ಮದರ್‌ಡೇರಿ ದೆಹಲಿಗೆ ರಾಜ್ಯದ ನಂದಿನಿ ಹಾಲು

Team Udayavani, Jun 11, 2019, 3:06 AM IST

ಬೆಂಗಳೂರು: ನ್ಯಾಷನಲ್‌ ಮಿಲ್ಕ್ ಗ್ರಿಡ್‌ ಕಾರ್ಯಕ್ರಮದಡಿಯಲ್ಲಿ ದೆಹಲಿ ಮದರ್‌ಡೇರಿ ಸಂಸ್ಥೆಗೆ ಪ್ರತಿನಿತ್ಯ ಸುಮಾರು 2 ಲಕ್ಷ ಲೀಟರ್‌ ನಂದಿನಿ ಹಸುವಿನ ಹಾಲನ್ನು ಪೂರೈಸಲು ಬೇಡಿಕೆ ಬಂದಿದೆ.

ಮೊದಲ ಕಂತಾಗಿ ಮಾ.8 ರಂದು 43 ಸಾವಿರ ಲೀಟರ್‌ ಸಾಂಧ್ರಿಕರಿಸಿದ ನಂದಿನಿ ಹಸುವಿನ ಹಾಲಿನ (1 ಲಕ್ಷ ಲೀ.) ರೈಲ್ವೆ ಟ್ಯಾಂಕರನ್ನು ರವಾನಿಸಿ ಸರಬರಾಜು ಮಾಡಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಮಾರುಕಟ್ಟೆ ವಿಭಾಗದ ನಿರ್ದೇಶಕ ಮೃತ್ಯುಂಜಯ. ಟಿ. ಕುಲಕರ್ಣಿ ತಿಳಿಸಿದ್ದಾರೆ.

ಈ ಹಿಂದೆ 1990ರಲ್ಲಿ ಮದರ್‌ಡೇರಿ ದೆಹಲಿ ಸಂಸ್ಥೆಗೆ ರೈಲು ಟ್ಯಾಂಕರ್‌ಗಳ ಮೂಲಕ ಪಶ್ಚಿಮ ಬಂಗಾಳದ ಕೊಲ್ಕತ್ತ ನಗರಕ್ಕೆ ನಂದಿನಿ ಹಾಲು ಸರಬರಾಜು ಮಾಡಲಾಗುತ್ತಿತ್ತು. 29 ವರ್ಷಗಳ ಬಳಿಕ ಮತ್ತೆ ಈ ಪೂರೈಕೆ ಆರಂಭಿಸಲಾಗಿದೆ. ರೆನುಗುಂಟಾ ರೈಲ್ವೆ ನಿಲ್ದಾಣದಿಂದ ಸುಮಾರು 1 ಲಕ್ಷ ಲೀಟರ್‌ ಪೂರೈಸಲಾಗಿದೆ.

ದೆಹಲಿ ಮದರ್‌ಡೇರಿ ಸಂಸ್ಥೆ ರಾಜಧಾನಿಯಲ್ಲಿ ಹಸುವಿನ ಹಾಲನ್ನು ಸ್ಯಾಚೆ (ಚಿಲ್ಲರೆ ಪೊಟ್ಟಣ) ರೂಪದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದೆ. ದೆಹಲಿಯ ಸುತ್ತಮುತ್ತ ಗುಣಮಟ್ಟದ ಹಸುವಿನ ಹಾಲು ದೊರಕುತ್ತಿಲ್ಲವಾದುದರಿಂದ, ದೇಶದ 2ನೇ ಅತಿದೊಡ್ಡ ಹಾಲು ಉತ್ಪಾದಕ ಮಹಾಮಂಡಳ ಕಹಾಮಗೆ ಬೇಡಿಕೆ ಬಂದಿದೆ. ರಾಜ್ಯದ ರೈತರು ಉತ್ಪಾದಿಸಿದ ಹಾಲು ದೆಹಲಿ ಮಾರುಕಟ್ಟೆಯನ್ನು ಪ್ರವೇಶಿಸಿರುವುದು ಹರ್ಷದಾಯಕ ಸಂಗತಿ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