ಸಿಡಿ ಕೇಸ್‌: ಕತ್ತರಿ ಹಾಕದ ವಿಡಿಯೋ ಪತ್ತೆ


Team Udayavani, Mar 26, 2021, 11:56 AM IST

ಸಿಡಿ ಕೇಸ್‌: ಕತ್ತರಿ ಹಾಕದ ವಿಡಿಯೋ ಪತ್ತೆ

ಬೆಂಗಳೂರು: ಸಿಡಿ ಕೇಸ್‌ ತನಿಖೆ ಚುರುಕುಗೊಳಿಸಿರುವ ಎಸ್‌ ಐಟಿ ಅಧಿಕಾರಿಗಳಿಗೆ “ಕತ್ತರಿ ಹಾಕದ’ ಸುಮಾರು 2 ಗಂಟೆ 28 ನಿಮಿಷದ ವಿಡಿಯೋ ಸಿಕ್ಕಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಮತ್ತೂಂದೆಡೆ ಬುಧ ವಾರ ರಾತ್ರಿ 3ನೇ ಬಾರಿಗೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವ ರನ್ನು ಎಸ್‌ ಐಟಿ ಅವರ ಮನೆಯಲ್ಲೇ ವಿಚಾರಣೆ ನಡೆಸಿದೆ. ಇತ್ತೀಚೆಗೆ ಪ್ರಕರಣದ ‌ ಕಿಂಗ್‌ ಪಿನ್‌ ಎನ್ನ ಲಾದ ಪತ್ರ ಕರ್ತ ನರೇ ಶ್‌ ಗೌ ಡನ ಮನೆ ಯಲ್ಲಿದ್ದ ಲ್ಯಾಪ್‌ ಟಾಪ್‌ ರಿಟ್ರೈವ್‌ ಮಾಡಿ ದಾಗ ಕತ್ತರಿ ಹಾಕದ ವಿಡಿಯೋ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಚಿವರ ಸ್ಟಿಂಗ್‌ ಮಾಡ ಲೆಂದೆ ನಗರ ‌ದ ಎಸ್‌ಪಿ ರಸ್ತೆಯಲ್ಲಿರುವ ರಹಸ್ಯ ಕ್ಯಾಮೆ ರಾ ಖರೀದಿಸಿ ಯುವ ತಿಯ ವ್ಯಾನಿಟಿ ಬ್ಯಾಗ್‌ಗೆ ಅಳವಡಿಸಿ , ದೃಶ್ಯ ಸೆರೆಹಿಡಿದಿದ್ದರು. ಸದ್ಯ ಎಸ್‌ ಐಟಿ ಅಧಿಕಾರಿಗಳಿಗೆ ಸಿಕ್ಕಿರುವ 2ಗಂಟೆ 28 ನಿಮಷದ ವಿಡಿಯೋದಲ್ಲಿ ಮಾಜಿ ಸಚಿವರು‌ ಹೋಟೆಲ್‌ಗೆ ಬರುವುದು, ಕಾರು ಹತ್ತುವುದು, ಆಕೆಯ ಕೋಣೆಗೆ ಹೋಗುವುದು ಸೇರಿದಂತೆ ಪ್ರತಿ ಯೊಂದು ದೃಶ್ಯವು ಸೆರೆಯಾಗಿದೆ. ಆರೋಪಿಗಳು ಮಾಜಿ ಸಚಿವರು ಬರುವ ಒಂದೆರಡು ನಿಮಿಷ ಮೊದಲೇ ರಹಸ್ಯ ಕ್ಯಾಮೆರಾ ಆನ್‌ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ರಮೇಶ್‌ ಜಾರಕಿಹೊಳಿ ವಿಚಾರಣೆ:

