ಟ್ರಾಫಿಕ್ ಪೊಲೀಸ್ ಆದ ಸಚಿವ ಖಾದರ್!; ವಿಡಿಯೋ ವೈರಲ್
Team Udayavani, Jan 13, 2019, 6:42 AM IST
ಮಂಗಳೂರು: ಭಾರೀ ಟ್ರಾಫಿಕ್ ಸಮಸ್ಯೆ ಕಂಡು ಸಚಿವ ಯು.ಟಿ.ಖಾದರ್ ಅವರು ಟ್ರಾಫಿಕ್ ಪೊಲೀಸ್ ರೀತಿಯಲ್ಲಿ ಕೆಲಸ ನಿರ್ವಹಿಸಿ ಸುದ್ದಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ಸಚಿವರ ಸರಳತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಶನಿವಾರ ಮಧ್ಯಾಹ್ನ ಪಂಪ್ವೆಲ್ ವೃತ್ತದಲ್ಲಿ ಟ್ರಾಫಿಕ್ ದಟ್ಟಣೆಯಲ್ಲಿ 10 ನಿಮಿಷಕ್ಕೂ ಹೆಚ್ಚು ಕಾಲ ಸಿಲುಕಿ ಸ್ವತಃ ಖಾದರ್ ಅವರೇ ಪರದಾಡಬೇಕಾಯಿತು. ಕೂಡಲೇ ಕಾರಿನಿಂದ ಇಳಿದ ಸಚಿವರು ವಾಹನಗಳು ಸುಗಮವಾಗಿ ಸಾಗಲು ಅನುಕೂಲ ಮಾಡಿಕೊಟ್ಟರು.
ಪಂಪ್ವೆಲ್ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದ್ದು, ಸಂಚಾರದಟ್ಟಣೆಯಿಂದಾಗಿ ವಾಹನ ಸವಾರರು ದಿನ ನಿತ್ಯ ಪರದಾಡಬೇಕಾಗಿದೆ.