ಜಹೀರ್ ಗೆಳತಿ ಸಾಗರಿಕಾಗೆ ಕಿಚಾಯಿಸಿದ ಯುವಿ
Team Udayavani, Feb 19, 2017, 3:45 AM IST
ಮುಂಬೈ: ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ನಿಮಗೆ ಗೊತ್ತು. ಚಕ್ ದೇ ಇಂಡಿಯಾ ಸಿನಿಮಾದಿಂದ ಈಕೆ ಪ್ರಖ್ಯಾತಿಗೆ ಬಂದರು. ಘಾಟ್ಗೆ ಮತ್ತು ಕ್ರಿಕೆಟಿಗ ಜಹೀರ್ ಖಾನ್ ನಡುವೆ ಪ್ರಣಯ ಪ್ರಸಂಗ ನಡೆಯುತ್ತಿದೆಯೆಂದು ಇತ್ತೀಚೆಗೆ ಸುದ್ದಿಗಳು ಹರಿದಾಡುತ್ತಿವೆ.
ಈ ಜೋಡಿಯನ್ನು ಕ್ರಿಕೆಟಿಗ ಯುವರಾಜ್ ಸಿಂಗ್ ಟ್ವೀಟರ್ನಲ್ಲಿ ಕಿಚಾಯಿಸಿದ್ದಾರೆ. ತಮ್ಮ ನೂತನ ಚಿತ್ರ ಇರಾದಾ ಬಿಡುಗಡೆಯ ಸಂಭ್ರಮದಲ್ಲಿರುವ ಘಾಟ್ಗೆಗೆ ಟ್ವೀಟ್ ಮಾಡಿರುವ ಯುವಿ, ಶುಭಾಶಯಗಳು ಘಾಟ್ಗೆ ಯವರೇ. ನೀವು ಭಾರತ ತಂಡದ ಉಪನಾಯಕನೊಬ್ಬನೊಂದಿಗೆ ಡೇಟಿಂಗ್ ನಡೆಸಿದ ದಿನದಿಂದಲೂ ನಿಮ್ಮನ್ನು ನೆನಪಿಟ್ಟುಕೊಂಡಿದ್ದೇನೆ. ಆದರೆ ಅದನ್ನೇ ನಿಜಜೀವನದಲ್ಲೂ ಮಾಡದಿರುವುದು ಒಳಿತು ಎಂದು ಹೇಳಿದ್ದಾರೆ.
ಘಾಟ್ಗೆ ಚಕ್ ದೇ ಇಂಡಿಯಾ ಸಿನಿಮಾದಲ್ಲಿ ಹಾಕಿ ಆಟಗಾರ್ತಿ ಪಾತ್ರ ನಿಭಾಯಿಸಿದ್ದರು. ಅದರಲ್ಲಿ ಅವರು ಭಾರತ ಕ್ರಿಕೆಟ್ ತಂಡದ ಉಪನಾಯಕನೊಂದಿಗೆ ಪ್ರೀತಿ ಹೊಂದಿದ್ದ ಕಥೆಯಿತ್ತು. ಅದನ್ನೇ ಆಧರಿಸಿ ಯುವರಾಜ್ ಮೇಲಿನಂತೆ ಟ್ವೀಟ್ ಮಾಡಿದ್ದಾರೆ. ಘಾಟ್ಗೆಯೂ ಅದನ್ನು ಅಷ್ಟೇ ತಮಾಷೆಯಾಗಿ ಸ್ವೀಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.