ರಮೇಶ್‌ ಜಾರಕಿಹೊಳಿ ಅವರ ಸದಾಶಿವನಗರದಲ್ಲಿರುವ ನಿವಾಸಕ್ಕೆ ಬುಧವಾರ ಸಂಜೆ ಭೇಟಿ ನೀಡಿದ ಎಸ್‌ಐಟಿ ಅಧಿಕಾರಿಗಳ ತಂಡ ಸಂಜೆ 6.30 ರಿಂದ ರಾತ್ರಿ 9.30ರವರೆಗೆ ವಿಚಾರಣೆ ನಡೆಸಿದೆ. ಎಸಿಪಿ ಧರ್ಮೇಂದ್ರ ಕುಮಾ ರ್‌ ನೇತೃತ್ವದಲ್ಲಿ ನಡೆದ ವಿಚಾರಣೆ ವೇಳೆ ಮಾಜಿ ಸಚಿವರ ಮೊಬೈಲ್  ಜಪ್ತಿ ಮಾಡಲಾಗಿತ್ತು. ಆದರೆ, ಜಾರಕಿಹೊಳಿ ಮೊಬೈಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಸಿಕ್ಕಿಲ್ಲ. ಮೊಬೈಲ್ ಫಾರ್ಮಾಟ್‌ ಮಾಡಿದ ಹಿನ್ನೆಲೆಯಲ್ಲಿಪರಿಶೀಲನೆ ವೇಳೆ ಮೊಬೈಲ್‌ನಲ್ಲಿ ಯಾವುದೇ ಡೇಟಾ ಸಿಕ್ಕಿಲ್ಲ. ಇದೀಗ ಮೊಬೈಲ್‌ನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿರುವ ಎಸ್‌ಐಟಿ ರಿಟ್ರೀವ್‌ ಮಾಡಲು ಮುಂದಾಗಿದೆ.

ಹಲವು ಅನುಮಾನಗಳು: ಈ ಹಿಂದೆ ಬಿಡುಗಡೆಯಾದ ವಿಡಿಯೋದಲ್ಲಿ ಯುವತಿಯ ಮುಖ ಚಹರೆ ಸಂಪೂರ್ಣವಾಗಿ ಕಾಣುತ್ತಿತ್ತು. ಆದರೆ, ಗುರುವಾರ ಬಿಡುಗಡೆ ಯಾಗಿರುವ ಎರಡನೇ ವಿಡಿಯೊದಲ್ಲಿ ಯುವ ತಯ ಮುಖ ಭಾಗಶಃ ಮುಸುಕಾಗಿದೆ. ಅಲ್ಲದೆ, ಆಕೆಯ ಮಾತ ನಾ ಡುವ ಸಂದರ್ಭದಲ್ಲಿ ಮಕ್ಕಳು ಅಳುವ ಮತ್ತು ಆಟ ವಾಡುತ್ತಿರುವ ಹಿನ್ನೆಲೆ ಧ್ವನಿ ಕೇಳಿ ಬರುತ್ತಿದೆ. ಹೀಗಾಗಿ ಯುವತಿ ರಾಜ್ಯ ಅಥವಾ ಹೊರ ರಾಜ್ಯ ದಲ್ಲೇ ಸಂಬಂಧಿ ಅಥವಾ ಸ್ನೇಹಿತರ ಮನೆಯಲ್ಲಿ ಅಡ ಗಿ ಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬಿಡುಗಡೆಯಾದ‌ ವಿಡಿಯೋ ಎಡಿಟ್‌ ಆಗಿರುವ ವಿಡಿಯೋ ಆಗಿದೆ ಎಂದು ಎಸ್‌ ಐಟಿ ಮೂಲಗಳು ತಿಳಿಸಿವೆ.

ಎಸ್‌ ಐಟಿ ಸಂವಹನ ಕೊರತೆ? : 

