ಬನ್ನಂಜೆ, ಡಾ.ಎನ್ನೆಸ್ಸೆಲ್‌ ಸೇರಿ ಐವರಿಗೆ ಗೌರವ ಪ್ರಶಸ್ತಿ


Team Udayavani, Mar 2, 2018, 2:51 PM IST

Bannaje.jpg

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟವಾಗಿದ್ದು, ಹಿರಿಯ ಸಾಹಿತಿಗಳಾದ ಬನ್ನಂಜೆ ಗೋವಿಂದಾಚಾರ್ಯ, ಪ್ರೊ.ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ, ಪ್ರೊ. ಸೋಮಶೇಖರ ಇಮ್ರಾಪುರ, ಪ್ರೊ.ಎಚ್‌.ಜೆ.ಲಕ್ಕಪ್ಪಗೌಡ ಹಾಗೂ ಕಸ್ತೂರಿ ಬಾಯರಿ ಅವರಿಗೆ ಪ್ರಶಸ್ತಿ ಲಭಿಸಿದೆ. 2016ರಲ್ಲಿ ಪ್ರಕಟವಾದ 18 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯ ಆಧರಿಸಿ ವರ್ಷದ
ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. “ಉದಯವಾಣಿ’ಯ ಹಿರಿಯ ಮುಖ್ಯ ಉಪ ಸಂಪಾದಕ ಎ. ಆರ್‌. ಮಣಿಕಾಂತ್‌ ಹಾಗೂ ಪತ್ರಕರ್ತ ಹ.ಚ.ನಟೇಶಬಾಬು ಅವರ “ಗಿಫ್ಟೆಡ್ಡ್‌’ (ಕಥೆಗಳು) ಅನುವಾದ- 1 (ಸೃಜನ ಶೀಲ ವಿಭಾಗ) ಕೃತಿಯು ಅತ್ಯುತ್ತಮ ಕೃತಿ ಪ್ರಶಸ್ತಿಗೆ ಭಾಜನವಾಗಿದೆ.

ಕನ್ನಡ ಭವನದಲ್ಲಿರುವ ಅಕಾಡೆಮಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ವಿವರವನ್ನು ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಪ್ರಕಟಿಸಿದರು. ಅಕಾಡೆಮಿಯು ಮೊದಲ ಬಾರಿಗೆ ನೀಡುತ್ತಿರುವ “ಸಾಹಿತ್ಯಶ್ರೀ’ ಪ್ರಶಸ್ತಿಗೆ ಪ್ರೊ.ಧರಣೇಂದ್ರ ಕುರಕುರಿ, ಫ‌ಕೀರ್‌ ಮಹಮ್ಮದ್‌ ಕಟಾ³ಡಿ, ಡಾ.ವಿಜಯಶ್ರೀ ಸಬರದ, ಡಾ.ವಿ.ಮುನಿವೆಂಕಟಪ್ಪ, ಡಾ.ನಟರಾಜ ಹುಳಿಯಾರ್‌, ಡಾ.ಕೆ.ಕೇಶವಶರ್ಮ, ಡಾ.ಕರೀಗೌಡ ಬೀಚನಹಳ್ಳಿ, ಪ್ರೊ.ತೇಜಸ್ವಿ ಕಟ್ಟಿಮನಿ, ಡಾ.ಕಮಲಾ ಹೆಮ್ಮಿಗೆ ಹಾಗೂ ಕಂಚ್ಯಾಣಿ ಶರಣಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ 25 ಸಾವಿರ ನಗದು, ಪ್ರಮಾಣ ಪತ್ರ ಒಳಗೊಂಡಿರುತ್ತದೆ ಎಂದರು

