ರಾಜ್ಯದಲ್ಲೂ ಕಂದಾಯ ಆಯುಕ್ತಾಲಯ ರಚನೆ; ಆಡಳಿತ ಸುಧಾರಣ ಆಯೋಗ ಶಿಫಾರಸು ಜಾರಿಗೆ ತೀರ್ಮಾನ


Team Udayavani, Jul 17, 2023, 6:23 AM IST

ರಾಜ್ಯದಲ್ಲೂ ಕಂದಾಯ ಆಯುಕ್ತಾಲಯ ರಚನೆ; ಆಡಳಿತ ಸುಧಾರಣ ಆಯೋಗ ಶಿಫಾರಸು ಜಾರಿಗೆ ತೀರ್ಮಾನ

ಬೆಂಗಳೂರು: ಆಂಧ್ರ ಪ್ರದೇಶ, ತಮಿಳು ನಾಡು ಸಹಿತ ಕೆಲವು ನೆರೆಯ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ರಾಜ್ಯ ಮಟ್ಟದಲ್ಲಿ “ಕಂದಾಯ ಆಯುಕ್ತಾಲಯ’ ಅಸ್ತಿತ್ವಕ್ಕೆ ಬರಲಿದೆ.

ಕಂದಾಯ ಆಯುಕ್ತಾಲಯ ರಚನೆಯ ಸಂಬಂಧ 2018ರಲ್ಲಿ ಏಕಸದಸ್ಯ ಸಮಿತಿ ನೀಡಿದ್ದ ವರದಿ, 2019-20ನೇ ಸಾಲಿನ ಬಜೆಟ್‌ ಘೋಷಣೆ ಹಾಗೂ ಕರ್ನಾಟಕ ಆಡಳಿತ ಸುಧಾರಣ ಆಯೋಗ-2ರ ಶಿಫಾರಸನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿರುವ ರಾಜ್ಯ ಸರಕಾರವು ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯ ರಚಿಸಿ ಆದೇಶ ಹೊರಡಿಸಿದೆ.

ಕಂದಾಯ ಇಲಾಖೆಯ ಆಡಳಿತಾತ್ಮಕ ವಿಚಾರಗಳ ನಿರ್ವಹಣೆಗೆ ರಾಜ್ಯದಲ್ಲಿ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿ ವ್ಯವಸ್ಥೆ ಇದೆ. ಇನ್ನು ರಾಜ್ಯ ಮಟ್ಟದ ಆಯುಕ್ತಾಲಯ ಬರ ಲಿದೆ. ಅದು ಜಿಲ್ಲಾಧಿಕಾರಿಗಳು, ಪ್ರಾದೇ ಶಿಕ ಆಯುಕ್ತರು ಹಾಗೂ ಸರಕಾರಗಳ ನಡುವೆ ಸಮನ್ವಯ ಹಾಗೂ ಉಸ್ತುವಾರಿಯ ಕೆಲಸ ಮಾಡಲಿದೆ. ಆದರೆ ನಾಲ್ಕು ಪ್ರಾದೇಶಿಕ ಆಯುಕ್ತರ ಹುದ್ದೆಗಳನ್ನು ರದ್ದುಪಡಿಸಬೇಕು.

ರಾಜ್ಯ ಮಟ್ಟದಲ್ಲಿ ಒಂದೇ ಕಂದಾಯ ಆಯುಕ್ತಾಲಯ ಸ್ಥಾಪಿಸಬೇಕು ಎಂದು ಆಡಳಿತ ಸುಧಾರಣ ಆಯೋಗ ಶಿಫಾರಸು ಮಾಡಿತ್ತು ಎನ್ನುವುದು ಗಮನಾರ್ಹ. ಕಂದಾಯ ಇಲಾಖೆಯಲ್ಲಿ ಈಗಾಗಲೇ ಅಸ್ತಿತ್ವ ದಲ್ಲಿರುವ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗ ಗಳ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಮಾ ಲೋಚಿಸಿ ಕಂದಾಯ ಆಯುಕ್ತಾಲಯ ಸ್ಥಾಪನೆ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳುವ ಸಂಬಂಧ ಹಾಗೂ ಆಯುಕ್ತಾಲಯವನ್ನು ರಚಿಸಿದಲ್ಲಿ ಉಂಟಾಗುವ ಸಾಧಕ -ಬಾಧಕಗಳು ಹಾಗೂ ಕಾರ್ಯವ್ಯಾಪ್ತಿಯ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸರಕಾರ 2017ರಲ್ಲಿ ಏಕ ಸದಸ್ಯ ಸಮಿತಿಯನ್ನು ರಚಿಸಿತ್ತು. 2018ರಲ್ಲಿ ವರದಿ ನೀಡಿದ್ದ ಸಮಿತಿ ಕಂದಾಯ ಆಯುಕ್ತಾಲಯ ರಚನೆಗೆ ಶಿಫಾರಸು ಮಾಡಿತ್ತು.

