ವಿಧಾನಪರಿಷತ್; ಇಬ್ಬರಿಗೆ ಗವರ್ನರ್ ಅಂಕಿತ, ಲಿಂಗಪ್ಪ ಹೆಸರು ತಿರಸ್ಕೃತ
Team Udayavani, May 17, 2017, 6:30 PM IST
ಬೆಂಗಳೂರು:ಮೇಲ್ಮನೆಗೆ ಮೂವರ ಹೆಸರನ್ನು ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರ ಶಿಫಾರಸು ಮಾಡಿ ಕಳುಹಿಸಿದ್ದ ಪಟ್ಟಿಗೆ ರಾಜ್ಯಪಾಲ ವಜೂಭಾಯ್ ವಾಲಾ ಅವರು ಇಬ್ಬರ ಹೆಸರಿಗೆ ಒಪ್ಪಿಗೆ ಸೂಚಿಸಿ, ಶಾಸಕ ಸಿಎಂ ಲಿಂಗಪ್ಪ ಅವರ ಹೆಸರನ್ನು ತಿರಸ್ಕರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ವಿಧಾನಪರಿಷತ್ ಗೆ ನಾಮನಿರ್ದೇಶನ ಮಾಡಲು ಶಾಸಕರಾದ ರಮೇಶ್, ಮೋಹನ್ ಕೊಂಡಜ್ಜಿ ಹಾಗೂ ಸಿಎಂ ಲಿಂಗಪ್ಪ ಅವರ ಹೆಸರನ್ನು ಶಿಫಾರಸು ಮಾಡಲು ರಾಜ್ಯಪಾಲರಿಗೆ ಕಳುಹಿಸಿದ್ದರು.
ಆದರೆ ರಮೇಶ್ ಹಾಗೂ ಮೋಹನ್ ಕೊಂಡಜ್ಜಿ ಅವರ ಹೆಸರಿಗೆ ಒಪ್ಪಿಗೆ ಸೂಚಿಸಿರುವ ರಾಜ್ಯಪಾಲರು ಶಿಕ್ಷಣ, ಸಮಾಜ ಸೇವೆ ಕೋಟಾದಲ್ಲಿ ಹೆಸರನ್ನು ಶಿಫಾರಸು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ತಿರಸ್ಕರಿಸಿದ್ದಾರೆ ಎಂದು ವರದಿ ವಿವರಿಸಿದೆ. ಲಿಂಗಪ್ಪ ಅವರ ಹೆಸರನ್ನು ಶಿಫಾರಸು ಮಾಡಿರುವುದಕ್ಕೆ ಸ್ಪಷ್ಟನೆ ಕೋರಿ ರಾಜ್ಯಪಾಲರು ಕಡತವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದು ವರದಿ ವಿವರಿಸಿದೆ.