
ಸತ್ಯ ಹೇಳಿದ ಮೊದಲಿಗ ಮಾಧುಸ್ವಾಮಿ: ಆಡಳಿತ ಪಕ್ಷದ ಕಾಲೆಳೆದ ಸಿದ್ದರಾಮಯ್ಯ
Team Udayavani, Sep 13, 2022, 9:30 PM IST

ವಿಧಾನಸಭೆ: “ಈ ಸರ್ಕಾರವನ್ನು ತಳ್ಳಿಕೊಂಡು ಹೋಗುತ್ತಿದ್ದೇವೆ’ ಎಂದು ಹೇಳಿದ ಸಚಿವ ಜೆ.ಸಿ. ಮಾಧುಸ್ವಾಮಿ “ಸತ್ಯ ಹೇಳಿದವರಲ್ಲಿ ಮೊದಲಿಗರು’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಡಳಿತ ಪಕ್ಷದ ಕಾಲೆಳೆದ ಪ್ರಸಂಗ ನಡೆಯಿತು.
ಪ್ರವಾಹದ ಕುರಿತು ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ, ವಿರೋಧ ಪಕ್ಷದ ನಾಯಕರು ಸತ್ಯ ಹೇಳಬೇಕು, ಏನೇನೂ ಸುಳ್ಳು ಹೇಳಬಾರದು. ಅವರನ್ನು ಹೇಳಿದ್ದನ್ನೆಲ್ಲ ಕೇಳಿಕೊಂಡು ಆಡಳಿತ ಪಕ್ಷ ಸುಮ್ಮನೆ ಕೂರುವುದು ಹೇಗೆ ಎಂದು ಸಚಿವ ಆರ್. ಅಶೋಕ್ ಹೇಳಿದರು.
ಅದಕ್ಕೆ, ನಾನು ಸತ್ಯ ಹೇಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಸರ್ಕಾರವೂ ಸಹ ಸತ್ಯ ಹೇಳುತ್ತಿದೆ ಎಂದು ಅಶೋಕ್ ತಿಳಿಸಿದರು.
ಹೌದು..ಮಾಧುಸ್ವಾಮಿಯವರು ಸತ್ಯವನ್ನೇ ಹೇಳಿದ್ದಾರೆ. ಈ ಸರ್ಕಾರವನ್ನು ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು. ಸತ್ಯ ಹೇಳಿದವರಲ್ಲಿ ಮಾಧುಸ್ವಾಮಿ ಮೊದಲಿಗರು ಎಂದು ಕಾಲೆಳೆದರು.
ನೀವು ಯಾವತ್ತೂ ಸುಳ್ಳು ಹೇಳಿಲ್ವಾ ಎಂದು ಅಶೋಕ್ ಪ್ರಶ್ನಿಸಿದರು. ನಾನು ನೂರಕ್ಕೆ ನೂರು ಸತ್ಯ ಹೇಳುತ್ತೇನೆ ಎಂದು ಹೇಳಲ್ಲ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಸುಳ್ಳು ಹೇಳುವ ಪ್ರಸಂಗಗಳು ಎದುರಾಗುತ್ತವೆ. ಆದರೆ, ಯಾರಿಗಾದರೂ ಒಳ್ಳೆಯದು ಮಾಡಲು, ಅನುಕೂಲವಾಗಲು ಸುಳ್ಳು ಹೇಳುತ್ತೇನೆಯೇ ಹೊರತು, ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
