Revanna..ನಿಂಬೆಹಣ್ಣು ಹಿಡ್ಕೊಳ್ಳೋ ಕೈಯಲ್ಲಿ ಕೊಬ್ಬರಿ ಯಾಕೆ?; ಸಿಎಂ ಸಿದ್ದರಾಮಯ್ಯ ಹಾಸ್ಯ
ಕೊಬ್ಬರಿ ಹಿಡಿದುಕೊಂಡು ಸದನದೊಳಗೆ ಬಂದ ರೇವಣ್ಣ...ಹಾಸ್ಯ ಸನ್ನಿವೇಶಕ್ಕೆ ಸಾಕ್ಷಿ!
Team Udayavani, Jul 13, 2023, 5:07 PM IST
ವಿಧಾನಸಭೆ : ಗುರುವಾರದ ಕಲಾಪದಲ್ಲಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ರೇವಣ್ಣ ಅವರು ಕೊಬ್ಬರಿ ಹಿಡಿದುಕೊಂಡು ಆಗಮಿಸಿ ಸದನದ ಗಮನ ಸೆಳೆದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಹಾಸ್ಯ ಚಟಾಕಿ ಹಾರಿಸಿ, ರೇವಣ್ಣ, ನಿಂಬೆ ಹಣ್ಣು ಹಿಡ್ಕೊಳ್ಳೋ ಕೈಯಲ್ಲಿ ಕೊಬ್ಬರಿ ಯಾಕೆ ಎಂದು ಪ್ರಶ್ನಿಸಿದಾಗ ಸದನ ನಗೆಗಡಲಲ್ಲಿ ತೇಲಿತು.
ರೇವಣ್ಣ ಅವರು ಕೊಬ್ಬರಿಗೆ ಬೆಂಬಲ ಬೆಲೆ ಕುರಿತಾಗಿ ನಿರಂತರವಾಗಿ ಸದನದ ಗಮನ ಸೆಳೆಯುತ್ತಿದ್ದರು. ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಲು ಮುಂದಾದಾಗ ರೇವಣ್ಣ ಅವರು ಕೊಬ್ಬರಿ ಬೆಲೆ ಏರಿಕೆ ಮಾಡಬೇಕು. 15,000 ರೂ.ಗೆ ಏರಿಕೆ ಮಾಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಅದನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಧ್ಯ ಪ್ರವೇಶಿಸಿ ಮಾತನಾಡಿ ಕನಿಷ್ಠ ರೇವಣ್ಣ ಅವರಿಗಾದರೂ ಕೊಬ್ಬರಿ ದರ ಏರಿಕೆ ಮಾಡಬೇಕು ಎಂದರು. ಸದನ ಸಮಸ್ಯೆ ವಿಚಾರದಲ್ಲೂ ಹಾಸ್ಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