ಕಂದಾಯ ಇಲಾಖೆಯ ಕಾರ್ಯಗಳನ್ನು ಸುಗಮ ವಾಗಿ ನಿರ್ವಹಿಸಲು ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಪಕ್ರಿಯೆಯನ್ನು ಸರಳಗೊಳಿಸುವ ಆವಶ್ಯಕತೆ ಕಂಡುಬಂದ ಹಿನ್ನೆಲೆಯಲ್ಲಿ ಕಂದಾಯ ಆಯುಕ್ತಾ ಲಯ ರಚಿಸುವ ಬಗ್ಗೆ 2019-20ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದೇ ರೀತಿ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರ ನೇತೃತ್ವದ ಎರಡನೇ ಕರ್ನಾಟಕ ರಾಜ್ಯ ಆಡಳಿತ ಸುಧಾರಣ ಆಯೋಗವು 2021ರಲ್ಲಿ ಸಲ್ಲಿಸಿದ್ದ ಮೊದಲ ವರದಿಯಲ್ಲಿ ಕಂದಾಯ ಆಯುಕ್ತಾಲಯ ರಚನೆಯ ಬಗ್ಗೆ ಶಿಫಾರಸು ಮಾಡಿತ್ತು.
ಆಡಳಿತ ಸುಧಾರಣ ಆಯೋಗ ಏನು ಹೇಳಿತ್ತು.

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕಂದಾಯ ಆಯುಕ್ತಾಲಯ ಇದೆ. ನಮ್ಮ ರಾಜ್ಯದಲ್ಲೇ ಸಮಾಜ ಕಲ್ಯಾಣ, ಆರೋಗ್ಯ, ಶಿಕ್ಷಣ, ಕೃಷಿ, ಮುಜರಾಯಿ, ಅಬಕಾರಿ, ಕಾಲೇಜು ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಪೌರಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಿತ ವಿವಿಧ ಇಲಾಖೆಗಳ ದಿನನಿತ್ಯದ ಆಡಳಿತವನ್ನು ನೋಡಿಕೊಳ್ಳಲು ಮತ್ತು ರಾಜ್ಯ ಸರಕಾರದೊಂದಿಗೆ ಸಮನ್ವಯ ಸಾಧಿಸಲು ರಾಜ್ಯ ಮಟ್ಟದಲ್ಲಿ ಆಯುಕ್ತರಿದ್ದಾರೆ. ಅದೇ ಮಾದರಿಯಲ್ಲಿ ಕಂದಾಯ ಆಯುಕ್ತಾಲಯ ರಚಿಸುವುದು ಸೂಕ್ತ ಎಂದು 2ನೇ ಆಡಳಿತ ಸುಧಾರಣ ಆಯೋಗದ ಮೊದಲ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

