ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವೆ: ಶಮಿ 


Team Udayavani, Mar 12, 2018, 6:10 AM IST

Mohammed-Shami-and-Hasin-Ja.jpg

ನವದೆಹಲಿ: ಪತ್ನಿ ಹಸಿನ್‌ ಜಹಾನ್‌ ಮತ್ತು ತಮ್ಮ ನಡುವಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕ್ರಿಕೆಟಿಗ ಮೊಹಮ್ಮದ್‌ ಶಮಿ, ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಾನು ಸಿದ್ಧನಿದ್ದೇನೆ. ನನ್ನ ಮಗಳ ಭವಿಷ್ಯದ ದೃಷ್ಟಿಯಿಂದ ಇದು ಅಗತ್ಯ ಎಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಕೋಲ್ಕತಾಗೆ ತೆರಳುತ್ತೇನೆ. ಸಮಸ್ಯೆ ಬಗೆಹರಿಸಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ. ಶಮಿ ಮೇಲೆ ಈಗಾಗಲೇ ಅವರ ಪತ್ನಿ ಕೊಲೆ ಯತ್ನ ಕೇಸು ದಾಖಲಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮೊಬೈಲ್‌ ಸಿಗದಿದ್ರೆ ವಿಚ್ಛೇದನ ನೀಡುತ್ತಿದ್ದರು: ಶಮಿ ಪತ್ನಿ ಹಸಿನ್‌
ನವದೆಹಲಿ:
ಶಮಿ ಗೌಪ್ಯವಾಗಿ ಇಟ್ಟುಕೊಂಡಿರುವ ಮೊಬೈಲ್‌ ನನ್ನ ಕೈಗೆ ಸಿಗದಿದ್ದರೆ ಈಗಾಗಲೇ ಅವರು ತನಗೆ ವಿಚ್ಛೇದನ ನೀಡಿರುತ್ತಿದ್ದರು ಎಂದು ಕ್ರಿಕೆಟಿಗ ಮೊಹಮ್ಮದ್‌ ಶಮಿ ಪತ್ನಿ ಹಸಿನ್‌ ಜಹಾನ್‌ ಆರೋಪಿಸಿದ್ದಾರೆ.

ಭಾನುವಾರ ಮಾಧ್ಯಮಗಳ ಜತೆ ಮಾತನಾಡಿದ ಹಸಿನ್‌, ತುಂಬಾ ಸಮಯದಿಂದ ಶಮಿ ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ನಾನು ಪ್ರಯತ್ನಿಸಿದ್ದೇನೆ. ಆದು ಸಾಧ್ಯವಾಗಿಲ್ಲ. ಒಮ್ಮೆ ಅವರ ಮೊಬೈಲ್‌ ನನ್ನ ಕೈಗೆ ಸಿಗದಿದ್ದರೆ ನನಗೆ ವಿಚ್ಛೇದನ ನೀಡಿ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದರು ಎಂದು ದೂರಿದ್ದಾರೆ. ಶಮಿ ಮತ್ತು ತಮ್ಮ ನಡುವೆ ನಡೆದ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಇಬ್ಬರ ನಡುವಿನ ಬಿಕ್ಕಟ್ಟು ಬೀದಿಗೆ ಬಂದಿದೆ. ಈಗಾಗಲೇ ಶಮಿಗೆ ಅನೇಕ ಮಹಿಳೆಯರ ಜತೆ ದೈಹಿಕ ಸಂಬಂಧವಿದೆ. ತನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಜಹಾನ್‌ ದೂರು ದಾಖಲಿಸಿದ್ದಾರೆ. ಇತ್ತ ಶಮಿಗೆ ಭಾರತ ತಂಡದಲ್ಲಿ ಆಡದ ಸ್ಥಿತಿ ನಿರ್ಮಾಣವಾಗಿದೆ. ಐಪಿಎಲ್‌ನಿಂದಲೂ ಹೊರಬೀಳುವ ಸಾಧ್ಯತೆ ಇದೆ.

ಹಸಿನ್‌ಗೆ ಶಮಿ 2ನೇ ಪತಿ
ಹಸಿನ್‌ ಜಹಾನ್‌ಗೆ ಶಮಿ ಮೊದಲನೇ ಪತಿ ಅಲ್ಲ ಅನ್ನುವ ಕುತೂಹಲಕಾರಿ ವಿಷಯ ಹೊರಬಂದಿದೆ. ಐಪಿಎಲ್‌ವೊಂದರಲ್ಲಿ ಭೇಟಿಯಾದ ಶಮಿ ಮತ್ತು ಹಸಿನ್‌ ಸ್ನೇಹಿತರಾಗಿ ನಂತರ ಪ್ರೇಮಿಗಳಾಗಿ 2012 ರಿಂದ ಡೇಟಿಂಗ್‌ ಆರಂಭಿಸಿದ್ದರು. 2014 ರಲ್ಲಿ ವಿವಾಹವಾಗಿದ್ದು, ಈ ಜೋಡಿಗೆ 3 ವರ್ಷದ ಹೆಣ್ಣು ಮಗಳು ಇದ್ದಾರೆ. ಆದರೆ ಹಸಿನ್‌ ಇದಕ್ಕೂ ಮುನ್ನ ಮತ್ತೂಬ್ಬನ್ನನು ವಿವಾಹವಾಗಿ ವಿಚ್ಚೇದನ ಪಡೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಹಸಿನ್‌ ಅವರ ಮೊದಲನೇ ಪತಿ ಸೈಫ‌ುದ್ದೀನ್‌, ಶಮಿ ಮತ್ತು ಹಸಿನ್‌ ನಡುವಿನ ಘಟನೆಗೂ ನನಗೂ ಸಂಬಂಧವಿಲ್ಲ. ತಾನು 10ನೇ ತರಗತಿಯಲ್ಲಿದ್ದಾಗ ಹಸಿನ್‌ಗೆ ಪ್ರಪೋಸ್‌ ಮಾಡಿದ್ದೆ. 2002 ರಿಂದ ನಾವು ಜತೆಯಾಗಿಯೇ ಇದ್ದೇವು. ನಮಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. 2010ರಲ್ಲಿ ನಮಗೆ ವಿಚ್ಛೇದನವಾಗಿದೆ. ಆ ನಂತರ ಆಗಾಗ ಫೋನ್‌ ಮಾಡಿ ಮಕ್ಕಳ ಬಗ್ಗೆ ವಿಚಾರಿಸುತ್ತಿದ್ದಳು ಎಂದು ತಿಳಿಸಿದ್ದಾರೆ ಎಂದು ಆಗ್ಲ ಮಾಧ್ಯಮಗಳು ವರದಿ ಮಾಡಿವೆ.

ಟಾಪ್ ನ್ಯೂಸ್

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

No plan fro rest to Bumrah

Mumbai Indians; ಬುಮ್ರಾಗೆ ವಿಶ್ರಾಂತಿ: ಯಾವುದೇ ಯೋಜನೆಯಿಲ್ಲ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

yuzvendra Chahal

IPL 2024; ಹೊಸ ಭಾರತೀಯ ದಾಖಲೆ ಬರೆದ ಯುಜುವೇಂದ್ರ ಚಾಹಲ್

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.