ಅರ್ಧ ಹೇಳಿಕೆಗೆ ಮಹತ್ವ ನೀಡಿ ಗೊಂದಲ ಸೃಷ್ಟಿಸಲಾಗಿದೆ : ಸಚಿವ ಎಂಟಿಬಿ ನಾಗರಾಜ್

`ಕೇಳದೇ' ಕಾಂಗ್ರೆಸ್ ಪಕ್ಷ ಬಿಟ್ಟು ತಪ್ಪು ಮಾಡಿದೆ..!

Team Udayavani, May 26, 2022, 6:42 PM IST

mtb-nagaraju

ವಿಜಯಪುರ : ಕಾಂಗ್ರೆಸ್ಸಿನಿಂದ ಗೆದ್ದಿದ್ದ 15 ಶಾಸಕರು ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಬಂದಿದ್ದು, ಮತ್ತೆ ನಾವ್ಯಾರು ಕಾಂಗ್ರೆಸ್ ಪಕ್ಷಕ್ಕೆ ಮರಳುವ ಮಾತಿಲ್ಲ. ನನ್ನ ಅರ್ಧ ಹೇಳಿಕೆಗೆ ಮಹತ್ವ ನೀಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ನಮಗೆ ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನವಿಲ್ಲ, ಬಿಜೆಪಿ ತೊರೆಯುವ ಮಾತಿಲ್ಲ ಎಂದು ಸಚಿವ ಎಂ.ಟಿ.ಬಿ.ನಾಗರಾಜ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಿಟ್ಟು ತಪ್ಪು ಮಾಡಿದೆ ಎಂದು ತಮ್ಮ ಹೇಳಿಕೆಗೆ ಸಮಜಾಯಿಸಿ ನೀಡಿದ ಅವರು, ಕಾರ್ಯಕರ್ತರು ನೀವೇಕೆ ಪಕ್ಷ ಬಿಟ್ಟು ಹೋದಿರಿ, ನಮ್ಮನ್ನು ಏಕೆ ಕೇಳಲಿಲ್ಲ ಎಂದೆಲ್ಲ ಕಾರ್ಯಕರ್ತರು ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸುವಾಗ ನಿಮಗೆ ಕೇಳದೇ ಹೋಗಿದ್ದು ತಪ್ಪಾಯ್ತಪ್ಪಾ ಅಂತ ಹೇಳಿದ್ದೆ. ಆದರೆ ಮಾಧ್ಯಮಗಳು `ಕೇಳದೇ’ ಎನ್ನುವ ಪದ ಕತ್ತರಿಸಿ ಕೇವಲ ನಾನು ಹೋಗಿ ತಪ್ಪು ಮಾಡಿದೆ ಎಂಬುದನ್ನು ಪ್ರಸಾರ ಮಾಡಿ ಗೊಂದಲ ಸೃಷ್ಟಿಸಿವೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರಿಗೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಉದ್ದೇಶದಿಂದ ಪಕ್ಷದ ವರಿಷ್ಠರು ಮೇಲ್ಮನೆ ಚುನಾವಣೆಗೆ ಟಿಕೆಟ್ ನೀಡಿರಲಿಕ್ಕಿಲ್ಲ. ಪಕ್ಷದಲ್ಲಿ ಸಂಘಟನೆ ಚತುರನಾಗಿರುವ ವಿಜಯೇಂದ್ರ ಅವರಿಗೆ ನೇರ ಚುನವಣೆಗೆ ಅವಕಾಶ ನೀಡುವ ಉದ್ದೇಶದಿಂದ ಪಕ್ಷ ಈ ನಿರ್ಧಾರ ಕೈಗೊಂಡಿರಬಹುದು. ಇದು ನನ್ನ ಊಹೆ ಎಂದರು.

ಇನ್ನೂ ಯುವಕರಾಗಿರುವ ವಿಜಯೇಂದ್ರ ಅವರು, ರಾಜಕೀಯದಲ್ಲಿ ಬೆಳೆಯಲು ಪಕ್ಷದ ವರ್ಚಸ್ಸಿನ ಜೊತೆಗೆ ಅವರ ತಂದೆಯ ಹೆಸರಿನ ದೊಡ್ಡ ಶಕ್ತಿ ಇದೆ. ಭವಿಷ್ಯದಲ್ಲಿ ಯುವ ನಾಯಕರಾಗಿ ಬೆಳೆಯುವ ಎಲ್ಲ ಅವಕಾಶ ಇರುವ ವಿಜಯೇಂದ್ರ ಅವರು, ಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದು ಶಾಸಕರಾಗಲಿದ್ದಾರೆ ಎಂದರು.

ಮೂರು ಬಾರಿ ಮುಖ್ಯಮಂತ್ರಿ ಆಗಿರುವ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತ ಜನಮನದಲ್ಲಿದೆ. ತಂದೆಯಂತೆ ಪಕ್ಷ ಸಂಘಟಿಸಿ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಪಕ್ಷ ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲೇ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಮತ್ತೆ ಗೆದ್ದು ಬರುತ್ತೇನೆ ಎಂದರು.

ಇದನ್ನೂ ಓದಿ : ಪುತ್ತೂರು: ಮರ ಕಡಿಯುವ ವೇಳೆ ವಿದ್ಯುತ್‌ ಸ್ಪರ್ಶಿಸಿ ಕಾರ್ಮಿಕ ಸಾವು

ಪಠ್ಯಕ್ರಮದಲ್ಲಿ ಹೆಡ್ಗೆವಾರ್ ಭಾಷಣ ಸೇರ್ಪಡೆಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅಂತಿಮ ನಿರ್ಮಾನ ಶಿಕ್ಷಣ ಸಚಿವ ನಾಗೇಶ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟದ್ದು ಎಂದರು.

ಬಿಜೆಪಿ ಪಕ್ಷದಲ್ಲಿ ಯಡಿಯೂಪ್ಪ ಹಾಗೂ ಬಿ.ಎಲ್.ಸಂತೋಷ ಮಧ್ಯೆ ಗುಂಪುಗಾರಿಕೆ, ಬಣ ರಾಜಕಾರಣವಿಲ್ಲ. ಎಲ್ಲರೂ ಬಿಜೆಪಿ ಪಕ್ಷದವರೇ, ಇದೆಲ್ಲ ಊಹಾಪೋಹ ಮಾತ್ರ ಎಂದರು.

ಸಂಘಟನಾ ಚತುರರಾಗಿರುವ ಕೇಂದ್ರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪಕ್ಷದ ಹಿರಿಯ ಶಾಸಕರಾಗಿರುವ ಬಸನಗೌಡ ಪಾಟೀಲ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬೇಕಿತ್ತು. ಸಂಪುಟ ವಿಸ್ತರಣೆ ವೇಳೆ ವರಿಷ್ಠರು ಅವಕಾಶ ನೀಡುವ ನಿರೀಕ್ಷೆ ಇದೆ ಎಂದರು.

ಟಾಪ್ ನ್ಯೂಸ್

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ 728 ಅಂಕ ಏರಿಕೆ, ನಿಫ್ಟಿ 20,100

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ 728 ಅಂಕ ಏರಿಕೆ, ನಿಫ್ಟಿ 20,100

Sandalwood: ‘ಕಾಟೇರʼದಲ್ಲಿ ಪಕ್ಕಾ ಲೋಕಲ್‌ ಹೈದನಾದ ʼದಾಸʼ: ರಿಲೀಸ್ ಡೇಟ್ ಅನೌನ್ಸ್

Sandalwood: ‘ಕಾಟೇರʼದಲ್ಲಿ ಪಕ್ಕಾ ಲೋಕಲ್‌ ಹೈದನಾದ ʼದಾಸʼ: ರಿಲೀಸ್ ಡೇಟ್ ಅನೌನ್ಸ್

Bribe: ಪಹಣಿ ಪತ್ರ ತಿದ್ದುಪಡಿಗೆ ಲಂಚ… ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

Bribe: ಪಹಣಿ ಪತ್ರ ತಿದ್ದುಪಡಿಗೆ ಲಂಚ… ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು…!

