುಗಿದ ಬಳಿಕ ಆರ್ಸಿಬಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಯುವುದಾಗಿ ರವಿವಾರ ರಾತ್ರಿ ತಿಳಿಸಿದ್ದಾರೆ.
2013ರಲ್ಲಿ ವೆಟರಿ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡ ವಿರಾಟ್ ಕೊಹ್ಲಿ, 132 ಪಂದ್ಯಗಳಲ್ಲಿ ಆರ್ಸಿಬಿಯನ್ನು ಮುನ್ನಡೆಸಿದ್ದಾರೆ. 62ರಲ್ಲಿ ತಂಡ ಜಯಿಸಿದ್ದು, 66ರಲ್ಲಿ ಸೋಲನುಭವಿಸಿದೆ. 4 ಪಂದ್ಯಗಳು ಫಲಿತಾಂಶ ಕಂಡಿಲ್ಲ.
“ಇದೊಂದು ಅಮೋಘ ಹಾಗೂ ಸ್ಫೂರ್ತಿದಾಯಕ ಪಯಣ. ಪ್ರತಿಭಾನ್ವಿತರ ಪಡೆಯ ನಾಯಕತ್ವ ವಹಿಸುವ ಅವಕಾಶ ಕಲ್ಪಿಸಿಕೊಟ್ಟ ಆರ್ಸಿಬಿ ಹಾಗೂ ಈ ಫ್ರಾಂಚೈಸಿಯ ಕುಟುಂಬಕ್ಕೆ ಧನ್ಯವಾದಗಳು’ ಎಂಬುದಾಗಿ ಕೊಹ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