ಅತ್ಯುತ್ತಮ ಕೃತಿ ಪ್ರಶಸ್ತಿ ವಿವರ: ಕಾವ್ಯ-
ಗಾಯಗೊಂಡಿದೆ ಗರಿಕೆಗಾನ- ಕೃಷ್ಣಮೂರ್ತಿ ಬಿಳಿಗೆರೆ.ಯುವಕವಿಗಳ ಪ್ರಥಮ ಸಂಕಲನ: ಕಸಬಾರಿಗೆ ಪಾದ-ಬಸವರಾಜ ಹೃತ್ಸಾಕ್ಷಿ. ಕಾದಂಬರಿ: ವೈವಸ್ವತ- ರೇಖಾ ಕಾಖಂಡಕಿ. ಸಣ್ಣಕತೆ: ಬ್ರಹ್ಮರಾಕ್ಷಸ- ಜಯಪ್ರಕಾಶ ಮಾವಿನಕುಳಿ. ನಾಟಕ: ಬಕಾವಲಿಯ ಹೂ- ಸುಧೀರ್‌
ಅತ್ತಾವರ್‌. ಲಲಿತ ಪ್ರಬಂಧ: ಮಿಸಳ್‌ ಭಾಜಿ- ಭಾರತಿ ಬಿ.ವಿ. ಪ್ರವಾಸ ಸಾಹಿತ್ಯ: ಯುರೋಪ್‌ನ ಧಾರ್ಮಿಕ ನೆಲೆಗಳು- ಡಾ.ಬಿ.ಎಸ್‌.ತಲ್ವಾಡಿ. ಜೀವನಚರಿತ್ರೆ: ಕಣ್ಣಾಮುಚ್ಚೇ ಕಾಡೇಗೂಡೆ- ಪ್ರೀತಿ ನಾಗರಾಜ್‌. ಸಾಹಿತ್ಯ ವಿಮರ್ಶೆ: ಕನ್ನಡ ಕಾವ್ಯ ಮೀಮಾಂಸೆ-ಡಾ.ಎಸ್‌. ನಟರಾಜ ಬೂದಾಳು. 

ಗ್ರಂಥ ಸಂಪಾದನೆ:
ತಿಂತಿಣಿ ಮೌನೇಶ್ವರರ ವಚನಗಳು- ಡಾ.ವೀರೇಶ ಬಡಿಗೇರ. ಮಕ್ಕಳ ಸಾಹಿತ್ಯ: ಶ್ರಮಯೇವ ಜಯತೆ- ನಿರ್ಮಲಾ ಸುರತ್ಕಲ್‌. ವಿಜ್ಞಾನ ಸಾಹಿತ್ಯ: ಅಂತರ್ಜಲ ಬಳಕೆ- ಡಾ.ಎ.ಎಸ್‌.ಕುಮಾರಸ್ವಾಮಿ. ಮಾನವಿಕ- ದಲಿತ ಚಳವಳಿ ನಿನ್ನೆ- ಇಂದು- ನಾಳೆ-ಡಾ.ಸಣ್ಣರಾಮ. ಸಂಶೋಧನೆ: ಬೌದ್ಧ ಧರ್ಮ ದರ್ಶನ- ಡಾ. ಶರತ್‌ಚಂದ್ರ ಸ್ವಾಮಿಗಳು.ಅನುವಾದ-2 (ಸೃಜನೇತರ): ಅಲ್ಲಾಹ್‌ನಿಂದ ನಿರಾಕೃತರು- ಎಂ.ಅಬ್ದುಲ್‌ ರೆಹಮಾನ್‌ ಪಾಷ. ಸಂಕೀರ್ಣ: ನಮ್ಮ ಮನೆಗೂ ಬಂದರು ಗಾಂಧೀಜಿ! ಕೆಲವು ನೆನಪುಗಳು- ರಾಜೇಶ್ವರಿ ತೇಜಸ್ವಿ. ಲೇಖಕರ
ಮೊದಲ ಕೃತಿ: ಮನಸು ಅಭಿಸಾರಿಕೆ (ಕಥೆಗಳು)- ಶಾಂತಿ ಕೆ. ಅಪ್ಪಣ್ಣ. 