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು

Kollywood: 4 ಬಾರಿ ರಜಿನಿಕಾಂತ್‌ ಜೊತೆ ನಟಿಸುವ ಅವಕಾಶ ಬಂದರೂ ತಿರಸ್ಕರಿಸಿದ ಖ್ಯಾತ ನಟಿ ಈಕೆ

Kollywood: 4 ಬಾರಿ ರಜಿನಿಕಾಂತ್‌ ಜೊತೆ ನಟಿಸುವ ಅವಕಾಶ ಬಂದರೂ ತಿರಸ್ಕರಿಸಿದ ಖ್ಯಾತ ನಟಿ ಈಕೆ

13-katapady

Agriculture: ಮನೆಯ ತಾರಸಿನಲ್ಲಿ 200ಕ್ಕೂ ಹೆಚ್ಚು ಬೆಳೆ: ಜೋಸೆಫ್ ಲೋಬೋ ಸಾಧನೆ

Aircraft: 8 ಮಂದಿಯನ್ನು ಹೊತ್ತ ಅಮೆರಿಕದ ಸೇನಾ ವಿಮಾನ ಜಪಾನ್‌ನ ಯಕುಶಿಮಾ ದ್ವೀಪದ ಬಳಿ ಪತನ

Aircraft: 8 ಮಂದಿಯನ್ನು ಹೊತ್ತ ಅಮೆರಿಕದ ಸೇನಾ ವಿಮಾನ ಜಪಾನ್‌ನ ಯಕುಶಿಮಾ ದ್ವೀಪದ ಬಳಿ ಪತನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bribe: ಪಹಣಿ ಪತ್ರ ತಿದ್ದುಪಡಿಗೆ ಲಂಚ… ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

Bribe: ಪಹಣಿ ಪತ್ರ ತಿದ್ದುಪಡಿಗೆ ಲಂಚ… ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು…!

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು

12-cm

CM: 536ನೇ ಶ್ರೀ ಕನಕ ಜಯಂತ್ಯೋತ್ಸವ, ಭಾವೈಕ್ಯತಾ ಸಮಾವೇಶ ಉದ್ಘಾಟಿಸಿದ ಸಿ.ಎಂ. ಸಿದ್ದರಾಮಯ್ಯ

11-cm

Drought:ಬರಗಾಲದ ಪರಿಹಾರ ಕುರಿತು ಸಮೀಕ್ಷೆ; ಎನ್.ಡಿ.ಆರ್.ಎಫ್ ಪ್ರಕಾರ ಪರಿಹಾರ: ಮುಖ್ಯಮಂತ್ರಿ

Sagara: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ… ವಿದ್ಯಾರ್ಥಿನಿಯರ ಮೊರೆ

Sagara: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ… ವಿದ್ಯಾರ್ಥಿನಿಯರ ಮೊರೆ

MUST WATCH

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

udayavani youtube

ಗುರುಕಿರಣ್ ರಿಗೆ ಬೆಂಗಳೂರು ಕಂಬಳದ ಮೇಲಿನ ಆಸಕ್ತಿಯ ಹಿಂದಿದೆ ಅದೊಂದು ಕಾರಣ

udayavani youtube

ಕಂಬಳದ ಬಗ್ಗೆ ಸಮಿತಿಯವರ ಮಾತು

ಹೊಸ ಸೇರ್ಪಡೆ

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ 728 ಅಂಕ ಏರಿಕೆ, ನಿಫ್ಟಿ 20,100

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ 728 ಅಂಕ ಏರಿಕೆ, ನಿಫ್ಟಿ 20,100

Sandalwood: ‘ಕಾಟೇರʼದಲ್ಲಿ ಪಕ್ಕಾ ಲೋಕಲ್‌ ಹೈದನಾದ ʼದಾಸʼ: ರಿಲೀಸ್ ಡೇಟ್ ಅನೌನ್ಸ್

Sandalwood: ‘ಕಾಟೇರʼದಲ್ಲಿ ಪಕ್ಕಾ ಲೋಕಲ್‌ ಹೈದನಾದ ʼದಾಸʼ: ರಿಲೀಸ್ ಡೇಟ್ ಅನೌನ್ಸ್

Bribe: ಪಹಣಿ ಪತ್ರ ತಿದ್ದುಪಡಿಗೆ ಲಂಚ… ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

Bribe: ಪಹಣಿ ಪತ್ರ ತಿದ್ದುಪಡಿಗೆ ಲಂಚ… ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು…!

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು

Kollywood: 4 ಬಾರಿ ರಜಿನಿಕಾಂತ್‌ ಜೊತೆ ನಟಿಸುವ ಅವಕಾಶ ಬಂದರೂ ತಿರಸ್ಕರಿಸಿದ ಖ್ಯಾತ ನಟಿ ಈಕೆ

Kollywood: 4 ಬಾರಿ ರಜಿನಿಕಾಂತ್‌ ಜೊತೆ ನಟಿಸುವ ಅವಕಾಶ ಬಂದರೂ ತಿರಸ್ಕರಿಸಿದ ಖ್ಯಾತ ನಟಿ ಈಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.