ಆಯುಕ್ತಾಲಯದ ಜವಾಬ್ದಾರಿ ಏನು?
ಸೇವಾ ವಿಷಯಗಳ ಸಹಿತ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರು ಮತ್ತು ಸರಕಾರದ ನಡುವೆ ಸಮನ್ವಯ, ವಿಪತ್ತು ನಿರ್ವಹಣೆ, ಭೂಸ್ವಾಧೀನ ಪ್ರಕ್ರಿಯೆಗಳು, ತರಬೇತಿ ನಿರ್ವಹಣೆ, ನ್ಯಾಯಾ ಲಯದ ಪ್ರಕರಣಗಳ ಉಸ್ತುವಾರಿ, ವಿಧಾನ ಸಭೆ ಮತ್ತು ವಿಧಾನಪರಿಷತ್ತಿನ ಪ್ರಶ್ನೆಗಳಿಗೆ ಕ್ರೋಡೀ ಕೃತ ಮಾಹಿತಿ ಸಲ್ಲಿಕೆ, ಕಾರ್ಯದ ಒತ್ತಡ ಗುರುತಿಸು ವಿಕೆಯ ಜವಾಬ್ದಾರಿಗಳನ್ನು ಕಂದಾಯ ಆಯುಕ್ತಾ ಲಯಕ್ಕೆ ವಹಿಸಬಹುದು ಎಂದು ಏಕಸದಸ್ಯ ಸಮಿತಿ ಶಿಫಾರಸು ಮಾಡಿತ್ತು. ಕೆಲಸದ ಪ್ರಕ್ರಿಯೆಗಳನ್ನು ಇನ್ನಷ್ಟು ಸರಳಗೊಳಿಸಿ, ದಕ್ಷತೆಯನ್ನು ಹೆಚ್ಚಿಸುವ ಹಾಗೂ ಅಧಿಕಾರ ವಿಕೇಂದ್ರೀಕರಣ ಮಾಡುವ ಉದ್ದೇಶದಿಂದ ನಾಗರಿಕಸ್ನೇಹಿ ವ್ಯವಸ್ಥೆ ತರಲು ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯ ರಚಿಸಲಾಗಿದೆ ಎಂದು ಸರಕಾರ ಹೇಳಿದೆ.

ಟಾಪ್ ನ್ಯೂಸ್

1-aaaa

27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

1

Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್‌ ಡೇಟ್‌ ಮುಂದೂಡಿಕೆ?

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

ಈಶ್ವರ್ ಖಂಡ್ರೆ

Bidar; ಯುವಕರ‌ ಬದುಕು‌ ಹಾಳು ಮಾಡಿದ‌ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದು ಪರಾರಿ… ಪೊಲೀಸರಿಂದ ಶೋಧ

ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದ ಪಾಪಿಗಳು; ಪೊಲೀಸರಿಂದ ಶೋಧ

kar49 ಅಭ್ಯರ್ಥಿಗಳಿಂದ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

49 ಅಭ್ಯರ್ಥಿಗಳಿಂದ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

ಪ್ರಜ್ವಲ್‌ ಎಲ್ಲಿ? ಕುಟುಂಬದವರು ಸಹಿತ ಯಾರಿಗೂ ಗೊತ್ತಿಲ್ಲ: ಜಿ.ಟಿ.ದೇವೇಗೌಡ

JDS MP ಪ್ರಜ್ವಲ್‌ ಎಲ್ಲಿ? ಕುಟುಂಬದವರು ಸಹಿತ ಯಾರಿಗೂ ಗೊತ್ತಿಲ್ಲ: ಜಿ.ಟಿ.ದೇವೇಗೌಡ

ಪರಿಷತ್‌ ಚುನಾವಣೆ: 3 ಪಕ್ಷಕ್ಕೂ ಬಂಡಾಯ ಬಿಸಿ

ಪರಿಷತ್‌ ಚುನಾವಣೆ: 3 ಪಕ್ಷಕ್ಕೂ ಬಂಡಾಯ ಬಿಸಿ; ಪಕ್ಷದ ವಿರುದ್ಧವೇ ಸಡ್ಡು ಹೊಡೆದು ಸ್ಪರ್ಧೆ

Attendance ಕೊರತೆ ಇದ್ದರೂ ಎಸೆಸೆಲ್ಸಿ ಪರೀಕ್ಷೆ-2ಕ್ಕೆ ಅವಕಾಶ

Attendance ಕೊರತೆ ಇದ್ದರೂ ಎಸೆಸೆಲ್ಸಿ ಪರೀಕ್ಷೆ-2ಕ್ಕೆ ಅವಕಾಶ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-aaaa

27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್

Nutrition Stewardship Program at KMC

Manipal: ಕೆಎಂಸಿಯಲ್ಲಿ ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್ ಕಾರ್ಯಕ್ರಮ

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

8-bng

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.