ಕೋಲಾರದಿಂದಲೇ ಸ್ಪರ್ಧೆಗೆ ಒತ್ತಡ: ಸಿದ್ದು ನಿವಾಸದ ಮುಂದೆ ಧರಣಿ

ಕಡೂರು, ಕುಷ್ಟಗಿ, ಕೊಪ್ಪಳದಿಂದ ಸ್ಪರ್ಧೆ ಗುಸು ಗುಸು

Team Udayavani, Mar 22, 2023, 7:20 AM IST

ಕೋಲಾರದಿಂದಲೇ ಸ್ಪರ್ಧೆಗೆ ಒತ್ತಡ: ಸಿದ್ದು ನಿವಾಸದ ಮುಂದೆ ಧರಣಿ

ಬೆಂಗಳೂರು: “ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರದಲ್ಲಿ ಇಲ್ಲಿಯವರೆಗೆ ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಇದೀಗ ಪತ್ನಿ ಹಾಗೂ ಪುತ್ರನನ್ನು ಕೇಳಿ ಹೇಳುತ್ತೇನೆ’ ಎಂದು ಮತ್ತೆ ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ.

ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯಿಸಿ ತಮ್ಮ ನಿವಾಸದ ಮುಂದೆ ಧರಣಿ ಕುಳಿತಿದ್ದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೈಕಮಾಂಡ್‌ ನನಗೆ ಕೋಲಾರದಿಂದ ಸ್ಪರ್ಧಿಸುವುದು ಬೇಡ ಎಂದೂ ಹೇಳಿಲ್ಲ.

ನಾನೂ ಕೋಲಾರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದೂ ಹೇಳಿಲ್ಲ. ಆದರೆ, ಶೇ.1 ರಷ್ಟೂ ರಿಸ್ಕ್ ತೆಗೆದುಕೊಳ್ಳುವುದು ಬೇಡ. ನೀವು ಕ್ಷೇತ್ರದಲ್ಲಿ ಹೆಚ್ಚು ದಿನ ಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಯೋಚಿಸಿ ಎಂದು ಹೇಳಿದ್ದಾರೆ. ಅದು ಬಿಟ್ಟರೆ ಬೇರೇನೂ ಇಲ್ಲ. ಮೈಸೂರಿಗೆ ಹೋಗುತ್ತಿದ್ದೇನೆ, ಪತ್ನಿ ಹಾಗೂ ಪುತ್ರನನ್ನು ಕೇಳುತ್ತೇನೆ ಎಂದು ಹೇಳಿದರು.

ಮತ್ತೊಂದೆಡೆ ಮೈಸೂರಿನಲ್ಲಿ ಹೈಕಮಾಂಡ್‌ ಹೇಳಿದ ಕಡೆ ಸ್ಪರ್ಧೆ ಮಾಡುತ್ತೇನೆ. ರಾಜಕಾರಣದಲ್ಲಿ ಏನಾದರೂ ಆಗಬಹುದು. ನಾಳೆಯೇ ಹೈಕಮಾಂಡ್‌ ಗೊಂದಲಕ್ಕೆ ತೆರೆ ಎಳೆಯಲೂಬಹುದು ಎಂದೂ ತಿಳಿಸಿದರು.

ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ, ಈ ಬಾರಿ ವರುಣಾದಲ್ಲೇ ಸ್ಪರ್ಧೆ ಮಾಡಲಿದ್ದಾರೆ ಎಂದೂ ಹೇಳಿದ್ದು, ಒಟ್ಟಾರೆ, ಸಿದ್ದರಾಮಯ್ಯ ಸ್ಪರ್ಧೆ ಕುತೂಹಲ ಮೂಡಿಸಿದೆ. ಈ ನಡುವೆ, ಕಡೂರು, ಕುಷ್ಟಗಿ, ಕೊಪ್ಪಳದಿಂದ ಸ್ಪರ್ಧೆ ಮಾಡಲಿದ್ದಾರೆಂಬ ಮಾತುಗಳೂ ಕೇಳಿಬರುತ್ತಿವೆ.

