ಪಂಚಭೂತಗಳಲ್ಲಿ “ಜಂಗಲ್‌ವಾಲೆ ಬಾಬಾ’ ಲೀನ

Team Udayavani, Oct 20, 2019, 3:04 AM IST

panchaboota

ಕಾಗವಾಡ: ಯಮ ಸಲ್ಲೇಖನ ವ್ರತದಿಂದ ಸಾಧು ಸಮಾಧಿ ಮರಣ ಹೊಂದಿದ “ಜಂಗಲ್‌ವಾಲೆ ಬಾಬಾ’ ಖ್ಯಾತಿಯ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜರ ಪಾರ್ಥಿವ ಶರೀರ ಅವರ ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜುಗೂಳದಲ್ಲಿ ಶನಿವಾರ ಪಂಚಭೂತಗಳಲ್ಲಿ ಲೀನವಾಯಿತು.

ಇದಕ್ಕೂ ಮುನ್ನ ಮಹಾರಾಜರ ಪಾರ್ಥಿವ ಶರೀರವನ್ನು ಪುಷ್ಪಕ ರಥದಲ್ಲಿ ಗಜ, ಕುದುರೆ, ಸಹವಾದ್ಯದೊಂದಿಗೆ ಗ್ರಾಮದ ಪ್ರಮುಖ ಮಾರ್ಗಗಳ ಮುಖಾಂತರ ಸ್ವಾಮೀಜಿಯವರ ಜನ್ಮ ಸ್ಥಾನ ಮೋಳೆ ಬಂಧುಗಳ ತೋಟದವರೆಗೆ ತೆಗೆದುಕೊಂಡು ಹೋಗಲಾಯಿತು. ಈ ವೇಳೆ ಸಾವಿರಾರು ಮಂದಿ ಶ್ರಾವಕ- ಶ್ರಾವಕಿಯರು ಪಾಲ್ಗೊಂಡಿದ್ದರು.

ಅಂತ್ಯಸಂಸ್ಕಾರದ ಸಮಯದಲ್ಲಿ ನಾಂದಣಿ ಜಿನಸೇನ ಭಟ್ಟಾರಕ ಮಹಾ ರಾಜರು, ಕಾರ್ಕಳ ಶ್ರೀ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಆಚಾರ್ಯ ಸೂರ್ಯ ಸಾಗರ, ಸುಮತಿ ಸಾಗರ, ಸಮರ್ಪಣ ಸಾಗರ, ಮೋಕ್ಷ ಸಾಗರ, ಅಜೀತಸೇನ ಮುನಿ ಮಹಾರಾಜರು, ಪ್ರಸಂಗ ಸಾಗರ, ಜ್ಞಾನಭೂಷಣ ಮುನಿ ಮಹಾರಾಜರು ವಿಧಿ  ಮಂತ್ರೋಪಚಾರ ಮಾಡಿದರು.

ನವದೆಹಲಿಯ ಪವನ ಜೈನ, ನವೀನ ಜೈನ, ಅರುಣ ಜೈನ (ಕಟೋಲೆ), ರಾಜೇಂದ್ರ ಜೈನ ಕುಟುಂಬದವರು ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು. ಕೊನೆಗೆ, ಚಂದನದ ಕಟ್ಟಿಗೆಗಳು, ಕೊಬ್ಬರಿ, ಕರ್ಪೂರ, ಹಾಲು, ತುಪ್ಪ, ಖಾರಿಕ, ಕಶಾಯ ಬಳಸಿ ಅಭಿಷೇಕ ಮಾಡಲಾ ಯಿತು. ನಂತರ, ರಾಜಸ್ತಾನ ಕೋಟಾದ ಉದ್ಯಮಿಗಳಾದ ವಿನೋದ ಜೈನ ಹಾಗೂ ಅಭಿಷೇಕ ಜೈನ ಕುಟುಂಬದವರು ಅಗ್ನಿ ಸ್ಪರ್ಶ ಮಾಡಿದರು.

ಜುಗೂಳ ಗ್ರಾಮದ ಜೈನ ಸಮಾಜದ ಅಧ್ಯಕ್ಷ ಶ್ರೇಣಿಕ ಅಕ್ಕೋಳೆ, ಅರುಣ ಗಣೇಶವಾಡಿ ಮತ್ತು ಸ್ವಾಮೀಜಿಯವರ ಮೋಳೆ ಪರಿವಾರದ ಸದಸ್ಯರಿಂದ ಪಾರ್ಥಿವ ಶರೀರಕ್ಕೆ ಅಭಿಷೇಕ ನೆರವೇರಿಸಲಾಯಿತು. ಪ್ರಕಾಶ ಮೋದಿ, ಸುಮನಲತಾ ಮೋದಿ ಅವರು ಭೂಮಿಶುದ್ಧಿ ಮಾಡಿದರು.

ಚಿನ್ಮಯ ಆಸ್ಪತ್ರೆ ಸ್ಥಾಪನೆ: ಈ ನಡುವೆ, ಜುಗೂಳ ಸಮಾಜ ಸಂಘಟನೆ ಹಾಗೂ ದಿಲ್ಲಿ ಉದ್ಯಮಿಗಳ ಸಮ್ಮುಖದಲ್ಲಿ ಚಿನ್ಮಯಸಾಗರ ಟ್ರಸ್ಟ್‌ ಹೆಸರಿನಲ್ಲಿ ಚಿನ್ಮಯ ಆಸ್ಪತ್ರೆ ನಿರ್ಮಾಣದ ಘೋಷಣೆ ಮಾಡಲಾಯಿತು. ಇದಕ್ಕೆ ಸುಮಾರು ಒಂದು ಕೋಟಿ ರೂ.ವೆಚ್ಚವಾಗುತ್ತದೆ ಎಂದು ಹೇಳಿದಾಗ ಅನೇಕ ಉದ್ಯಮಿಗಳು ಧನಸಹಾಯದ ಭರವಸೆ ನೀಡಿದರು. ಮೊದಲನೇ ಪುಣ್ಯತಿಥಿಯನ್ನು ಆಸ್ಪತ್ರೆ ಭವನದಲ್ಲಿ ಮಾಡುವ ಬಗ್ಗೆ ಆಚಾರ್ಯ ಚಂದ್ರಪ್ರಭು ಮುನಿ ಮಹಾರಾಜರು ಹಾಗೂ ಸೌರಭಸೇನ ಭಟ್ಟಾರಕ ಮಹಾರಾಜರು ಘೋಷಣೆ ಮಾಡಿದರು.

ಟಾಪ್ ನ್ಯೂಸ್

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.