ಕರ್ಮನ್ ಕೌರ್ಗೆ ಡಬ್ಲ್ಯುಟಿಎ ಪ್ರಶಸ್ತಿ
Team Udayavani, Jul 25, 2023, 5:18 AM IST
ಇವಾನ್ಸ್ವಿಲ್ಲೆ (ಯುಎಸ್ಎ): ಭಾರತದ ತೃತೀಯ ಶ್ರೇಯಾಂಕಿತ ಆಟಗಾರ್ತಿ ಕರ್ಮನ್ ಕೌರ್ ಥಾಂಡಿ 60 ಸಾವಿರ ಡಾಲರ್ ಬಹುಮಾದ ಇವಾನ್ಸ್ವಿಲ್ಲೆ ಐಟಿಎಫ್ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಫೈನಲ್ನಲ್ಲಿ ಥಾಂಡಿ 4ನೇ ಶ್ರೇಯಾಂಕದ ಉಕ್ರೇನ್ ಎದುರಾಳಿ ಯುಲಿಯಾ ಸ್ಟಾರೊದುಬೆràವಾ ಅವರನ್ನು 7-5, 4-6, 6-1ರಿಂದ ಮಣಿಸಿದರು.
25 ವರ್ಷದ ಕರ್ಮನ್ ಕೌರ್ ಥಾಂಡಿ ಗೆದ್ದ 4ನೇ ಪ್ರಶಸ್ತಿ ಇದಾಗಿದೆ. ಇದರೊಂದಿಗೆ ಅವರು ರ್ಯಾಂಕಿಂಗ್ನಲ್ಲಿ 51 ಸ್ಥಾನ ಮೇಲೇರಿ 210ಕ್ಕೆ ತಲುಪಿದರು. ಭಾರತದ ವನಿತಾ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ ಅಂಕಿತಾ ರೈನಾ (200) ಅನಂತರದ ಸ್ಥಾನ ಕೌರ್ ಅವರದ್ದಾಗಿದೆ.