ಇನ್ನೆಷ್ಟು ದಿನ ಅಡುಗೆಯನ್ನು ಪೋಸ್ಟ್ ಮಾಡುತ್ತೀರಿ? ಟೆನಿಸ್ ತಾರೆ ಸಾನಿಯಾ ಕಿಡಿ
Team Udayavani, Apr 5, 2020, 6:02 AM IST
ಹೈದರಾಬಾದ್: ಭಾರತ ಕಂಡ ಖ್ಯಾತ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೆಲ ತಾರೆಯರ ವಿರುದ್ಧ ಸಿಡಿದೆದ್ದಿದ್ದಾರೆ.
ದೇಶದೆಲ್ಲೆಡೆ ಹಸಿವಿದೆ. ಅಂತಹ ಹೊತ್ತಿನಲ್ಲಿ ಈ ತಾರೆಯರು ತಾವು ಬಿಡುವಿನ ವೇಳೆಯಲ್ಲಿ ಅಡುಗೆ ಮಾಡಿ, ಸಿದ್ಧಗೊಂಡ ತಿನಿಸಿನ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಹಾಕುತ್ತಿದ್ದಾರೆ. ಇದರಿಂದ ಸಿಟ್ಟಾಗಿರುವ ಸಾನಿಯಾ, ನಮಗಿನ್ನೂ ಅಡುಗೆ ಮಾಡುವುದು, ತಿನಿಸನ್ನು ಸಾಮಾಜಿಕ ತಾಣದಲ್ಲಿ ಪ್ರಕಟಿಸುವುದು ಸಾಕಾಗಿಲ್ಲವೇ? ಸ್ವಲ್ಪ ಯೋಚನೆ ಮಾಡಿ, ಸಾವಿರಾರು ಮಂದಿ ದೇಶದಲ್ಲಿ ಹಸಿವಿನಿಂದ ಸಾಯುತ್ತಿದ್ದಾರೆ. ಕನಿಷ್ಠ ದಿನಕ್ಕೊಮ್ಮೆ ಊಟ ಸಿಕ್ಕಿದರೆ ಅದೃಷ್ಟ ಎನ್ನುವ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಇವೆಲ್ಲ ಬೇಡದ ಕೆಲಸಗಳು ಎಂದು ಕಟುವಾಗಿ ಹೇಳಿದ್ದಾರೆ.