ಧರಣಿ: ಬೆಳಗ್ಗೆಯೇ ಕೋಲಾರದಿಂದ ದ್ವಿಚಕ್ರ ವಾಹನ, ಕಾರು, ಟೆಂಪೋಗಳಲ್ಲಿ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಕುಮಾರಪಾರ್ಕ್‌ ಬಳಿಯ ಸಿದ್ದರಾಮಯ್ಯ ನಿವಾಸದ ಮುಂದೆ ಧರಣಿ ಕುಳಿತರು. ನಂತರ ನಿವಾಸದ ಒಳಗೆ ಹೋಗಿ ಆವರಣದಲ್ಲಿ ಧರಣಿ ನಡೆಸಿ ಬೇಕೇ ಬೇಕು ಸಿದ್ದರಾಮಯ್ಯ ಬೇಕು ಎಂದು ಘೋಷಣೆ ಕೂಗಿದರು.

ಕೆಪಿಸಿಸಿ ಕಚೇರಿಯ ಸಭೆಗೆ ಹೋಗಬೇಕಾಗಿದ್ದ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಬಂದು, ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಕಾರ್ಯಕರ್ತರು ಕೇಳದೆ ಪದೇ ಪದೇ ನೀವು ಬರಬೇಕು. ಕೊಟ್ಟ ಮಾತು ತಪ್ಪಬೇಡಿ ಎಂದು ಆಗ್ರಹಿಸಿದರು.

ಹೈಡ್ರಾಮಾ: ಈ ನಡುವೆ, ಸಿದ್ದರಾಮಯ್ಯ ನಿವಾಸದ ಮುಂದೆ ಮಂಗಳವಾರ ಹೈ ಡ್ರಾಮಾ ನಡೆಯಿತು. ಕೋಲಾರದಿಂದ ಆಗಮಿಸಿದ್ದ ಕಾರ್ಯಕರ್ತರು ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದರು. ಅಲ್ಲಿದ್ದ ನಾಯಕರು ತಡೆದರು. ಸಿದ್ದರಾಮಯ್ಯ ಅವರು ಬರಲೇಬೇಕು, ಅವರು ಒಪ್ಪಿಗೆ ಕೊಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಹಿಂದೆ ಸರಿಯುತ್ತಿಲ್ಲ. ಅವರು ಬಯಸಿದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ವರುಣಾ, ಕೋಲಾರ, ಬಾದಾಮಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಅನುಕೂಲ ನೋಡಿಕೊಂಡು ಸ್ಪರ್ಧೆ ಮಾಡಲಿದ್ದಾರೆ, ಅಂತಿಮ ತೀರ್ಮಾನ ಅವರದ್ದೇ.
– ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಟಾಪ್ ನ್ಯೂಸ್

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-dsad

Train ಅವಘಡ; ಬಾಲಸೋರ್ ನಲ್ಲಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

1-sadasd

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು

MLA Vedavyasa Kamath

ಪಾಲಿಕೆ ವ್ಯಾಪ್ತಿಯ ಅನುದಾನ ತಡೆಯಿಂದ ತೀವ್ರ ಸಮಸ್ಯೆ: ಶಾಸಕ ವೇದವ್ಯಾಸ ಕಾಮತ್

nalin kumar kateel

ಗ್ಯಾರಂಟಿ ಯೋಜನೆಗೆ ಹಣದ ಕ್ರೋಢೀಕರಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ನಳಿನ್ ಕಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

1-sadasd

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು

congress

Congress Guarantee ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ!

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ…: ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ…: ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Siddu-DKSHI

Congress ಗ್ಯಾರಂಟಿ; 200 ಯೂನಿಟ್ ವಿದ್ಯುತ್ ಫ್ರೀ ,ಗೃಹ ಲಕ್ಷ್ಮೀ ಜಾರಿ; ವಿವರ ಇಲ್ಲಿದೆ

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-dsad

Train ಅವಘಡ; ಬಾಲಸೋರ್ ನಲ್ಲಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-WWQEWQ

Harapanahalli ಮೂವರು ಅಂತರ್ ರಾಜ್ಯ ಕಳ್ಳರ ಬಂಧನ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