ಮಾ.23ಕ್ಕೆ ವಿವೇಕಾನಂದ ಯುವಶಕ್ತಿ ಸಂಘಕ್ಕೆ ಚಾಲನೆ: ಸಿಎಂ ಬೊಮ್ಮಾಯಿ

ಹಿರಿಯ ಅಧಿಕಾರಿಗಳು, ಜಿಪಂ ಸಿಇಒಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದ ಸಿಎಂ

Team Udayavani, Mar 20, 2023, 6:30 AM IST

ಮಾ.23ಕ್ಕೆ ವಿವೇಕಾನಂದ ಯುವಶಕ್ತಿ ಸಂಘಕ್ಕೆ ಚಾಲನೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಗೆ ಮಾ.23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ಈ ಕುರಿತು ಭಾನುವಾರ ಮುಖ್ಯಮಂತ್ರಿಯವರು ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಸಿಇಒಗಳೊಂದಿಗೆ ಸಭೆ ನಡೆಸಿ ಸಂಘಗಳ ರಚನೆ ಪ್ರಗತಿಯ ಕುರಿತು ಮಾಹಿತಿ ಪಡೆದರು.

ಯುವಕರಿಗಾಗಿ ಮೊದಲ ಬಾರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಇಂತಹ ಯೋಜನೆ ರೂಪಿಸಲಾಗಿದ್ದು, ಜಿಪಂ ಸಿಇಒಗಳು ಹೆಚ್ಚಿನ ಆದ್ಯತೆಯೊಂದಿಗೆ ಕಾರ್ಯನಿರ್ವಹಿಸಬೇಕು. ಜಂಟಿ ಬಾಧ್ಯತಾ ಗುಂಪುಗಳು ರಚನೆಯಾಗಿ, ಸುತ್ತು ನಿಧಿ ಹಂಚಿಕೆಯೊಂದಿಗೆ ಅಧಿಕಾರಿಗಳ ಕೆಲಸ ಮುಗಿಯುವುದಿಲ್ಲ. ಈ ಗುಂಪುಗಳು ಯೋಜನೆಯನ್ನು ಗುರುತಿಸಿ, ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು, ತಮ್ಮ ಉದ್ದಿಮೆ ಸ್ಥಾಪಿಸಿ, ಉತ್ಪಾದನೆ ಪ್ರಾರಂಭಿಸುವವರೆಗೂ ಅವರಿಗೆ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಸೂಚಿಸಿದರು.

ಯುವಶಕ್ತಿ ಸಂಘಗಳಿಗೆ ಸಾಲ ನೀಡುವಾಗ, ಯೋಜನಾ ಮೊತ್ತ ಹೆಚ್ಚಾಗಿದ್ದು, ಅವು ಲಾಭದಾಯಕ ಯೋಜನೆಗಳಾದರೆ, ಬ್ಯಾಂಕುಗಳು ಸರ್ಕಾರ ನಿಗದಿಪಡಿಸಿದ 5 ಲಕ್ಷ ರೂ. ಮಿತಿಗಿಂತ ಹೆಚ್ಚಿನ ಮೊತ್ತದ ಸಾಲ ಮಂಜೂರು ಮಾಡಿ, ಯುವಕರನ್ನು ಬೆಂಬಲಿಸಬೇಕೆಂದು ಮುಖ್ಯಮಂತ್ರಿಗಳು ಬ್ಯಾಂಕರುಗಳಿಗೆ ಸಲಹೆ ನೀಡಿದರು.

ಸಚಿವ ನಾರಾಯಣ ಗೌಡ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ. ಅತೀಕ್‌, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಎಸ್‌. ಸೆಲ್ವಕುಮಾರ್‌ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

10,000 ರೂ. ಸುತ್ತು ನಿಧಿ
ರಾಜ್ಯದಲ್ಲಿ ಒಟ್ಟು 5951 ಗ್ರಾಮ ಪಂಚಾಯಿತಿಗಳಿದ್ದು, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ, ಪ್ರತಿ ಗ್ರಾಪಂಗೆ ಎರಡು ಜಂಟಿ ಬಾಧ್ಯತಾ ಗುಂಪುಗಳನ್ನು ರಚಿಸಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಇದೀಗ ಒಟ್ಟು 6,509 ಜಂಟಿ ಬಾಧ್ಯತಾ ಗುಂಪುಗಳು ರಚನೆಯಾಗಿದ್ದು 5,393 ಜಂಟಿ ಬಾಧ್ಯತಾ ಗುಂಪುಗಳು ರಚನೆಯಾಗಬೇಕಾಗಿದೆ. ಈಗಾಗಲೇ 1754 ಜಂಟಿ ಬಾಧ್ಯತಾ ಗುಂಪುಗಳಿಗೆ ತಲಾ 10,000 ರೂ.ಗಳ ಸುತ್ತು ನಿಧಿಯನ್ನು ಪಾವತಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಟಾಪ್ ನ್ಯೂಸ್