ಅಕಾಡೆಮಿಯು ಕೆಲ ಸಾಹಿತ್ಯ ಪ್ರಕಾರಗಳಿಗೆ ನೀಡುವ ದತ್ತಿ ಬಹುಮಾನಗಳನ್ನು ಪ್ರಕಟಿಸಿದೆ. ಕಾವ್ಯ- ಹಸ್ತಪ್ರತಿ (ಚಿ.ಶ್ರೀನಿವಾಸರಾಜು ದತ್ತಿನಿಧಿ
ಬಹುಮಾನ): ಎರಡು ನಂಬರಿನ ಟಿಕಲಿ- ಚೈತ್ರಿಕಾ ಶ್ರೀಧರ ಹೆಗಡೆ. ಕಾದಂಬರಿ (ಚದುರಂಗ ದತ್ತಿನಿಧಿ ಬಹುಮಾನ): ಕಾಡಂಕಲ್‌ ಮನೆ- ಮುಹಮ್ಮದ್‌ ಕುಳಾಯಿ. ಆತ್ಮಕತೆ (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ): ಜೀವಾತ್ಮ ಜೈತ್ರಯಾತ್ರೆ- ಡಾ.ಗುರುಪಾದ ಕೆ. ಹೆಗಡೆ. ಸಾಹಿತ್ಯ ವಿಮರ್ಶೆ (ಪಿ.ಶ್ರೀನಿವಾಸರಾವ್‌ ದತ್ತಿನಿಧಿ ಬಹುಮಾನ): ಸಾಹಿತ್ಯ ಮತ್ತು ಸಾಹಿತ್ಯೇತರ- ಎಸ್‌.ಶಿವಾನಂದ. ಅನುದಾನ-1 (ಸೃಜನಶೀಲ- ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ): ಒಂಟಿ ಸೇತುವೆ-ಸ. ರಘುನಾಥ. ಲೇಖಕರ ಮೊದಲ ಸ್ವತಂತ್ರ ಕೃತಿ
(ಮಧುರಚೆನ್ನ ದತ್ತಿನಿಧಿ ಬಹುಮಾನ): ಪಂಚಮುಖ (ಕಾದಂಬರಿ)- ಡಾ.ಕೆ.ಬಿ.ಶ್ರೀಧರ್‌. ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನ): ಮೋಹನ್‌ಸ್ವಾಮಿ- ರಶ್ಮಿ ತೇರದಾಳ ಅವರನ್ನು ಆಯ್ಕೆ ಮಾಡಲಾಗಿದೆ.

ಶಿಲ್ಪದ ಪ್ರತಿಕೃತಿ: ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರಿಗೆ ಕನ್ನಡದಲ್ಲಿ ಶಿಲಾಶಾಸನ ಬರೆಯುತ್ತಿರುವ ಮಹಿಳಾ ಶಿಲ್ಪದ ಪ್ರತಿಕೃತಿ ನೀಡಲು ನಿರ್ಧರಿಸಲಾಗಿದೆ. ಬೀದರ್‌ ಜಿಲ್ಲೆಯ ಜಲಸಾಂಗ್ವಿ ಹಳ್ಳಿಯಲ್ಲಿನ 11ನೇ ಶತಮಾನದ ಕಮಲೀಶ್ವರ/ ಕಲ್ಲೇಶ್ವರ ದೇವಸ್ಥಾನದ ಗೋಡೆಗಳ ಮೇಲಿನ ಸಾಲಭಂಜಿಕೆ ಅಥವಾ ಮದನಿಕ ಶಿಲ್ಪಗಳಲ್ಲಿ ಕನ್ನಡದಲ್ಲಿ ಶಿಲಾಶಾಸನ ಬರೆಯುತ್ತಿರುವ ಮಹಿಳೆಯ ಶಿಲ್ಪವನ್ನು ಪ್ರಶಸ್ತಿ
ಫ‌ಲಕಕ್ಕೆ ಬಳಸಿಕೊಳ್ಳಲಾಗುತ್ತಿದೆ. ಶಿಲ್ಪಿ ಸೋಮಶೇಖರ ಬಿಡದಿ ಅವರು ಕಲಾಕೃತಿಯನ್ನು ಪುತ್ಥಳಿಗೆ ಪರಿವರ್ತಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅರವಿಂದ ಮಾಲಗತ್ತಿ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌. ಆರ್‌.ವಿಶುಕುಮಾರ್‌, ರಿಜಿಸ್ಟ್ರಾರ್‌ ಸಿದ್ರಾಮ್‌ ಸಿಂಧೆ ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.