ಅಂತರ್ಜಲ ಹೆಚ್ಚಿಸಿದ ಮುಂಗಾರು ಮಳೆ 


Team Udayavani, Nov 3, 2017, 7:14 AM IST

03-1.jpg

ಬೆಂಗಳೂರು: ಸತತ ಮೂರು ವರ್ಷಗಳ ಬರದಿಂದ ಪಾತಾಳಕ್ಕೆ ಕುಸಿದಿದ್ದ ರಾಜ್ಯದ ಅಂತರ್ಜಲ ಮಟ್ಟದಲ್ಲಿ ನಿರಂತರ ಎರಡು ತಿಂಗಳ ಮಳೆಯಿಂದ ಏರಿಕೆ ಕಂಡಿದ್ದು, ಮುಂಗಾರು ಹಂಗಾಮು ಅಂತ್ಯಕ್ಕೆ ಸುಮಾರು 27 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕನಿಷ್ಠ 0.5 ಮೀಟರ್‌ನಿಂದ ಗರಿಷ್ಠ 15.22 ಮೀಟರ್‌ ಹೆಚ್ಚಳ ಆಗಿದೆ. 

ಪೂರ್ವ ಮುಂಗಾರಿಗೆ ಹೋಲಿಸಿದರೆ, ಮುಂಗಾರಿನಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಅದರಲ್ಲೂ ದಕ್ಷಿಣ ಕರ್ನಾಟಕದ ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ ಸೇರಿದಂತೆ ಸುತ್ತಲಿನ ಭಾಗಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಹೆಚ್ಚಿದೆ. ಈ ಪೈಕಿ ರಾಮನಗರ ಮತ್ತು ಮಾಗಡಿ ತಾಲೂಕುಗಳಲ್ಲಿ ಅಂತರ್ಜಲ ಕ್ರಮವಾಗಿ 32 ಮತ್ತು 33 ಮೀಟರ್‌ನಷ್ಟು ಏರಿಕೆಯಾಗಿದೆ. ಅಂತರ್ಜಲ ನಿರ್ದೇಶನಾಲಯವು ರಾಜ್ಯಾದ್ಯಂತ ಅಂತರ್ಜಲ ಪ್ರಮಾಣ ಅಧ್ಯಯನ ನಡೆಸಿದ್ದು, ಅದರಂತೆ 176 ತಾಲ್ಲೂಕುಗಳ ಪೈಕಿ ಸೆಪ್ಟೆಂಬರ್‌ ಅಂತ್ಯಕ್ಕೆ 116 ತಾಲೂಕುಗಳಲ್ಲಿ ಅಂತರ್ಜಲ ಏರಿಕೆಯಾಗಿದೆ.  ಇದರಲ್ಲಿ ಹಳೆಯ ಮೈಸೂರು ಭಾಗಗಳ ಬಹುತೇಕ ಎಲ್ಲ ತಾಲೂಕುಗಳಲ್ಲೂ ಸಕಾರಾತ್ಮಕ ಫ‌ಲಿತಾಂಶ ಕಂಡುಬಂದಿದೆ.

ಮಳೆಯಷ್ಟೇ ಕಾರಣವಲ್ಲ; ಶ್ರೀನಿವಾಸರೆಡ್ಡಿ: ಈ ಬಾರಿ ದಕ್ಷಿಣ ಒಳನಾಡಿನ ಮುಂಗಾರಿನಲ್ಲಿ ವಾಡಿಕೆಗಿಂತ ಶೇ. 27ರಷ್ಟು ಹೆಚ್ಚು ಮಳೆಯಾಗಿದೆ. ಇದರಲ್ಲಿ ಬಹುತೇಕ ಮಳೆ ಆಗಸ್ಟ್‌ 15ರಿಂದ ಸೆಪ್ಟೆಂಬರ್‌ ಅವಧಿಯಲ್ಲೇ ಆಗಿದೆ. ಹಾಗಂತ, ಅಂತರ್ಜಲ ಮಟ್ಟ ಏರಿಕೆಗೆ ಮಳೆಯೊಂದೇ ಕಾರಣವಲ್ಲ, ಬಳಕೆ ಪ್ರಮಾಣವೂ ಕಡಿಮೆ ಇದೆ. ಆರಂಭದಲ್ಲೇ ಮಳೆ ಕೈಕೊಟ್ಟಿದ್ದರಿಂದ ಕೃಷಿ ಚಟುವಟಿಕೆಗಳು ಬಹುತೇಕ ಕಡಿಮೆಯಾಯಿತು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿದೆ. ಆದರೆ, ಎರಡು ತಿಂಗಳಲ್ಲಿ ಬಿದ್ದ ಮಳೆಗೆ ಹೋಲಿಸಿದರೆ, ಅಂತರ್ಜಲ ಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆ ಕಂಡಿಲ್ಲ. ಆದರೆ, ಸತತ ಬರದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಇದೊಂದು ಆಶಾದಾಯಕ ಬೆಳವಣಿಗೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ದ ನಿರ್ದೇಶಕ ಡಾ.ಜಿ.ಎಸ್‌. ಶ್ರೀನಿವಾಸ ರೆಡ್ಡಿ ಹೇಳುತ್ತಾರೆ.

