ಭೀಕರ ಅಪಘಾತ; ನಿರೂಪಕ ಚಂದನ್ ಸೇರಿ ಇಬ್ಬರ ಸಾವು,ಇಬ್ಬರು ಗಂಭೀರ
Team Udayavani, May 24, 2018, 11:38 AM IST
ದಾವಣಗೆರೆ: ಹರಿಹರದ ಹನಗವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಲಾರಿಯೊಂದಕ್ಕೆ ಹಿಂಬದಿಯಿಂದ ಕಾರು ಢಿಕ್ಕಿಯಾದ ಪರಿಣಾಮ ಅದರಲ್ಲಿದ್ದ ಕಿರುತೆರೆ ನಟ, ನಿರೂಪಕ ಚಂದನ್(36) ಮತ್ತು ಇನ್ನೋರ್ವ ನಟಿ ಸ್ಥಳದಲ್ಲೇ ಸಾವನ್ನಪ್ಪಿ,ಇನ್ನಿಬ್ಬರು ಗಾಯಗೊಂಡಿರುವ ಭೀಕರ ದುರ್ಘಟನೆ ಗುರುವಾರ ನಡೆದಿದೆ.
ಹಲವು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಹೆಸರು ಮಾಡಿದ್ದ ಚಂದ್ರಶೇಖರ್ ಅವರು ಚಂದನ್ ಎಂಬ ಹೆಸರಿನಲ್ಲೆ ಪರಿಚಿತರಾಗಿದ್ದರು. ಅವರೊಂದಿಗಿದ್ದ ನಟಿ ಸಂತೋಷಿ (24)ಅವರೂ ಸಾವನ್ನಪ್ಪಿದ್ದು, ರಾಮು ಮತ್ತು ಸುನೀತಾ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರಿಹರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೇಗವಾಗಿ ಚಲಿಸುತ್ತಿದ್ದ ಕಾರು ಹಿಂಬದಿಯಿಂದ ಗುದ್ದಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ.