Udayavni Special

ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರಿಗೆ ಅವಕಾಶ ಕೊಡಬೇಕು: ಕೆ.ಎಚ್.ಮುನಿಯಪ್ಪ


Team Udayavani, Jun 3, 2020, 3:44 PM IST

ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರಿಗೆ ಅವಕಾಶ ಕೊಡಬೇಕು: ಕೆ.ಎಚ್.ಮುನಿಯಪ್ಪ

ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇ ಗೌಡ ಅವರಿಗೆ ರಾಜ್ಯ ಸಭೆಗೆ ಸ್ಪರ್ಧೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕೊಡಬೇಕು ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

ಈ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್- ಜೆಡಿಎಸ್ ಇತ್ತೀಚೆಗೆ ಮೈತ್ರಿ ಮಾಡಿಕೊಂಡಿದ್ದೆವು. ಈಗಲೂ ಅಂತಹ ಅವಕಾಶವಿದೆ. ದೇವೇಗೌಡರು ಹಿಂಬಾಗಿಲ ಮೂಲಕ ಹೋದವರಲ್ಲ, ಅವರೊಬ್ಬ ಅಪ್ಪಟ ರೈತ ಹೋರಾಗಾರ. ಹೈಕಮಾಂಡ್ ಅವರಿಗೆ ಅವಕಾಶ ಮಾಡಿಕೊಟ್ಟರೆ ಉತ್ತಮ. ಅವರೊಬ್ಬ ಪ್ರಧಾನಿಯಾಗಿದ್ದವರು. ಅಂತವರಿಗೆ ನಮ್ಮ ಹೈಕಮಾಂಡ್ ಅವಕಾಶ ನೀಡಬೇಕು ಎಂದು ಮಾಜಿ ಪ್ರಧಾನಿಯ ರಾಜ್ಯಸಭೆ ಪ್ರವೇಶಕ್ಕೆ ಮುನಿಯಪ್ಪ ಸಮರ್ಥಿಸಿದರು.

ರಾಜ್ಯ ಸಭೆಗೆ ಖರ್ಗೆ ಅವರ ಸ್ಪರ್ಧೆಯನ್ನೂ ಮುನಿಯಪ್ಪ ಬೆಂಬಲಿಸಿದರು. ಮಲ್ಲಿಕಾರ್ಜುನ ಖರ್ಗೆ ದಲಿತ ಸಮುದಾಯದ ಪ್ರಶ್ನಾತೀತ ನಾಯಕರು. ಅವರಿಗೆ ಟಿಕೆಟ್ ನೀಡಲು ಯಾರಾದರೂ ವಿರೋಧ ಮಾಡುತ್ತಾರಾ ಎಂದರು.

ರಾಜ್ಯನಾಯಕರು ಹೈಕಮಾಂಡ್ ಗೆ ಪತ್ರ ಕಳುಹಿಸುತ್ತಾರೆ. ಎಲ್ಲವನ್ನೂ ವಿಚಾರಿಸಿ ಹೈಕಮಾಂಡ್ ನಿರ್ಧರಿಸುತ್ತದೆ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು, ಹರಿಪ್ರಸಾದ್, ರಾಜೀವ್ ಗೌಡ ಯಾರೇ ಆಗಲಿ, ನಾವು ಸಲಹೆಯನ್ನ ಕೊಡುವುದಕ್ಕೂ ಅವಕಾಶವಿಲ್ಲ. ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ ಎಂದರು.

ಟಿಕೆಟ್ ಕೊಡುವ ವೇಳೆ ಪಕ್ಷದ ನಿಷ್ಟಾವಂತರಿಗೆ ಕೊಡಬೇಕು. ನಮಗೆ ಎರಡು ಸೀಟು ಸಿಗುವ ವಿಶ್ವಾಸವಿದೆ. ಸಾವಿರಾರು ಮಂದಿ ಅವಕಾಶ ವಂಚಿತರೂ ಇದ್ದಾರೆ. ಇಲ್ಲಿ ಯಾವ ಮಾನದಂಡ ಇಟ್ಕೊಳ್ತಾರೆ ಗೊತ್ತಿಲ್ಲ. ನಿಷ್ಟಾವಂತರನ್ನ ಗುರುತಿಸಿಕೊಡಬೇಕು. ಆಗ ಕಾರ್ಯಕರ್ತರಿಗೆ ಹುಮ್ಮಸ್ಸು ಮೂಡುತ್ತದೆ. ಈ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಪಕ್ಷ ವಿರೋಧಿ ಧೋರಣೆ ತೋರಿದವರಿಗೆ ನೀಡಬಾರದು ಎಂದು ಅಭಿಪ್ರಾಯಪಟ್ಟರು.

30 ವರ್ಷಗಳಿಂದ ದುಡಿದವರಿಗೆ ಅವಕಾಶ ಮಾಡಿಕೊಡಬೇಕು. ಸಿದ್ದರಾಮಯ್ಯ ಬೇರೆ ಅಲ್ಲ,ಡಿಕೆ ಶಿವಕುಮಾರ್ ಬೇರೆ ಅಲ್ಲ. ಇಬ್ಬರೂ ಸೇರಿಯೇ ತೀರ್ಮಾನ ತೆಗೆದುಕೊಳ್ಳಬೇಕು. ತೀರ್ಮಾನ ಮಾಡುವ ವೇಳೆ ರಾಜ್ಯದ ಜನ ನೋಡುತ್ತಿರುತ್ತಾರೆ. ಪಕ್ಷ ದ್ರೋಹಿಗೆ ಟಿಕೆಟ್ ಕೊಟ್ಟರೆ ಜನ ಛೀಮಾರಿ ಹಾಕುತ್ತಾರೆ ಎಂದ ಅವರು ಜಾತ್ಯಾತೀತ ಪಕ್ಷಗಳ ಸಹಾಯ ಅನಿವಾರ್ಯ. ಒಂದಲ್ಲ ಒಂದು ಕಾರಣಕ್ಕೆ ಉತ್ತಮ, ದೇವೇಗೌಡರಿಗೆ ಅವಕಾಶ ಮಾಡಿಕೊಡಬೇಕು. ಖರ್ಗೆ, ದೇವೇಗೌಡ ಇಬ್ಬರು ಹಿರಿಯ ನಾಯಕರು. ಇಬ್ಬರು ರಾಜ್ಯಸಭೆಯಲ್ಲಿ ಇದ್ದರೆ ಉತ್ತಮ ಎಂದರು.

ಕೋವಿಡ್-19 ವಿಚಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಪ್ರತಿಪಕ್ಷವಾಗಿ ನಾವು ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಕೇಂದ್ರ ರೈತರ ಸಾಲಮನ್ನಾ ಮಾಡಲಿಲ್ಲ. ರೈತರು ಬೆಳೆದ ಬೆಳೆಗೆ ಬೆಲೆಯಿಲ್ಲ. ಸರ್ಕಾರ ಹಾಪ್ ಕಾಮ್ಸ್ ಮೂಲಕ ಮಾರಾಟಮಾಡಬೇಕಿತ್ತು. ಆದರೆ ಸರ್ಕಾರ ಗಮನಹರಿಸಲಿಲ್ಲ ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲಾಕ್ ಡೌನ್ ಕರ್ಫ್ಯೂ ಮೀರಿ ರಸ್ತೆಗೆ ಬಂದವರಿಗೆ ಪೊಲೀಸ್ ಲಾಠಿರುಚಿ

ಲಾಕ್ ಡೌನ್ ಕರ್ಫ್ಯೂ ಮೀರಿ ರಸ್ತೆಗೆ ಬಂದವರಿಗೆ ಪೊಲೀಸ್ ಲಾಠಿ ರುಚಿ

ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ರೋಗಿಗಳ ತುರ್ತು ಸ್ಥಳಾಂತರ

ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ರೋಗಿಗಳ ತುರ್ತು ಸ್ಥಳಾಂತರ

covid19-india-21

ದೇಶದಲ್ಲಿ ಕೋವಿಡ್-19 ರುದ್ರನರ್ತನ: ಒಂದೇ ದಿನ 613 ಬಲಿ, 24,850 ಜನರಿಗೆ ಸೋಂಕು

ಕೋವಿಡ್ ಕಳವಳ: ಭಾನುವಾರದ ಲಾಕ್ ಡೌನ್ ಗೆ ಉತ್ತಮ ಬೆಂಬಲ

ಕೋವಿಡ್ ಕಳವಳ: ಭಾನುವಾರದ ಲಾಕ್ ಡೌನ್ ಗೆ ಉತ್ತಮ ಬೆಂಬಲ

ಆಸ್ತಿ ವಿವಾದ: ಸಂಬಂಧಿಯ ಗುಂಡಿನ ದಾಳಿಗೆ ಓರ್ವ ಸಾವು, ಇಬ್ಬರು ಗಂಭೀರ

ಆಸ್ತಿ ವಿವಾದ: ಸಂಬಂಧಿಯ ಗುಂಡಿನ ದಾಳಿಗೆ ಓರ್ವ ಸಾವು, ಇಬ್ಬರು ಗಂಭೀರ

ಕಾರು ಅಪಘಾತದಲ್ಲಿ ವ್ಯಕ್ತಿ ಸಾವು ಪ್ರಕರಣ: ಶ್ರೀಲಂಕಾ ಕ್ರಿಕೆಟಿಗ ಮೆಂಡಿಸ್ ಬಂಧನ

ಕಾರು ಅಪಘಾತದಲ್ಲಿ ವ್ಯಕ್ತಿ ಸಾವು ಪ್ರಕರಣ: ಶ್ರೀಲಂಕಾ ಕ್ರಿಕೆಟಿಗ ಮೆಂಡಿಸ್ ಬಂಧನ

ಬಂಟ್ವಾಳ: ನಿಯಮ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮ, ಭರ್ಜರಿ ಪಾರ್ಟಿ, ಡ್ಯಾನ್ಸ್ !

ಬಂಟ್ವಾಳ: ನಿಯಮ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮ, ಭರ್ಜರಿ ಪಾರ್ಟಿ, ಡ್ಯಾನ್ಸ್ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಕಳವಳ: ಭಾನುವಾರದ ಲಾಕ್ ಡೌನ್ ಗೆ ಉತ್ತಮ ಬೆಂಬಲ

ಕೋವಿಡ್ ಕಳವಳ: ಭಾನುವಾರದ ಲಾಕ್ ಡೌನ್ ಗೆ ಉತ್ತಮ ಬೆಂಬಲ

vydya ramu

ಕುಣಿಯೋಕೆ ಬಾರದವರು ನೆಲ ಡೊಂಕು ಅಂದಂತಾಗಿದೆ

records

ಸೂಕ್ತ ದಾಖಲೆ ಬಿಡುಗಡೆಗೆ ಆಗ್ರಹ

aridi-byrati

ಖರೀದಿಯಲ್ಲಿ ಅವ್ಯವಹಾರ ನಡೆದಿದ್ದರೆ ಸೂಕ್ತ ದಾಖಲೆ ನೀಡಲಿ

corona-veeme

ಕೋವಿಡ್‌ 19 ವಿಮೆ ಜಾರಿಗೆ ಆಗ್ರಹ

MUST WATCH

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya


ಹೊಸ ಸೇರ್ಪಡೆ

ರಜೆಗೆ ಬಂದ ಯೋಧನಿಗೆ ಕೋವಿಡ್

ರಜೆಗೆ ಬಂದ ಯೋಧನಿಗೆ ಕೋವಿಡ್

5-July-17

34 ಪೊಲೀಸ್‌ ಸಿಬ್ಬಂದಿಗೆ ಹೋಂ ಕ್ವಾರಂಟೈನ್‌

5-July-16

ಮಾಸ್ಕ್ ಧರಿಸದವರಿಂದ ದಂಡ ವಸೂಲಿ

ಮೆಕ್ಕೆಜೋಳ ಹಾನಿ: 13 ಕೋಟಿ ಆರ್ಥಿಕ ನೆರವು

ಮೆಕ್ಕೆಜೋಳ ಹಾನಿ: 13 ಕೋಟಿ ಆರ್ಥಿಕ ನೆರವು

ಕಬ್ಬಿನ ಬಿಲ್‌ ಪಾವತಿಗೆ ರೈತರ ಆಗ್ರಹ

ಕಬ್ಬಿನ ಬಿಲ್‌ ಪಾವತಿಗೆ ರೈತರ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.