Bantwal ಕಂದೂರು: ವಿದ್ಯುತ್‌ ಕಂಬಕ್ಕೆ ಬಸ್‌ ಢಿಕ್ಕಿ

Bantwal ಕಂದೂರು: ವಿದ್ಯುತ್‌ ಕಂಬಕ್ಕೆ ಬಸ್‌ ಢಿಕ್ಕಿ

Road Mishap ವಗ್ಗ: ಕಾರು-ಆಟೋ ರಿಕ್ಷಾ ಢಿಕ್ಕಿ; ಓರ್ವ ಸಾವು

Road Mishap ವಗ್ಗ: ಕಾರು-ಆಟೋ ರಿಕ್ಷಾ ಢಿಕ್ಕಿ; ಓರ್ವ ಸಾವು

Bajpe ಅಕ್ರಮ ಮರಳುಗಾರಿಕೆ : 2 ಟಿಪ್ಪರ್‌, 15 ದೋಣಿ ವಶ

Bajpe ಅಕ್ರಮ ಮರಳುಗಾರಿಕೆ : 2 ಟಿಪ್ಪರ್‌, 15 ದೋಣಿ ವಶ

Karkala ಪರಶುರಾಂ ಥೀಂ ಪಾರ್ಕ್‌ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭೇಟಿ

Karkala ಪರಶುರಾಂ ಥೀಂ ಪಾರ್ಕ್‌ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭೇಟಿ

Kundapura ಅರಣ್ಯ ಪಾಲಾಗಿದ್ದ ಯುವಕ 8 ದಿನಗಳ ಬಳಿಕ ಪ್ರತ್ಯಕ್ಷ! ಕಾವಲಾಗಿ ಜತೆಗೇ ಇದ್ದ ಶ್ವಾನ

Kundapura ಅರಣ್ಯ ಪಾಲಾಗಿದ್ದ ಯುವಕ 8 ದಿನಗಳ ಬಳಿಕ ಪ್ರತ್ಯಕ್ಷ! ಕಾವಲಾಗಿ ಜತೆಗೇ ಇದ್ದ ಶ್ವಾನ

Belthangady ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳ ದಾಳಿ!

Belthangady ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳ ದಾಳಿ!

Mangaluru ಕೆವೈಸಿ ನೆಪ; 1.93 ಲಕ್ಷ ರೂ. ವಂಚನೆ

Mangaluru ಕೆವೈಸಿ ನೆಪ; 1.93 ಲಕ್ಷ ರೂ. ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ksrtc bus

KSRTC, BMTC ಗೆ ಪ್ರಶಸ್ತಿ

N M SURESH

Karnataka: ಫಿಲಂ ಚೇಂಬರ್‌ಗೆ ಸುರೇಶ್‌ ನೂತನ ಅಧ್ಯಕ್ಷ

CONGRESS FLAG IMP

Congress: ಸಂಭಾವ್ಯ ಅಭ್ಯರ್ಥಿ: ವೀಕ್ಷಕರ ನೇಮಕ

teacher student

Education: 1-10 ತರಗತಿಯ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

BJP FLAG 1

Politics: ಶೀಘ್ರವೇ ಬಿಜೆಪಿ ನಾಯಕರಿಗೆ ವರಿಷ್ಠರ ಬುಲಾವ್‌

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

ksrtc bus

KSRTC, BMTC ಗೆ ಪ್ರಶಸ್ತಿ

river…

Cauvery: ಕಾವೇರಿಗಾಗಿ ಪ್ರತಿಭಟನೆ, ಧರಣಿ, ಬಂದ್‌

Bantwal ಕಂದೂರು: ವಿದ್ಯುತ್‌ ಕಂಬಕ್ಕೆ ಬಸ್‌ ಢಿಕ್ಕಿ

Bantwal ಕಂದೂರು: ವಿದ್ಯುತ್‌ ಕಂಬಕ್ಕೆ ಬಸ್‌ ಢಿಕ್ಕಿ

Road Mishap ವಗ್ಗ: ಕಾರು-ಆಟೋ ರಿಕ್ಷಾ ಢಿಕ್ಕಿ; ಓರ್ವ ಸಾವು

Road Mishap ವಗ್ಗ: ಕಾರು-ಆಟೋ ರಿಕ್ಷಾ ಢಿಕ್ಕಿ; ಓರ್ವ ಸಾವು

N M SURESH

Karnataka: ಫಿಲಂ ಚೇಂಬರ್‌ಗೆ ಸುರೇಶ್‌ ನೂತನ ಅಧ್ಯಕ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.