ರಾಜ್ಯದ ಸಂಘಟನೆ ವಿಚಾರ ಕುಮಾರಸ್ವಾಮಿ ನೋಡಿಕೊಳ್ತಾರೆ : ಹೆಚ್.ಡಿ. ದೇವೇಗೌಡ


Team Udayavani, May 24, 2021, 3:17 PM IST

jಹಗ್ದ್ಗಹಜಹಗ್ದ

ಬೆಂಗಳೂರು : ಕೋವಿಡ್ ವಿಶ್ವದಾದ್ಯಂತ ನಿರೀಕ್ಷೆ ಮೀರಿ ಹರಡಿದೆ. ಬಿಬಿಎಂಪಿ ಚುನಾವಣೆ, ವಿಧಾನಸಭೆ ಚುನಾವಣೆ ಸಂಬಂಧ ನಮ್ಮ ಮುಖಂಡರ ಜೊತೆ ಸಭೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರ ಜೊತೆ ಚರ್ಚೆ ಮಾಡಿ ಅಭ್ಯರ್ಥಿಗಳ ಘೋಷಣೆ ಮಾಡ್ತೀವಿ ರಾಜ್ಯದಲ್ಲಿ 3 ವಿಭಾಗಗಳಾಗಿ ಮಾಡಿ ಒಟ್ಟಾಗಿ ಕೆಲಸ ಮಾಡ್ತೀವಿ, ಎಲ್ಲಾ ಜಿಲ್ಲೆಗಳ ಮುಖಂಡರ ಸಭೆಯನ್ನು ಕುಮಾರಸ್ವಾಮಿ ಅವರೇ ಮಾಡಿ ಮುಂದಿನ ನಿರ್ಧಾರ ಮಾಡ್ತಾರೆ, ಕುಮಾರಸ್ವಾಮಿ ಅವರು ಶಾಸಕರ ಜೊತೆ ನಿರಂತರ ಸಭೆ ಮಾಡ್ತಿದ್ದಾರೆ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಪ್ರಾಧಾನಿ ದೇವೇಗೌಡ ಹೇಳಿದ್ದಾರೆ.

ಟ್ವಿಟರ್ ಮೂಲಕ ಸಲಹೆಗಳನ್ನ ನೀಡುವ ಕೆಲಸ ಮಾಡ್ತಿದ್ದಾರೆ ಅವರು ಶಾಸಕಾಂಗ ಪಕ್ಷದ ನಾಯಕರು ಅವರೆ ಇಡೀ ರಾಜ್ಯದ ಕೆಲಸ ಮುಂದುವರಿಸುತ್ತಾರೆ. ನನ್ನ ಅವಧಿಯಲ್ಲಿ ಬೆಂಗಳೂರಿಗೆ, ರಾಜ್ಯಕ್ಕೆ ಏನು ಕೆಲಸ ಆಗಿದೆ. ಕುಮಾರಸ್ವಾಮಿ ಕಾಲದಲ್ಲಿ ಏನಾಗಿದೆ ಅಂತ ಮನೆ ಮನೆಗೂ ತಲುಪಿಸುವ ಕೆಲಸ ಆಗಬೇಕು. ಎಲ್ಲಾ ವಾರ್ಡ್ ಗಳ ಮುಖಂಡರನ್ನು ಭೇಟಿ ಮಾಡಿ ಚುನಾವಣೆ ಬರೋ ಮುಂಚೆ ಎಲ್ಲಾ ವಾರ್ಡ್ ನಲ್ಲಿ ಸಭೆ ಮಾಡ್ತೀವಿ.

ರಾಜ್ಯದ ಸಂಘಟನೆ ವಿಚಾರ ಕುಮಾರಸ್ವಾಮಿ ನೋಡಿಕೊಳ್ತಾರೆ ಈಗಾಗಲೇ ಪಂಚರತ್ನ ಯೋಜನೆ ಬಿಡುಗಡೆ ಮಾಡೋದಾಗಿ ಕುಮಾರಸ್ವಾಮಿ ಹೇಳಿದ್ದಾರೆ ರಾಜ್ಯದ ಜವಾಬ್ದಾರಿಯನ್ನ ಅವರು ನಿಭಾಯಿಸುತ್ತಾರೆ. ಕೊರೊನಾ ವಿಚಾರದಲ್ಲಿ ಪ್ರಧಾನಿ‌ ಮೋದಿ, ಹಾಗೂ ನಮ್ಮ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಲಹೆ ಕೊಟ್ಟಿದ್ದೀನಿ ನಾನು 12 ಸಲಹೆಗಳನ್ನ ಕೊಟ್ಟಿದ್ದೆ ಅದರಲ್ಲಿ ಕೆಲವು ಸಲಹೆಗಳನ್ನ ಕಾರ್ಯಗತ ಮಾಡುತ್ತಿದ್ದಾರೆ.