ಸಣ್ಣ ಸಾಕ್ಷ್ಯವಿಲ್ಲದ ಪತ್ರ ಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಭೇದಿಸಿದ ವಿಶೇಷ ತನಿಖಾ ತಂಡದ ತನಿಖಾಧಿಕಾರಿ ಎಂ.ಎ ನ್‌. ಅನುಚೇತ್‌ ಸೇರಿ ಶೇ.85 ಅಧಿಕಾರಿಗಳು ಸಿಡಿ ಪ್ರಕರಣದ ಎಸ್‌ ಐಟಿಯಲ್ಲಿದ್ದಾರೆ. ಆದರೂ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತರನ್ನು ಪತ್ತೆ ಹಚ್ಚಲು ಸಾಧ್ಯ ವಾಗುತ್ತಿಲ್ಲ. ಈಗಾಗಲೇ ಸಿಡಿ ಯುವತಿ ಎರಡು ಹೇಳಿಕೆ ವಿಡಿಯೋ ಬಿಡುಗಡೆ ಮಾಡಿದ್ದು, ಕಿಂಗ್‌ ಪಿನ್‌ ಎನ್ನಲಾದ ಪತ್ರ ಕರ್ತ ನರೇಶ್‌ ಗೌಡ ಕೂಡ ಒಂದು ಹೇಳಿಕೆ ವಿಡಿಯೋ ಬಿಡು ಗಡೆ ಮಾಡಿ ಎಸ್‌ಐಟಿಗೆ ಸವಾಲು ಎಸೆದಿದ್ದರು. ಆದರೂ ಅವರು ಅಡಗಿಕೊಂಡಿರುವ ಸ್ಥಳ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಎಸ್‌ ಐ ಟಿಗೆ ಸರ್ಕಾರದ ಕೆಲ ನಾಯಕರ ಒತ್ತಡ ಇದೆಯೇ? ಅಥವಾ ಎಸ್‌ ಐಟಿಯ ಹಿರಿಯ ಅಧಿಕಾರಿಗಳ ನಡುವೆಯೇ ಸಂವಹನದ ಕೊರತೆಯಿಂದಾಗಿ ಸಿಡಿ ಪ್ರಕರಣ ತನಿಖಾ ದಿಕ್ಕು ತಪ್ಪುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಹೇಳಬೇಕಾದದ್ದು ಸದನದಲ್ಲೇ ಹೇಳಿದ್ದೇನೆ. ಯುವತಿಗೆ ರಕ್ಷಣೆ ನೀಡುವುದು, ದೌರ್ಜನ್ಯ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಟಾಪ್ ನ್ಯೂಸ್

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

1-dds

ಸೊರಬ ಪುರಸಭೆ : ಪುನಃ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

1-ffff

ಸಿ.ಎಂ. ಇಬ್ರಾಹಿಂ ಭೇಟಿಯಾದ ಹೆಚ್ ಡಿಕೆ: ಮಹತ್ವದ ಚರ್ಚೆ

ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

1-dsds

ಮೊಮ್ಮಗಳ ಆತ್ಮಹತ್ಯೆ : ಮೌನಕ್ಕೆ ಶರಣಾದ ಬಿಎಸ್ ವೈ; ಪ್ರಧಾನಿ, ಗಣ್ಯರಿಂದ ಸಾಂತ್ವನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

1-ffff

ಸಿ.ಎಂ. ಇಬ್ರಾಹಿಂ ಭೇಟಿಯಾದ ಹೆಚ್ ಡಿಕೆ: ಮಹತ್ವದ ಚರ್ಚೆ

1-dsds

ಮೊಮ್ಮಗಳ ಆತ್ಮಹತ್ಯೆ : ಮೌನಕ್ಕೆ ಶರಣಾದ ಬಿಎಸ್ ವೈ; ಪ್ರಧಾನಿ, ಗಣ್ಯರಿಂದ ಸಾಂತ್ವನ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರ

hdk

ರಾಮನಗರದಲ್ಲಿ 3 ವರ್ಷದಿಂದ ಮಲಗಿದ್ದವರು ಈಗ ಎದ್ದಿದ್ದಾರೆ : ಹೆಚ್ ಡಿಕೆ ಹೇಳಿದ್ದೇನು?

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

1-dds

ಸೊರಬ ಪುರಸಭೆ : ಪುನಃ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

chikkamagalore news

ಹುಲಿ ಗಣತಿಯಲ್ಲಿ ಕಾಫಿ ನಾಡಿಗೆ ಪ್ರಥಮ ಸ್ಥಾನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.