ಹೋಲಿಕೆ ಸರಿ ಅಲ್ಲ; ಶೆಟ್ಟೆಣ್ಣವರ: ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ, ಅಂತರ್ಜಲ ಮಟ್ಟ ಇನ್ನೂ ಕಡಿಮೆಯೇ ಇದೆ. ಆದರೆ, ಈ ಹಿಂದಿನ ವರ್ಷಗಳಲ್ಲಿ ನಿರಂತರ ಬರ ಇರುವುದರಿಂದ ಅಂತರ್ಜಲದ ಅವಲಂಬನೆ ಹೆಚ್ಚಿರುತ್ತದೆ. ಇನ್ನೂ ಸುಮಾರು ದಿನಗಳು ಮಳೆಯೇ ಆಗಿರಲಿಲ್ಲ. ಈಗ ಬರೀ ಎರಡು ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ಹಾಗಾಗಿ, ಹಿಂದಿನ ವರ್ಷಗಳಿಗೆ ಇದನ್ನು ಹೋಲಿಕೆ ಮಾಡಲು ಬರುವುದಿಲ್ಲ. ಪ್ರಸ್ತುತ ವರ್ಷಕ್ಕೆ ಹೋಲಿಸಿದರೆ, ಎಲ್ಲ ತಾಲೂಕುಗಳಲ್ಲಿ ಏರಿಕೆ ಕಂಡುಬಂದಿದ್ದು ಸಮಾಧಾನಕರ ಬೆಳವಣಿಗೆ ಎಂದು ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕ ಎಸ್‌.ಬಿ. ಶೆಟ್ಟೆಣ್ಣವರ ತಿಳಿಸುತ್ತಾರೆ.

ಬೇಸಿಗೆಗೆ ಹೋಲಿಸಿದರೆ, ಮುಂಗಾರಿನ ಮೊದಲ ಮೂರು ತಿಂಗಳು (ಜೂನ್‌-ಆಗಸ್ಟ್‌) ಶೇ. 25ರಷ್ಟು ಹೆಚ್ಚು ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗಿದೆ. ಅಂದರೆ, ಮುಂಗಾರಿನಲ್ಲೂ ನೀರಿನ ಕೊರತೆ ಇತ್ತು. ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಮಳೆಯಿಂದ
ಪರಿಸ್ಥಿತಿ ಸುಧಾರಣೆಯಾಯಿತು. ಇದು ಭೂಮಿಯ ಆಳಕ್ಕಿಳಿದು, ಅಂತರ್ಜಲ ಮರುಪೂರಣಕ್ಕೆ ಇನ್ನಷ್ಟು ಸಮಯ ಬೇಕಾಗುತ್ತದೆ ಎಂದೂ ಶೆಟ್ಟೆಣ್ಣವರ ಹೇಳಿದರು.

ಇಳಿಮುಖ: ಈ ಬಾರಿ ಅಂತರ್ಜಲ ಮಟ್ಟ ಏರಿಕೆ ಕಂಡುಬಂದಿದ್ದರೂ, ಕಳೆದ ಹತ್ತು ವರ್ಷಗಳ ಸರಾಸರಿ ತೆಗೆದುಕೊಂಡರೆ ಅಂತರ್ಜಲ ಮಟ್ಟದಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಕೇವಲ 34 ತಾಲೂಕುಗಳಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ಅವುಗಳ ವಿವರ ಹೀಗಿದೆ (ಮೀ.ಗಳಲ್ಲಿ). ಈ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (0.28), ಬಳ್ಳಾರಿಯ ಹಗರಿಬೊಮ್ಮನಹಳ್ಳಿ (1.42), ಹೊಸಪೇಟೆ (0.43), ಬಳ್ಳಾರಿಯ ಸಂಡೂರು (1.64), ಸಿರಗುಪ್ಪ (0.41), ಚಾಮರಾಜನಗರದ ಯಳಂದೂರು (0.26), ಚಿಕ್ಕಬಳ್ಳಾಪುರದ ಗೌರಿಬಿದನೂರು (2.54), ಚಿತ್ರದುರ್ಗ (2.11) ಮತ್ತು ಹೊಳಲ್ಕೆರೆ (3.13), ಮಂಗಳೂರಿನ ಸುಳ್ಯ (0.12), ದಾವಣಗೆರೆಯ ಚನ್ನಗಿರಿ (2.53) ಮತ್ತು ಹೊನ್ನಾಳಿ (2.55), ಧಾರವಾಡದ ನವಲಗುಂದ (2.03), ಗದಗ (0.14), ರೋಣ (3.70) ಶಿರಹಟ್ಟಿ (8.17), ಕಲಬುರಗಿಯ ಅಫ‌jಲ್ಪುರ (3.02), ಚಿಂಚೋಳಿ (1.16), ಹಾಸನದ ಹೊಳೆನರಸೀಪುರ (1.78),
ಸಕಲೇಶಪುರ (0.02), ಹಾವೇರಿಯ ರಾಣೇಬೆನ್ನೂರು (8.12), ಕೊಪ್ಪಳದ ಗಂಗಾವತಿ (2.78), ಕುಷ್ಟಗಿ (5.24), ಕೊಪ್ಪಳ (1.92), ಯಲಬುರ್ಗ (3.90), ಮಂಡ್ಯದ ಶ್ರೀರಂಗಪಟ್ಟಣ (0.38), ಮೈಸೂರು (1.32), ರಾಯಚೂರಿನ ಸಿಂಧನೂರು (0.99), ತುಮಕೂರು (1.45), ಉಡುಪಿ (0.27), ಕುಂದಾಪುರ (0.40), ಕಾರವಾರ (0.07), ಕುಮಟಾ (0.04), ಸೂಪ (0.06) .

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.