ಮೊದಲ ಅಲೆಯಲ್ಲಿ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ರು ಅಂತ ಮೋದಿಯನ್ನ ಎಲ್ಲರೂ ಹೊಗಳಿದ್ದರು. ಎರಡನೇ ಅಲೆಯಲ್ಲಿ ಸೋಂಕು ತೀವ್ರವಾಗಿ ಹೆಚ್ಚಳ ಆಗಿದೆ ಜೊತೆಗೆ ಬ್ಲ್ಯಾಕ್ ಮತ್ತು ವೈಟ್ ಫಂಗಸ್ ಬಗ್ಗೆ ಆತಂಕ ಹುಟ್ಟುಕೊಂಡಿದೆ ದೇಶ ವಿದೇಶಗಳ ಎಕ್ಸ್ ಪರ್ಟ್ ಗಳು ಇದರ ಬಗ್ಗೆ ಮಾತನಾಡುತ್ತಿದ್ದಾರೆ‌ ನನ್ನ ಜೀವಿತಾವಧಿಯಲ್ಲಿ ಇಂತಹ ದೊಡ್ಡ ಸಾಂಕ್ರಾಮಿಕ ರೋಗ ನೋಡಿಲ್ಲ ಇದರಿಂದ ದೇಶದ ಜನ ಸಮಸ್ಯೆಗೆ ಸಿಲುಕಿದ್ದಾರೆ. ರೆಮಿಡಿಸ್ವೀರ್, ಲಸಿಕೆ ಕಳ್ಳದಾರಿಯಲ್ಲಿ ಮಾರಾಟ ಮಾಡ್ತಿದ್ದಾರೆ ಈಗಾಗಲೇ ಅನೇಕ ಜನರನ್ನು ಬಂಧನ ಮಾಡಿದ್ದಾರೆ ಆಡಳಿತದಲ್ಲಿ ಕೆಲ ಲೋಪಗಳು ಇರಬಹುದು
ಇದನ್ನ ಸರಿ ಮಾಡೋ ಕೆಲಸ ಸರ್ಕಾರ ತಕ್ಷಣ ಮಾಡಬೇಕು‌ ಎಂದರು.

ಸರ್ಕಾರಕ್ಕೆ ಕುಮಾರಸ್ವಾಮಿ ಒಂದು ತಿಂಗಳ ಮುಂಚೆಯೇ ಸಲಹೆ ಕೊಟ್ಟಿದ್ದರು ಆದರೆ ಆಗ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಹಳ್ಳಿಗಳಲ್ಲೂ ಸೋಂಕು ಹೆಚ್ಚುತ್ತಿದೆ ಆಗಾಗಿ ಇನ್ನು ಹೆಚ್ಚಿನ ಕಠಿಣ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ. ಡಿಸಿಎಂ ಅವರು ಆರೋಗ್ಯ ಸಚಿವರು ನಮ್ಮ ಜಿಲ್ಲೆಗೂ ವೆಂಟಿಲೇಟರ್, ಔಷಧಿ ಎಲ್ಲಾ ಕಳಿಸಿದ್ದಾರೆ.
ಸರ್ಕಾರ ಏನು ಮಾಡಿಲ್ಲ ಅಂತ ನಾನು ಹೇಳೊಲ್ಲ. ಆದರೆ ಇನ್ನು ಸಾಕಷ್ಟು ಕೆಲಸ ಮಾಡೋ ಅವಶ್ಯಕತೆ ಇದೆ. ಅರಸಿಕೆರೆ ತಾಲೂಕಿನಲ್ಲಿ ಸೋಂಕಿತರೊಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ 4 ಲಕ್ಷ ಖರ್ಚಾಗಿದೆ ಅದೇ ಮನೆಯಲ್ಲಿ ತಾಯಿ, ಹೆಂಡತಿ, ತಂದೆಗೂ ಸೋಂಕು ಬಂದಿದೆ. ನಾನೇ ಮೆಡಿಕಲ್ ಅಧಿಕಾರಿಗಳಿಗೆ ಕರೆ ಮಾಡಿ ಕ್ರಮವಹಿಸಲು ಸೂಚನೆ ನೀಡಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಕರ್ಯಗಳ ಕೊರತೆ ಇದೆ ಹೀಗಾಗಿ ಖಾಸಗಿ ಆಸ್ಪತ್ರೆಗೆ ಹೋಗುವ ಘಟನೆ ಆಗುತ್ತಿದೆ ವ್ಯವಸ್ಥೆಯಲ್ಲಿ ಕೆಲ ದೋಷಗಳು ಇವೆ ಇದನ್ನ ಸರಿ ಮಾಡೋ ಕೆಲಸ ಸರ್ಕಾರ ಮಾಡಬೇಕು. ಕೇಂದ್ರದಿಂದ ಲಸಿಕೆ, ಔಷಧಿ, ವೆಂಟಿಲೇಟರ್ , ಆಕ್ಸಿಜನ್ ನಿಡೋದ್ರಲ್ಲಿ ಮಲತಾಯಿ ಧೋರಣೆ ತೋರಿದೆ ಅನ್ನುವ ವಿಚಾರ ಈ ಬಗ್ಗೆ ನಾನು ಮೋದಿ ಅವರಿಗೆ ಪತ್ರ ಬರೆದಿದ್ದೇನೆ
ಕುಮಾರಸ್ವಾಮಿ ಅವರು ಕೂಡಾ ಈ ಬಗ್ಗೆ ಅನೇಕ ಬಾರಿ ಮಾತಾಡಿದ್ದಾರೆ ಹಣಕಾಸು ಹಂಚಿಕೆಯಲ್ಲಿ ನಮಗೆ ಅನ್ಯಾಯ ಆಗಿದೆ
ಚಿಕ್ಕ ರಾಜ್ಯಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡ್ತಾರೆ. ನಮಗೆ ಕಡಿಮೆ ಹಣ ಬಿಡುಗಡೆ ಮಾಡಿದ್ದಾರೆ ಈ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ. ಮೋದಿ ಅವರ ಕ್ಷೇತ್ರದಲ್ಲೂ ಸೋಂಕು ಹೆಚ್ಚಾಗಿದೆ ಸ್ವಲ್ಪ ಅವರು ಭಾವೋದ್ವೇಗಕ್ಕೆ ಒಳಗಾಗಿ ಮಾತಾಡಿದ್ದಾರೆ

ಸೋಂಕು ಹೆಚ್ಚಳಕ್ಕೆ ಪಂಚ ರಾಜ್ಯಗಳ ಚುನಾವಣೆ ಕೂಡ ಕಾರಣವಾಗಿರಬಹುದು ಕೇಂದ್ರ ಸರ್ಕಾರದವರು 5 ರಾಜ್ಯಗಳ ಚುನಾವಣೆ ಕಡೆ ಹೆಚ್ಚು ಗಮನ ಕೊಟ್ಟರು. ಚುನಾವಣೆ ಹಿನ್ನಲೆ ಕೊರೊನಾ ಬಗ್ಗೆ ಗಮನ ಕೊಡಲಿಲ್ಲ. ಚುನಾವಣೆ ಬದಲು ಕೊರೊನಾ ಕಡೆ ಗಮನ ಕೊಟ್ಡಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ಹೀಗೆ ಆಗುತ್ತಿರಲಿಲ್ಲವೇನೋ ಚುನಾವಣೆ ಕೆಲಸದಿಂದ ಕೊರೊನಾ ಕೆಲಸದಲ್ಲಿ ಮೋದಿ ಅವರು ಸ್ವಲ್ಪ ನೆಗಲೆಟ್ ಮಾಡಿದ್ರು ಅಂತ ಎಲ್ಲರೂ ಮಾತನಾಡುತ್ತಿದ್ದಾರೆ ಹೀಗಾಗಿ ಈ ಬಾರಿ ಹೆಚ್ಚು ಸಮಸ್ಯೆ ಆಗೋದಕ್ಕೆ ಕಾರಣ ಆಗಿರಬಹುದು. ಚುನಾವಣೆಯಲ್ಲಿ ಗೆಲ್ಲಲೇ ಬೇಕು ಅಂತ ಪಣಕ್ಕೆ ಬಿದ್ರು. ಚುನಾವಣೆ ಗಮನದಲ್ಲಿ ಕೊರೊನಾ ನಿರ್ವಹಣೆ ಮರೆತ್ರು. ಮೋದಿ ವಿರುದ್ದ ದೇವೇಗೌಡರ ಕಿಡಿ.

ಕುಮಾರಸ್ವಾಮಿ ಪ್ರತಿ ಹಂತದಲ್ಲೂ ಸರ್ಕಾರವನ್ನ ಎಚ್ಚರಿಸುವ ಕೆಲಸ ಮಾಡ್ತಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಬೀದಿಗಳಿದು ಹೋರಾಟ ಮಾಡೋ ಸ್ಥಿತಿ ಇಲ್ಲ ಆದ್ರೆ ಸರ್ಕಾರವನ್ನ ಎಚ್ಚರಿಸುವ ಕೆಲಸ ನಾವು ಮಾಡ್ತೀವಿ ಜೊತೆಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಜನತೆಯ ಸಂಕಷ್ಟಕ್ಕೆ ನೆರವಾಗಬೇಕೆಂದು ಮಾಧ್ಯಮದವರ ಮುಖೇನ ಮನವಿ ಮಾಡುತ್ತೇನೆ

ಟಾಪ್ ನ್ಯೂಸ್

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.